'ಟೈಮ್ ಸೆನ್ಸ್ ಇಲ್ವಾ'..? ಚುನಾವಣಾ ಸಿಬ್ಬಂದಿಗೆ ಕ್ಲಾಸ್..!
ಹುಣಸೂರು ವಿಧಾನಸಭಾ ಉಪ ಚುನಾವಣಾ ಹಿನ್ನಲೆ, ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಮಸ್ಟರಿಂಗ್ ಆರಂಭವಾಗಿದ್ದು, ಚುನಾವಣಾ ಕರ್ತವ್ಯಕ್ಕೆ ತಡವಾಗಿ ಬಂದು ಚುನಾವಣಾ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು(ಡಿ.04): ಹುಣಸೂರು ವಿಧಾನಸಭಾ ಉಪ ಚುನಾವಣಾ ಹಿನ್ನಲೆ, ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಮಸ್ಟರಿಂಗ್ ಆರಂಭವಾಗಿದ್ದು, ಚುನಾವಣಾ ಕರ್ತವ್ಯಕ್ಕೆ ತಡವಾಗಿ ಬಂದು ಚುನಾವಣಾ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಸೆಂಬರ್ 5ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿ. ದೇವರಾಜು ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ. ಒಟ್ಟು 274 ಮತಗಟ್ಟೆಗಟ್ಟೆಗಳಿದ್ದು, ಇವುಗಳಲ್ಲಿ 50 ಸೂಕ್ಷ್ಮ, 224 ಸಾಮಾನ್ಯ ಮತಗಟ್ಟೆಗಳಿವೆ. ಮತಗಟ್ಟೆಗೆ ಅಧಿಕಾರಿ, ಸಿಬ್ಬಂದಿ ತೆರಳಲು 45 ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ
8 ಕಡೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಿಕೊಂಡ ಚುನಾವಣಾ ಅಧಿಕಾರಿಗಳು ಮತದಾನ ಕಾರ್ಯಕ್ಕೆ 1229 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಳಸಿದ್ದಾರೆ. ಸಾಮಾನ್ಯ ಮತಗಟ್ಟೆಗೆ ಓರ್ವ, ಅತಿ ಸೂಕ್ಷ್ಮ ಮತಗಟ್ಟೆಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಮಾರ್ಚ್‌ನಿಂದ ಗೋಲ್ಡನ್ ಚ್ಯಾರಿಯೆಟ್ ರೈಲು ಸಂಚಾರ
ಹುಣಸೂರು ಕಾಡಂಚಿನ 6 ಹಾಡಿಗಳಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಪಿಂಕ್ ಮತಗಟ್ಟೆ ಸ್ಥಾಪನೆ ಮಾಡಿಲ್ಲ. ಹುಣಸೂರು ಕ್ಷೇತ್ರದಲ್ಲಿ ಒಟ್ಟು 2,27,974 ಮತದಾರರು, 4 ಮಂದಿ ಇತರೆ ಮತದಾರರು ಇದ್ದಾರೆ. ಪುರುಷ ಮತದಾರರು 1,14,146, ಮಹಿಳಾ ಮತದಾರರು 1,12,770 ಇದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಮಸ್ಟರಿಂಗ್, ಸ್ಟ್ರಾಂಗ್ ರೂಂ ಸ್ಥಳದಲ್ಲಿ ಪೊಲೀಸ್ ತುಕಡಿ, ಸೇನಾ ಭದ್ರತೆ ಒದಗಿಸಲಾಗಿದೆ.
ಸಿಬ್ಬಂದಿಗೆ ಕ್ಲಾಸ್..!
ಸಮಯಕ್ಕೆ ಸರಿಯಾಗಿ ಬರದ ಸಿಬ್ಬಂದಿಗಳಿಗೆ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ಹುಣಸೂರು ಚುನಾವಣಾ ಮಸ್ಟರಿಂಗ್ ವೇಳೆ ಸಿಬ್ಬಂದಿಗಳಿಗೆ ಅಧಿಕಾರಿಗಳು ವಾರ್ನ್ ಮಾಡಿದ್ದಾರೆ. ಚುನಾವಣಾ ಅಧಿಕಾರಿ, ಟೈಮ್ ಸೆನ್ಸ್ ಇಲ್ವಾ, ಸಸ್ಪೆಂಡ್ ಮಾಡ್ತೀನಿ ಅಂತ ಸಿಬ್ಬಂದಿಗೆ ಗದರಿದ್ದು, ಚುನಾವಣಾ ನೋಡಲ್ ಅಧಿಕಾರಿಯ ವಾರ್ನಿಂಗ್‌ಗೆ ಸಿಬ್ಬಂದಿ ಸುಸ್ತಾಗಿದ್ದಾರೆ.
ಮಂಡ್ಯ: 450 ಹೋಂ ಗಾರ್ಡ್, 600 ಸಿವಿಲ್ ಪೊಲೀಸ್ ಸೇರಿ ಹೆಚ್ಚಿನ ಭದ್ರತೆ
ಹುಣಸೂರು ಮಸ್ಟರಿಂಗ್ ಕಾರ್ಯದ ಸ್ಥಳಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರು ಭೇಟಿ ನೀಡಿದ್ದಾರೆ. ಡಿ ದೇವರಾಜು ಅರಸು ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ
ಅಮರ್ ಕುಶ್ವಾಂ ಮಸ್ಟರಿಂಗ್ ಕಾರ್ಯವನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.