ಬೆಂಗಳೂರು: ರಸ್ತೆ ಬದಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಸುಪಾರಿ ಕಿಲ್ಲರ್ಸ್ ಬಂಧಿಸಿದ ನೈಟ್ ಬೀಟ್ ಪೊಲೀಸರು!
ಬೆಂಗಳೂರಿನಲ್ಲಿ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಸುಪಾರಿ ಕೊಲೆ ಮಾಡಲು ಚಿಕ್ಕಜಾಲ ರಸ್ತೆ ಬಳಿ ಅಡಗಿ ಕುಳಿತಿದ್ದ ಹಂತಕರನ್ನು ರಾತ್ರಿ ಗಸ್ತು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.
ಬೆಂಗಳೂರು (ಏ.16): ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೇವಲ 3 ಲಕ್ಷ ರೂ. ಹಣವನ್ನು ಪಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಮಂಕಿ ಕ್ಯಾಪ್ ಧರಿಸಿ ಪೊದೆಯಲ್ಲಿ ಕಾದು ಕುಳಿತಿದ್ದ ಮೂವರು ಅಪ್ತಾಪ್ತರು ಸೇರಿದಂತೆ 6 ಮಂದಿ ಸುಪಾರಿ ಕಿಲ್ಲರ್ಸ್‌ಗಳನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರು ದುಡಿಯುವವರಿಗೆ ಇರುವ ಒಂದು ದೊಡ್ಡ ನೆಲೆಯಾಗಿದೆ. ಇಲ್ಲಿ ಬಹುತೇಕರು ದುಡಿಮೆ ಹಾಗೂ ದುಡ್ಡಿನ ಹಿಂದೆ ಓಡಿದರೆ ಮನೆಯಲ್ಲಿನ ಕಲೆ ಮಹಿಳೆಯರು ಅಕ್ರಮ ಸಂಬಂಧ ಹಾದಿ ಹಿಡಿದಿರುತ್ತಾರೆ. ಹೀಗೆ, ತನ್ನ ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡ ವ್ಯಕ್ತಿಯನ್ನು ಕೊಲೆ ಮಾಡಲು ಅಪ್ರಾಪ್ತ ಯುವಕರಿಗೆ ಕೇವಲ 3 ಲಕ್ಷ ರೂ.ಗೆ ಕೊಟ್ಟು ಸುಪಾರಿ ಕೊಡಲಾಗಿದೆ. ಅಪ್ರಾಪ್ತ ಮೂವರು ಯುವಕರು ಸೇರಿದಂತೆ ಒಟ್ಟು 6 ಮಂದಿ ಕೊಲೆ ಮಾಡಲು ಕಾದು ಕುಳಿತಾಗ ಪೊಲೀಸು ಅನುಮಾನ ಬಂದು ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.
ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನಿಂದ ವಂಚನೆ
ಈ ಪ್ರಕರಣದಲ್ಲಿ ಸುಪಾರಿ ಕೊಟ್ಟ ಆರೋಪಿ ಹೇಮಂತ್ ರೆಡ್ಡಿ ಸೇರಿ ಮೂವರು ಸುಪಾರಿ ಹಂತಕರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿರುವ ಗಂಟಿಗಾನಹಳ್ಳಿಯಲ್ಲಿ ಸುಪಾರಿ ಹಂತಕರು ಕೊಲೆ ಮಾಡುವುದಕ್ಕಾಗಿ ಹೊಂಚು ಹಾಕಿ ಕುಳಿತಿದ್ದರು. ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಣ್ಣ ಹಾಗೂ ತಂಡದ ಸಿಬ್ಬಂದಿ ಆ ರಸ್ತೆಯಲ್ಲಿ ಹೋದಾಗ ಸುಫಾರಿ ಕಿಲ್ಲರ್ಸ್ ಮಂಕಿ ಕ್ಯಾಪ್ ಧರಿಸಿ ಬೇಲಿ ಪೊದೆಯಲ್ಲಿ ಅಡಗಿ ಕುಳಿತಿರುವುದು ಕಂಡುಬಂದಿದೆ. ಅನುಮಾನಾಸ್ಪದವಾಗಿ ಅವಿತುಕೊಂಡಿದ್ದ ಆರೋಪಿಗಳನ್ನು ಹಿಡಿದು ವಿಚಾರಣೆ ಮಾಡಿದಾಗ ಅಕ್ರಮ ಸಂಬಂಧವೊಂದರ ಪ್ರಕರಣದಲ್ಲಿ ಸುಪಾರಿ ಕೊಲೆ ಮಾಡಲು ಕುಳಿತಿರುವುದು ಕಂಡುಬಂದಿದೆ.
ಹೇಮಂತ್ ರೆಡ್ಡಿ ಅವರ ಸಂಬಂಧಿಯೊಂದಿಗೆ ಶಶಾಂಕ್ ಎನ್ನುವ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದನು. ಹೀಗಾಗಿ, ಶಶಾಂಕ್‌ನನ್ನು ಹತ್ಯೆ ಮಾಡಲು ಹೇಮಂತ್ ರೆಡ್ಡಿ 3 ಲಕ್ಷ ರೂ.ಗೆ ಸುಪಾರಿ ನೀಡಿದ್ದನು. ಇನ್ನು ಸೋಮವಾರ ಮೈಸೂರಿನಿಂದ ಬೆಂಗಳೂರಿಗೆ ಬರ್ತಿದ್ದ ಶಶಾಂಕ್ ಬೈಕ್‌ನಲ್ಲಿ ಎಂಟಿಗಾನಹಳ್ಳಿ ಮನೆಗೆ ತೆರಳುವಾಗ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು. ಎಂಟಿಗಾನಹಳ್ಳಿ ರಸ್ತೆಯ ಪಕ್ಕದಲ್ಲಿ ಟಾಟಾ ಸುಮೋ ವಾಹನವನ್ನು ನಿಲ್ಲಿಸಿ ಅದರಲ್ಲಿ ಮಾರಕಾಸ್ತ್ರ ಅಡಗಿಸಿಟ್ಟು, ಜೊತೆಗೆ ಕೈಗಳಲ್ಲಿಯೂ ಒಂದಷ್ಟು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಶಶಾಂಕ್ ಬರುವುದನ್ನು ಕಾಯುತ್ತಿದ್ದರು.
Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!
ಇನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಮಧ್ಯರಾತ್ರಿ 1.30ರ ವೇಳೆಗೆ ಈ ರಸ್ತೆಯಲ್ಲಿ ಬರುವಾಗ ಟಾಟಾ ಸುಮೋ ವಾಹನ ಮತ್ತು ಪೊದೆಯಲ್ಲಿ ಅಡಗಿ ಕುಳಿತ 6 ಮಂದಿ ಸುಪಾರಿ ಕಿಲ್ಲರ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ವಶಕ್ಕೆ ಪಡೆದವರಲ್ಲಿ ಮೂವರನ್ನು ಮಾತ್ರ ಬಂಧನ ಮಾಡಲಾಗಿದೆ. ಉಳಿದ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು (ಅಪ್ರಾಪ್ತರು) ಆಗಿದ್ದಾರೆ. ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.