ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಅಲ್ಲಂ ವೀರಭದ್ರಪ್ಪ
ರಾಜ್ಯದಿಂದ ಮೂರ್ನಾಲ್ಕು ಜನರ ಹೆಸರು ಶಿಫಾರಸ್ಸು ಮಾಡಲಾಗಿದೆ| ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಮುನಿಯಪ್ಪ ಪ್ರಸ್ತಾಪ ಮಾಡಲಾಗಿದೆ| ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕೆಂದು ಪಕ್ಷದ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ ಎಂದ ಅಲ್ಲಂ ವೀರಭದ್ರಪ್ಪ|
ಬಳ್ಳಾರಿ(ಡಿ.26): ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಈ ಸಂಬಂಧ ರಾಜ್ಯದಿಂದ ಮೂರ್ನಾಲ್ಕು ಜನರ ಹೆಸರು ಶಿಫಾರಸ್ಸು ಮಾಡಲಾಗಿದೆ. ಅದರಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಮುನಿಯಪ್ಪ ಅವರ ಹೆಸರು ಹೋಗಿದೆ. ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕೆಂದು ಪಕ್ಷದ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮದವರ ಜತೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರು ಕೇಳುತ್ತಿದ್ದಾರೆ. ಒಕ್ಕಲಿಗ ಸಮಯದಾಯದಲ್ಲಿ ಎಸ್.ಎಂ.ಕೃಷ್ಣ ಅವರ ನಂತರ ಯಾರೂ ಆಗಿಲ್ಲ, ದಲಿತರು, ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಲ್ಲಿ ಪಟ್ಟ ಮುಖ್ಯ ಅಲ್ಲ ಎಲ್ಲರನ್ನು ಒಟ್ಟುಗೂಡಿಸಿ ಕೊಂಡೊಯ್ಯುವರಿಗೆ ಬೆಲೆ ಇದೆ. ಕೇವಲ ಅಧ್ಯಕ್ಷರಾದರೆ ಉಪಯೋಗವಿಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವವರು ಬೇಕಾಗಿದೆ. ಉತ್ತಮ ನಾಯಕನ ಅಗತ್ಯತೆ ಇದೆ. ಐದಾರು ಉಪಚುನಾವಣೆಗಳನ್ನು ನೋಡಿದರೆ ಬಿಜೆಪಿ ಡೌನ್ ಫಾಲ್ ಇದೆ. ಪಕ್ಷ ಮುನ್ನಡೆಸಿ ಕೊಂಡೊಯ್ಯುವ ಸೂಕ್ತ ಸಾರಥಿ ಬೇಕಿದೆ ಎಂದು ಹೇಳಿದ್ದಾರೆ.