ಮಾರ್ಚ್‌ನಿಂದ ಗೋಲ್ಡನ್ ಚಾರಿಯೆಟ್ ರೈಲು ಸಂಚಾರ
2020 ರ ಮಾರ್ಚ್ ತಿಂಗಳಿಂದ ಗೋಲ್ಡನ್ ಚಾರಿಯೆಟ್ ರೈಲಿನ ಸಂಚಾರ ಆರಂಭ|ಗೋಲ್ಡನ್ ಚ್ಯಾರಿಯೆಟ್‌ನಲ್ಲಿ ಇತಿಹಾಸದ ಕುರಿತಂತೆ ಹೊಸ ವಿವರಗ ಸೇರ್ಪಡೆ|ರಾಜ್ಯದ ಇತಿಹಾಸ, ಸಂಸ್ಕೃತಿ, ವನ್ಯಜೀವಿ ಮತ್ತು ಪ್ರಕೃತಿಯ ತಾಣಗಳಿಗೆ ಕರೆದೊಯ್ಯಲಿದೆ|
ಹುಬ್ಬಳ್ಳಿ[ಡಿ.04]: ಮುಂದಿನ ಮಾರ್ಚ್ ತಿಂಗಳಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೋಲ್ಡನ್ ಚಾರಿಯೆಟ್ ರೈಲಿನ ಸಂಚಾರ ಆರಂಭ ಬಹುತೇಕ ಖಚಿತವಾಗಿದೆ. ಈ ಕುರಿತಂತೆ ಮಹತ್ತರ ಬೆಳವಣಿಗೆಯಾಗಿದ್ದು, ಮಂಗಳವಾರ ನೈಋುತ್ಯ ರೈಲ್ವೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೋಲ್ಡನ್ ಚಾರಿಯೆಟ್ ರೈಲಿನ ಸಂಚಾರಕ್ಕೆ ನೈಋುತ್ಯ ರೈಲ್ವೆ ಮಹಾಪ್ರಬಂಧಕ ಅಜಯ್ ಕುಮಾರ್ ಸಿಂಗ್ ಮತ್ತು ಪ್ರಧಾನ ಮುಖ್ಯಸ್ಥ ಶಿವರಾಜ್ ಸಿಂಗ್ ಅವರ ಸಮ್ಮುಖದಲ್ಲಿ ಸಹಿ ಹಾಕಿದೆ.
ಎಸ್‌ಡಬ್ಲೂಆರ್ ಪರವಾಗಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎನ್. ಹರಿಕುಮಾರ್ ಡಿ.ವೈ. ಮತ್ತು ಪ್ರವಾಸೋದ್ಯಮ ನಿಗಮದ ಪರವಾಗಿ ಡಾ. ನಾಗರಾಜ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇವುಗಳ ಜೊತೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಒಪ್ಪಂದಕ್ಕೆ ಸಹಿ ಹಾಕಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗೋಲ್ಡನ್ ಚಾರಿಯೆಟ್‌ನಲ್ಲಿ ಇತಿಹಾಸದ ಕುರಿತಂತೆ ಹೊಸ ವಿವರಗಳನ್ನು ಸೇರ್ಪಡೆ ಮಾಡಲಾಗಿದೆ. ರಾಜ್ಯದ ಇತಿಹಾಸ, ಸಂಸ್ಕೃತಿ, ವನ್ಯಜೀವಿ ಮತ್ತು ಪ್ರಕೃತಿಯ ತಾಣಗಳಿಗೆ ಕರೆದೊಯ್ಯಲಿದೆ. ಗೋಲ್ಡನ್ ಚಾರಿಯೆಟ್ ಯಶವಂತಪುರ (ವೈಪಿಆರ್) - ವಾಸ್ಕೊ-ಡ-ಗಾಮಾ (ವಿಎಸ್‌ಜಿ)ಯಿಂದ ಮೈಸೂರು, ಶ್ರವಣಬೆಳಗೋಳ, ಹೊಸಪೇಟೆ, ಬಾದಾಮಿಯಲ್ಲಿ 8ದಿನ ಹಾಗೂ 7 ರಾತ್ರಿಗಳು ಸಂಚರಿಸಲಿದೆ. ಇದು ಮೈಸೂರು, ಕಬಿನಿ ನದಿಯ ಹಿನ್ನೀರು, ಗೋವಾದ ಅದ್ಭುತ ದೇವಾಲಯಗಳು ಮತ್ತು ಚರ್ಚ್, ಸುಂದರ ಪ್ರಕೃತಿ ತಾಣ, ಹಳೆಬಿಡು ಮತ್ತು ಬೇಲೂರು, ಕೃಷ್ಣದೇವರಾಯ ಸಾಮ್ರಾಜ್ಯ, ಬಾದಾಮಿ ಗುಹೆಗಳು, ಐಹೊಳೆ ಮತ್ತು ಪಟ್ಟದಕಲ್ಲುಗಳನ್ನು ಸಂಪರ್ಕಿಸಲಿದೆ.
ಎರಡನೇ ಗೋಲ್ಡನ್ ಚಾರಿಯೆಟ್ ರೈಲು ಯಶವಂತಪುರ (ವೈಪಿಆರ್) - ತಿರುವನಂತಪುರಂ (ಟಿವಿಸಿ) 8ದಿನದ ಕಾಲ ಚೆನ್ನೈ, ಮಹಾಬಲಿಪುರಂ, ಪುದುಚೇರಿ, ತಂಜಾವೂರು, ಮಧುರೈ, ಕನ್ಯಾಕುಮಾರಿ, ಕೊಚ್ಚಿ ಮತ್ತು ತಿರುವನಂತಪುರಂ ದೇವಾಲಯಗಳ ಅದ್ಭುತ ಹಳೆಯ ವೈಭವವನ್ನು ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು.