ಇಂಡಿ: ಶೀಘ್ರ ನೂತನ ಬಸ್‌ ಡಿಪೋ ಉದ್ಘಾಟನೆ, ಶಾಸಕ ಯಶವಂತರಾಯಗೌಡ ಪಾಟೀಲ

ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೂಮಿಪೂಜೆ| ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವುದನ್ನು ಅರಿತು ಶಾಶ್ವತ ಕುಡಿಯುವ ನೀರಿನ ಅನುಕೂಲಕ್ಕಾಗಿ ಭೀಮಾನದಿಯಿಂದ ನೀರು ಶುದ್ಧೀಕರಿಸಿ ಪಟ್ಟಣಕ್ಕೆ ನಿರಂತರ ನೀರು ದೊರೆಯುವಂತೆ ಮಾಡಿದ್ದೇನೆ: ಪಾಟೀಲ|

MLA Yashavantarayagouda Patil Says Soon Opening of the new Bus Depot in Indi

ಇಂಡಿ(ಮೇ.31): ಮುಂಬರುವ ದಿನದಲ್ಲಿ 50 ವರ್ಷಗಳಿಂದ ಕಂಡರಿಯದ ಅಭಿವೃದ್ಧಿ ಕಾಮಗಾರಿಗಳನ್ನು ಮತಕ್ಷೇತ್ರದಲ್ಲಿ ಕೈಕೊಂಡು, ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವಾಗಿಸಲು ಶ್ರಮಿಸಲಾಗುತ್ತದೆ. ನೂತನವಾಗಿ ನಿರ್ಮಾಣವಾಗಿರುವ ಬಸ್‌ ಡಿಪೋ ಕೆಲವೇ ದಿನದಲ್ಲಿ ಉದ್ಘಾಟನೆಗೊಳಿಸಿ, ಹಳೆಯ ಬಸ್‌ ಡಿಪೋದಲ್ಲಿ ನಗರ ಸಾರಿಗೆ ನಿಲ್ದಾಣ ಮಾಡಿ, ಪಟ್ಟಣದ 10 ಕಿ.ಮೀ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಸಾರಿಗೆ ಬಸ್‌ ಒದಗಿಸಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಶನಿವಾರ .8.95 ಕೋಟಿ ವೆಚ್ಚದಲ್ಲಿ ಪಟ್ಟಣದ ಸಿಂದಗಿ ರಸ್ತೆ, ಅಗರಖೇಡ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಎಲ್ಲ ವಾರ್ಡ್‌ಗಳ ಒಳರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗುತ್ತದೆ. ರಸ್ತೆಯ ಬದಿಯಲ್ಲಿ ಅತೀಕ್ರಮಣಗೊಂಡಿರುವ ಕಟ್ಟಡಗಳನ್ನು ಮಾಲೀಕರು ತೆರವುಗೊಳಿಸಿ ಕಾಮಗಾರಿ ಮಾಡಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಕೋವೀಡ್‌-19 ನಿರ್ಮೂಲನೆಗೆ ಔಷಧ ಸಿಗುವವರೆಗೆ ಸಾರ್ವಜನಿಕರು ಇದರ ವಿರುದ್ಧ ಹೋರಾಟ ಮಾಡಬೇಕು. ಈ ಒಂದು ವೈರಸ್‌ ಜಗತ್ತಿನ ಮನೋಭಾವ ಬದಲಾವಣೆ ಮಾಡಿದೆ. ಕೊರೋನಾ ವೈರಸ್‌ ಬಗ್ಗೆ ಜಾಗ್ರತರಾಗಿರಿ, ಹೆದರಬೇಡಿ ಎಂದು ಹೇಳಿದರು.

ಸಿಂದಗಿ: ಅಕ್ರಮ ಮದ್ಯ ವಶಪಡಿಸಿಕೊಂಡು ಬೆಂಕಿ ಹಚ್ಚಿದ ವನಿತೆಯರು..!

ಕೊರೋನಾ ವೈರಸ್‌ ಹರಡಿದ್ದರಿಂದ ಬಡವರು, ಕೂಲಿಕಾರ್ಮಿಕರು,ರೈತರು ತೊಂದರೆ ಅನುಭವಿಸಿದ್ದಾರೆ. ತೊಂದರೆ ಅನುಭವಿಸಿದ ಕುಟುಂಬಗಳಿ ಹಲವು ಜನರು,ಸಂಘ-ಸಂಸ್ಥೆಗಳು ಸಹಾಯ ಹಸ್ತ ನೀಡಿದ್ದು ಅಭಿನಂದನೀಯ. ಜಗತ್ತು ಇರುವವರೆಗೆ ಸಮಾನತೆ,ಭಾತೃತ್ವ ತತ್ವಗಳನ್ನು ಸಾರಿದ ಬಸವಣ್ಣನ ನಾಡಿನಲ್ಲಿ ಹಿಂತಹ ಜನೋಪಯೋಗಿ ಕಾರ್ಯಗಳು ನಡೆಯುತ್ತಿರುವುದು ನಮ್ಮ ಹಿಂದಿನ ಸಂಸ್ಕೃತಿ,ಸಂಸ್ಕಾರ ಎದ್ದು ತೊರುತ್ತದೆ ಎಂದು ಹೇಳಿದರು.

ಗ್ರಾಮೀಣ ಭಾಗದ ರಸ್ತೆಗಳಿಂದ ಹಿಡಿದು, ನಗರದ ಒಳ ರಸ್ತೆಗಳು ,ಚರಂಡಿ ವ್ಯವಸ್ಥೆ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಎನ್ನೇಲ್ಲಾ ಮಾಡಲು ಸಾಧ್ಯ ಎಂಬ ದೂರದೃಷ್ಟಿಯಿಂದ ನೂತನ ಶಾಲಾ ಕಾಲೇಜುಗಳ ಮಂಜೂರು ಮತ್ತು ಕಟ್ಟಡಗಳ ನಿರ್ಮಾಣ ಮಾಡಿಸಿದ್ದೇನೆ. ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವುದನ್ನು ಅರಿತು ಶಾಶ್ವತ ಕುಡಿಯುವ ನೀರಿನ ಅನುಕೂಲಕ್ಕಾಗಿ ಭೀಮಾನದಿಯಿಂದ ನೀರು ಶುದ್ಧೀಕರಿಸಿ ಪಟ್ಟಣಕ್ಕೆ ನಿರಂತರ ನೀರು ದೊರೆಯುವಂತೆ ಮಾಡಿದ್ದೇನೆ ಎಂದು ಹೇಳಿದರು.

ತಾಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಶ್ರೀಕಾಂತ ಕುಡಿಗನೂರ, ಪುರಸಭೆ ಸದಸ್ಯರಾದ ಅನಿಲಗೌಡ ಬಿರಾದಾರ, ಸು​ಧೀರ ಕರಕಟ್ಟಿ, ಸತೀಶ ಕುಂಬಾರ, ದೇವೇಂದ್ರ ಕುಂಬಾರ, ಉಮೇಶ ದೇಗಿನಾಳ,ವಿಜು ಮೂರಮನ, ಅಯೂಬ ಬಾಗವಾನ,ವಿಜಯಕುಮಾರ ರಾಠೋಡ, ಇಲಿಯಾಸ ಬೋರಾಮಣಿ, ಮುಸ್ತಾಕ ಇಂಡಿಕರ, ಶಬ್ಬಿರ ಖಾಜಿ, ಜಾವೀದ ಮೋಮಿನ, ಸುರೇಶ ಶಿವೂರ, ಭೀಮಾಶಂಕರ ಮೂರಮನ,ಶಿವು ಬಿಸನಾಳ,ಅವಿನಾಶ ಬಗಲಿ,ಅಯುಬ ಬಾಗವಾನ,ರೈಸ್‌ ಅಸ್ಟೇಕರ,ಎಇಇ ಆರ್‌.ಎಸ್‌ ಕತ್ತಿ, ಎಂ.ಎಂ ಸಂಜವಾಡ, ರಷೀದ ಅರಬ, ಎಲ್‌.ಡಿ ಮಡಗೊಂಡ, ಬಿ.ಎಸ್‌ ಬಿರಾದಾರ ಇತರರು ಈ ಸಂದರ್ಭದಲ್ಲಿ ಇದ್ದರು.
 

Latest Videos
Follow Us:
Download App:
  • android
  • ios