ಕೋಲಾರ: CAA, NRC ಬೆಂಬಲಿಸಿ ಮೆರವಣಿಗೆಯಲ್ಲಿ ಲಾಠಿ ಪ್ರಹಾರ
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಬೆಂಬಲಿಸಿ ಕೋಲಾರದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಲಾಠಿ ಚಾರ್ಜ್ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಕೋಲಾರ(ಜ.04): ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಬೆಂಬಲಿಸಿ ಕೋಲಾರದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಲಾಠಿ ಚಾರ್ಜ್ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಮೆರವಣಿಗೆ ಮುಸ್ಲಿಂ ಸಮುದಾಯ ಹೆಚ್ಚಿರುವ ಕ್ಲಾಕ್ ಟವರ್‌ಗೆ ನುಗ್ಗಲು ಯತ್ನಿಸಿದಾಗ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಲಾಠಿ ಪ್ರಹಾರ ನಡೆಸಲಾಗಿದೆ. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಕ್ಲಾಕ್ ಟವರ್‌ಗೆ ನುಗ್ಗಲು ಪ್ರಯತ್ನಿಸಲಾಗಿದೆ. ಇದೇ ಕಾರಣಕ್ಕೆ ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಆದಿವಾಸಿ ಬಾಲಕಿಗೆ ರಾಷ್ಟ್ರಮಟ್ಟದಲ್ಲಿ ಚಿನ್ನ, ಖೇಲೋ ಇಂಡಿಯಾಗೆ ಆಯ್ಕೆ
ನಗರದ ಎಂ.ಜಿ ರಸ್ತೆಯಲ್ಲಿ NRC ಹಾಗೂ CAA ಬೆಂಬಲಿಸಿ ಬಹಿರಂಗ ಸಭೆ ನಡೆದಿದ್ದು, ನಂತರ ನಡೆದ ಮೆರವಣಿಗೆಯಲ್ಲಿ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಕೋಲಾರದ ಜಿಲ್ಲಾ ಆಸ್ಪತ್ರೆ ಮುಂಭಾಗ ಘಟನೆ ನಡೆದಿದೆ.
ಪೌರತ್ವ ಕಾಯದೆ ತಿದ್ದುಪಡಿ ಬೆಂಬಲಿಸಿ ಕೋಲಾರದಲ್ಲಿ ಬೃಹತ್ ಸಭೆ ಹಿನ್ನೆಲೆ ಸಭೆಗೆ ಆಗಮಿಸಿದ ವಿವಿಧ ಸಂಘಟನೆ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಮೆರವಣಿಗೆ ರೂಟ್ ಮ್ಯಾಪ್ ಬದಲಾಗಿ ಮತ್ತೊಂದು ಮಾರ್ಗವಾಗಿ ಚಲಿಸಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಗಾಂಧಿ ಕನಸಿನಂತೆ ಪೌರತ್ವ ತಿದ್ದುಪಡಿ ಕಾಯ್ದೆ: ನಳಿನ್
ಟವರ್ ಮೂಲಕ ಮೆರವಣಿಗೆಗೆ ಅವಕಾಶ ನೀಡುವಂತೆ ಒತ್ತಯ ಮಾಡಿದ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಸುರಕ್ಷತೆ ದೃಷ್ಟಿಯಲ್ಲಿ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದ ನೂರಾರು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಪ್ರಚೋದನಾಕಾರಿ ಮೆಸೇಜ್: 60 ಮಂದಿಗೆ ನೋಟಿಸ್..!