Asianet Suvarna News Asianet Suvarna News

'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!

ದೇಶದಲ್ಲಿ 60ರಿಂದ 70ರಷ್ಟುಜನರು ಕೃಷಿಕರಾಗಿದ್ದಾರೆ. ಕೃಷಿಕರನ್ನು ದೇಶದಲ್ಲಿ ಶೇ.2ಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಬ್ರಿಟಿಷರನ್ನು ದೇಶದಿಂದ ಓಡಿಸಿದಂತೆ ನರೇಂದ್ರ ಮೋದಿಯನ್ನು ಓಡಿಸಬೇಕು ಎಂದು ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದ್ದಾರೆ.

modi should kick out from india like British
Author
Bangalore, First Published Nov 17, 2019, 10:27 AM IST

ಚಾಮರಾಜನಗರ(ನ.17): ದೇಶದ ಆರ್ಥಿಕ ಹಿಂಜರಿತ ಕುರಿತು ದೇಶದಲ್ಲಿ ಎರಡು ರೀತಿಯ ತಲ್ಲಣ ಸೃಷ್ಟಿಯಾಗಿದೆ ಎಂದು ಶಾಸಕ ಎನ್‌.ಮಹೇಶ್‌ ಹೇಳಿದ್ದಾರೆ. 

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಭಾರತದ ಆರ್ಥಿಕ ಹಿಂಜರಿತ ಕಾರಣ, ಪರಿಣಾಮ ಮತ್ತು ಪರಿಹಾರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದ್ದಾರೆ.

‘ಮೋದಿ ಚೋರ್‌ ಹೈ’ ಎಂದ ಆನಂದ್‌ಗೇಕೆ ಟಿಕೆಟ್‌?: ಬಿಜೆಪಿಯಲ್ಲಿ ಗದ್ದಲ

ಒಂದು ಸರ್ಕಾರ ಮಾಡಿದ್ದ ಪಾಲಿಸಿಗಳನ್ನು ನಂತರ ಬಂದ ಇನ್ನೊಂದು ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಸೌಮ್ಯವಾಗಿ ಜಾರಿ ಮಾಡುತ್ತಿದ್ದ ಕಾಯ್ದೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನರೇಂದ್ರ ಮೋದಿ ಅವರು ಉಗ್ರವಾಗಿ ಜಾರಿ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಮತ್ತು ಮನಮೋಹನ್‌ ಸಿಂಗ್‌ ಇಬ್ಬರು ಆರ್ಥಿಕ ತಜ್ಞರೇ ಎಂದಿದ್ದಾರೆ.

ಬಡವರ ಮನೆ ನಿರ್ಮಾಣಕ್ಕೆ ರಾಮದಾಸ್‌ ಅಡ್ಡಿ: ಆರೋಪ

ಕಾರ್ಯಕ್ರವನ್ನು ಉದ್ಘಾಟಿಸಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ಅಂಬಾನಿಗಳಿಗೆ ಸಾಲ ಸೌಲಭ್ಯ ನೀಡುತ್ತಿದೆ. ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದನ್ನು ಕೇಳದಿದ್ದರೆ ಪ್ರಜಾಪ್ರಭುತ್ವ ಹಾಳಾಗುತ್ತದೆ. ದೇಶದಲ್ಲಿ 60ರಿಂದ 70ರಷ್ಟುಜನರು ಕೃಷಿಕರಾಗಿದ್ದಾರೆ. ಕೃಷಿಕರನ್ನು ದೇಶದಲ್ಲಿ ಶೇ.2ಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಬ್ರಿಟಿಷರನ್ನು ದೇಶದಿಂದ ಓಡಿಸಿದಂತೆ ನರೇಂದ್ರ ಮೋದಿಯನ್ನು ಓಡಿಸಬೇಕು ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಮೈಸೂರು ಸೇಪಿಯಂಟ್‌ ಕಾಲೇಜು ವಾಣಿಜ್ಯ ನಿರ್ವಹಣಾ ವಿಭಾಗ ಸಹಾಯಕ ಪ್ರಾಧ್ಯಾಪಕ ಕ್ರಾಂತಿರಾಜ್‌ ಒಡೆಯರ್‌ ಮುಖ್ಯಭಾಷಣ ಮಾಡಿದರು. ವಿದ್ಯಾರ್ಥಿನಿ ಜಿ.ಎನ್‌.ಸಹನಾ ಪ್ರಬಂಧ ಮಂಡನೆ ಮಾಡಿದರು. ಬಿವಿಎಸ್‌ ಅಧ್ಯಕ್ಷ ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಐಟಿ ದಾಳಿ ಹೆಸರಲ್ಲಿ ಜತೆಗಾರರನ್ನೇ ವಂಚಿಸಿದ JDS ಮುಖಂಡ..!

ಮುಖಂಡರಾದ ಆಲೂರು ಮಲ್ಲು, ನಗರಸಭೆ ಸದಸ್ಯ ಪ್ರಕಾಶ್‌, ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಪ್ರಸನ್ನ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಎ.ಶಿವಣ್ಣ, ಜಿಲ್ಲಾ ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷೆ ನೇತ್ರಾವತಿ, ಜ್ಲಿಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘಧ ಡಾ. ಪರಮೇಶ್ವರಪ್ಪ, ಕ.ಪ್ರೌ.ಶಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಡಾ. ಬಸವರಾಜು, ಕ.ರಾ. ಪ್ರಾ.ಶಾ. ಶಿಕ್ಷಕರ ಸಂಘ ಅಧ್ಯಕ್ಷ ಪ್ರಕಾಶ್‌, ಪ.ಜಾ, ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಡಿ.ಮಹದೇವಯ್ಯ, ಪ.ಜಾ. ಪ್ರಾ.ಶಾ. ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್‌.ಎಸ್‌.ಮಹದೇವಸ್ವಾಮಿ, ಎಸ್‌ಸಿ, ಎಸ್ಟಿಸಮನ್ವಯ ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ, ಜಿಲ್ಲಾ ಸಂಯೋಜಕ ಪರ್ವತ್‌ರಾಜ್‌ ಇದ್ದರು.

ಹುಣಸೂರು ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಫಿಕ್ಸ್

Follow Us:
Download App:
  • android
  • ios