ತುಮಕೂರು(ನ.17): ತುರುವೇಕೆರೆಯಲ್ಲಿ ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ಹಾಗೂ ಪೊಲೀಸರ ಸಮ್ಮುಖ ಸತಿಪತಿಗಳಾಗಿದ್ದಾರೆ.

ಒಂದು ವರ್ಷದಿಂದ ತಾಲೂಕಿನ ಮೇಲನಹಳ್ಳಿ ಅರುಣ್‌ ಹಾಗೂ ಗುಬ್ಬಿ ತಾಲೂಕಿನ ಲೀಲಾವತಿ ಪರಸ್ಪರ ಪ್ರೀತಿಸುತಿದ್ದರೆನ್ನಲಾಗಿದೆ. ಪೋಷಕರು ಮದುವೆ ಮಾಡುವ ಮುನ್ನವೇ ಅರುಣ್‌ ಹಾಗೂ ಲೀಲಾವತಿ ಬೆಂಗಳೂರಿನ ಮನೆಯೊಂದರಲ್ಲಿ ಹತ್ತಾರು ತಿಂಗಳಿನಿಂದ ಒಟ್ಟಿಗೆ ಜೀವನ ಆರಂಭಿಸಿದ್ದರು.

JDSನಿಂದ ಯಾರನ್ನೇ ನಿಲ್ಸಿದ್ರೂ 50 ಸಾವಿರ ಗ್ಯಾರಂಟಿ: ರೇವಣ್ಣ ವಿಶ್ವಾಸ

ಸಹ ಜೀವನದ ಫಲವಾಗಿ ಲೀಲಾವತಿ ಗರ್ಭಿಣಿಯಾಗಿದ್ದಳು. ಲೀಲಾವತಿ ಈ ವಿಷಯವನ್ನು ತನ್ನ ಅಕ್ಕನಿಗೆ ತಿಳಿಸಿದ್ದಳು. ಗಾಬರಿಗೊಂಡ ಪೋಷಕರು ಅರುಣ್‌ ಹಾಗೂ ಲೀಲಾವತಿಯ ಮದುವೆ ಮಾಡಲು ಮುಂದಾಗಿದ್ದರು. ಈ ಹಂತದಲ್ಲಿ ಅರುಣ್‌ ಕೆಲ ಕಾರಣಗಳಿಂದ ಸದ್ಯಕ್ಕೆ ಮದುವೆಯಾಗುವುದಿಲ್ಲ ಎಂದು ಹೇಳಿ ನಾಪತ್ತೆಯಾಗಿದ್ದ.

ಅರುಣ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಲೀಲಾವತಿ ತನ್ನ ಪೋಷಕರೊಂದಿಗೆ ತುರುವೇಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದಲಿತ ಮುಖಂಡರಾದ ಕುಂದೂರು ತಿಮ್ಮಯ್ಯ, ಕಡಬ ಶಿವಣ್ಣ ನೇತೃತ್ವದಲ್ಲಿ ಪ್ರೇಮಿಗಳ ವಿವಾಹ ಮಾಡಲು ನ್ಯಾಯ ಪಂಚಾಯತಿ ನಡೆದವು. ವಿಷಯ ಶಾಸಕ ಮಸಾಲಾ ಜಯರಾಮ್‌ ಕಿವಿಗೂ ಬಿತ್ತು. ಶಾಸಕರು ಪ್ರೇಮಿಗಳನ್ನು ಒಂದುಗೂಡಿಸುವ ಭರವಸೆ ಇತ್ತರು.

'36 ಸಾವಿರ ಮತಗಳಿಂದ ಸೋತರೂ ಸಿದ್ದು ಆರ್ಭಟ ಇನ್ನೂ ಕಡಿಮೆಯಾಗಿಲ್ಲ'..!

ಪೊಲೀಸರು ಅರುಣ್‌ನನ್ನು ಹುಡುಕಿ ಠಾಣೆಗೆ ಕರೆ ತಂದರು. ಅರುಣ್‌ ತನ್ನ ಪ್ರಿಯತಮೆ ಲೀಲಾವತಿಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ. ಪ್ರೇಮಿಗಳಿಬ್ಬರು ಸಾರ್ವಜನಿಕರ ಸಮ್ಮುಖ ಕರಾರು ಪತ್ರಕ್ಕೆ ಸಹಿ ಹಾಕಿ, ಹಾರ ಬದಲಾಯಿಸಿ ಸತಿಪತಿಗಳಾದರು. ಸಾರ್ವಜನಿಕರು ಹಾಗೂ ಪೊಲೀಸರು ನವಜೋಡಿಗಳನ್ನು ಹರಸಿದರು.

'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!