ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ್ ರೇಪ್ ಕೇಸ್‌ಗೂ ಉಂಟು, ಸಚಿವ ಮಂಕಾಳು ವೈದ್ಯನ 2 ಕೋಟಿ ರೂ. ಡೀಲ್ ನಂಟು!
ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ್ ಹರಿಕಾಂತ್ ಅವರ ಮೇಲಿನ ಅತ್ಯಾಚಾರ ಕೇಸ್‌ಗೂ ಸಚಿವ ಮಂಕಾಳು ವೈದ್ಯನ 2 ಕೋಟಿ ರೂ. ಡೀಲ್‌ಗೂ ನಂಟಿದೆ ಎಂದು ಉದ್ಯಮಿ ಗೌತಮಿ ಗಣೇಶ್ ಆರೋಪ ಮಾಡಿದ್ದಾರೆ.
ಉತ್ತರ ಕನ್ನಡ (ಏ.16): ರಾಜ್ಯದ ಕರಾವಳಿ ತೀರ, ಪ್ರವಾಸೋದ್ಯಮ ಹಾಟ್ ಸ್ಪಾಟ್ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಮುರುಡೇಶ್ವರದ ನೇತ್ರಾಣಿ ದ್ವೀಪದ ಬಳಿ ಉದ್ಯಮ ನಡೆಸುತ್ತಿರುವ ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ್ ಹರಿಕಾಂತ್ ಅತ್ಯಾಚಾರ ಕೇಸ್ ಮೇಲೆ ದಾಖಲಾಗಿದೆ. ಆದರೆ, ಈ ಅತ್ಯಾಚಾರ ಪ್ರಕರಣ ಸಚಿವ ಮಂಕಾಳು ವೈದ್ಯ ಅವರು ಬೇಡಿಕೆಯಿಟ್ಟ 2 ಕೋಟಿ ರೂ. ಕೊಡದ ಹಿನ್ನೆಲೆಯಲ್ಲಿ ನಮ್ಮ ವಿರುದ್ಧ ಮಾಡಿದ ಷಡ್ಯಂತ್ರವಾಗಿದೆ ಎಂದು ಉದ್ಯಮಿ ಗಣೇಶ್ ಅವರ ಪತ್ನಿ ಗೌತಮಿ ಗಣೇಶ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಚಿವ ಮಂಕಾಳು ವೈದ್ಯರಿಗೆ ಪ್ರಶ್ನೆ ಮಾಡಿದರೆ ಮಾಧ್ಯಮದವರೇ ಡೀಲ್ ಆಗಿದ್ದೀರಿ ಎಂದು ಗೊಣಗುತ್ತಾ ಸುದ್ದಿಗೋಷ್ಠಿಯಿಂದ ಹೊರ ನಡೆದ ಪ್ರಸಂಗ ಮಂಗಳವಾರ ನಡೆದಿದೆ.
ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅವರು ಮಂಗಳವಾರ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಗಣೇಶ್ ಅವರಿಂದ 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದೀರಿ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ನಿಮ್ಮ ಉತ್ತರವೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಸಚಿವ ಮಂಕಾಳು ವೈದ್ಯ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿ ಅಲ್ಲಿಂದ ಹೊರನಡೆಯಲು ಮುಂದಾದರು. ಮಾಧ್ಯಮದವರೇ ಉದ್ಯಮಿ ಗಣೇಶ್ ಬಳಿ 2 ಕೋಟಿ ರೂ.ಗೆ ಡೀಲ್ ಆಗಿದ್ದಾರೆ ಎಂದು ಗೊಣಗುತ್ತಾ ಪತ್ರಿಕಾ ಭವನದಿಂದ ಹೊರನಡೆದರು.
ಬೆಂಗಳೂರು: ರಸ್ತೆ ಬದಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಸುಪಾರಿ ಕಿಲ್ಲರ್ಸ್ ಬಂಧಿಸಿದ ನೈಟ್ ಬೀಟ್ ಪೊಲೀಸರು!
ಇನ್ನು ಪ್ರಕರಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಉದ್ಯಮಿ ಗಣೇಶ್ ಅವರ ಪತ್ನಿ ಗೌತಮಿ ಗಣೇಶ್ ಅವರು, ಮುರುಡೇಶ್ವರದ ಪಕ್ಕದ ನೇತ್ರಾಣಿ ದ್ವೀಪದ ಬಳಿ ಅಡ್ವೆಂಚರ್ಸ್ ನಡೆಸಲು ಟೆಂಡರ್ ನವೀಕರಣಕ್ಕಾಗಿ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅವರು ಬರೋಬ್ಬರಿ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ಹಣ ಕೊಡದ ಹಿನ್ನೆಲೆಯಲ್ಲಿ ನನ್ನ ಪತಿಯ ಮೇಲೆ ಅತ್ಯಾಚಾರದ ಕೇಸ್ ಸಚಿವರು ಮಾಡಿಸಿದ್ದಾರೆ. ಹಣ ಕೊಡದೇ ಇದ್ದಿದಕ್ಕೆ ಗಣೇಶ್ ಮನೆ ಕೆಲಸಕ್ಕೆ ಬರುತ್ತಿದ್ದ ಯುವತಿಯನ್ನೇ ಗಾಳವನ್ನಾಗಿ ಮಾಡಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಕೇಸ್ ದಾಖಲಿಸಿದ್ದಾರೆ ಎಂದು ಗಣೇಶ್ ಪತ್ನಿ ಆರೋಪಿಸಿದ್ದರು.
21 ವರ್ಷದ ಯುವತಿ ಅತ್ಯಾಚಾರಕ್ಕೆ ಒಳಗಾಗಿ ಮಗುವನ್ನೂ ಹೆತ್ತಳು: ಕಳೆದ ಎರಡೂವರೆ ವರ್ಷದಿಂದ ಉದ್ಯಮಿ ಗಣೇಶ್ ಮನೆ ಕೆಲಸಕ್ಕೆ 21 ವರ್ಷದ ಯುವತಿ ಬರುತ್ತಿದ್ದಳು. ಕಳೆದ 2023ರ ಜೂನ್ ತಿಂಗಳಲ್ಲಿ ಯುವತಿ ಒಬ್ಬಳೇ ಮನೆಯಲ್ಲಿರುವಾಗ ಉದ್ಯಮಿ ಗಣೇಶ್ ಆಕೆಯನ್ನು ಒತ್ತಾಯಪೂರ್ವಕವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಜೊತೆಗೆ, ಈ ವಿಚಾರವನ್ನು ಯಾರಿಗೂ ಹೇಳದಂತೆ ಗೌಪ್ಯತೆ ಕಾಪಾಡುವಂತೆ ಜೀವ ಬೆದರಿಕೆ ಒಡ್ಡುತ್ತಾ 5-6 ಬಾರಿ ಅತ್ಯಾಚಾರ ಮಾಡಿದ್ದಾರೆ. ಇದರಿಂದಾಗಿ ಗರ್ಭಿಣಿಯಾದ ಯುವತಿ ಏ.7ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ನೇತ್ರಾಣಿ ಅಡ್ವೆಂಚರ್ಸ್ ಮಾಲಕ ಗಣೇಶ್ ಹರಿಕಾಂತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಗಣೇಶ್ ಹರಿಕಾಂತ್‌ನನ್ನು ಬಂಧಿಸಿದ್ದಾರೆ.
2 ಕೋಟಿ ರೂ. ಕೊಡದಿದ್ದರೆ ಉದ್ಯಮಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ: ಇನ್ನು ಉದ್ಯಮಿ ಗಣೇಶ್ ಅವರು ತಾವು ಅತ್ಯಾಚಾರ ಮಾಡಿಲ್ಲ. ಬೇಕಾದರೆ ಮಗುವಿನ ಡಿಎನ್‌ಎ ಪರೀಕ್ಷೆ ಮಾಡುವಂತೆಯೂ ಒತ್ತಾಯಿಸಿದ್ದಾರೆ. ಬೇಕಂತಲೇ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪತಿಯನ್ನು ಸಿಲುಕಿಸಿ ಬಂಧಿಸುವಂತೆ ಮಾಡಲಾಗಿದೆ. ಸಚಿವರು ಕಳೆದ ಮೂರು ತಿಂಗಳಿನಿಂದ 2 ಕೋಟಿ ರೂ. ಕೊಡುವಂತೆ ಪೀಡಿಸುತ್ತಿದ್ದರು. 2 ಕೋಟಿ ರೂ. ಕೊಡದೆ ಇದ್ರೆ ಕೆಲಸಕ್ಕೆ ಅಡ್ಡಿ ಮಾಡುವುದಾಗಿ ಸಚಿವರು ನನ್ನ ಗಂಡನಿಗೆ ಬೆದರಿಕೆ ಹಾಕಿದ್ದರು. ಅದರಂತೆ ಉದ್ಯಮಕ್ಕೆ ಅಡ್ಡಿ ಮಾಡಲು ಮುಂದಾಗಿದ್ದರು.
ಮೀನು ಹಾಗೂ ಮೀನುಗಾರರ ಅಭಿವೃದ್ಧಿಗಾಗಿ ಕೃತಕ ಬಂಡೆ ಸಾಲುಗಳ ಅಳವಡಿಕೆಗೆ ಚಾಲನೆ
ಟೆಂಡರ್ ತಪ್ಪಿಸುವ ಯತ್ನ ವಿಫಲವಾಗಿತ್ತು: ಜನವರಿ ತಿಂಗಳಿನಿಂದ ನೇತ್ರಾಣಿ ಅಡ್ವೆಂಚರ್ಸ್ ನಡೆಸುವುದಕ್ಕೆ ಸರ್ಕಾರದ ಟೆಂಡರ್ ತಪ್ಪಿಸಲು ಸಚಿವ ಮಂಕಾಳು ವೈದ್ಯ ಕುತಂತ್ರ ಮಾಡುತ್ತಿದ್ದರು. ನ್ಯಾಯಯುತವಾಗಿ ದಾಖಲೆಗಳು ಇದ್ದಿದಕ್ಕೆ ಹೈಕೋರ್ಟ್ ಹೋಗಿ ಸಮಸ್ಯೆ ಬಗೆಹರಿಸಿಕೊಂಡಿದ್ದೆವು. ಆದರೆ, ನ್ಯಾಯಾಲಯದಲ್ಲೂ ನಾವು ಗೆದ್ದು ನೇತ್ರಾಣಿ ಅಡ್ವೆಂಚರ್ಸ್ ನಡೆಸುತ್ತಿರುವುದನ್ನು ಸಹಿಸಿಕೊಳ್ಳೋಕೆ ಆಗದೆ, ಯುವತಿ ಮೇಲಿನ ಅತ್ಯಾಚಾರದ ಕೇಸ್ ದಾಖಲು ಮಾಡಿಸಿದ್ದಾರೆ. ಮಾನಸಿಕವಾಗಿ ನನ್ನ ಗಂಡನನ್ನು ಕುಗ್ಗಿಸಲು ಈ ರೀತಿ ಮಾಡಿದ್ದಾರೆ ಎಂದು ಗೌತಮಿ ಗಣೇಶ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.