ಸ್ವಾವಲಂಬಿ ಬದುಕಿಗೆ ಮಿಶ್ರ ತಳಿ ಹಸು ಸಾಕಣೆ ಸಹಕಾರಿ : ಪಶುವೈದ್ಯಾಧಿಕಾರಿ ಡಾ. ಹರೀಶ್
ಕೃಷಿಕರು ಮಿಶ್ರ ತಳಿ ಹಸುಗಳನ್ನು ಸಾಕುವುದರಿಂದ ಆರ್ಥಿಕವಾಗಿ, ಸಬಲರಾಗುವ ಜೊತೆಗೆ ಸಾವಲಂಬಿ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಸಹಾಯಕಾರಿಯಾಗಲಿದೆ ಎಂದ ಭೇರ್ಯ ಪಶು ಆಸ್ಪತ್ರೆಯ ಪಶುವೈದ್ಯಾಧಿಕಾರಿ ಡಾ. ಹರೀಶ್ ಹೇಳಿದರು.
ಭೇರ್ಯ : ಕೃಷಿಕರು ಮಿಶ್ರ ತಳಿ ಹಸುಗಳನ್ನು ಸಾಕುವುದರಿಂದ ಆರ್ಥಿಕವಾಗಿ, ಸಬಲರಾಗುವ ಜೊತೆಗೆ ಸಾವಲಂಬಿ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಸಹಾಯಕಾರಿಯಾಗಲಿದೆ ಎಂದ ಭೇರ್ಯ ಪಶು ಆಸ್ಪತ್ರೆಯ ಪಶುವೈದ್ಯಾಧಿಕಾರಿ ಡಾ. ಹರೀಶ್ ಹೇಳಿದರು.
ಸಮೀಪದ ಹರಂಬಳ್ಳಿ ಗ್ರಾಮದಲ್ಲಿ ಪಶು ವೈದ್ಯ ಇಲಾಖೆ ಹಾಗೂ ಹರಂಬಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಿಶ್ರಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಸುಗಳ ಹಾಲು ಕುಡಿಯುವುದರಿಂದ ನಮ್ಮ ಮಕ್ಕಳ ಆರೋಗ್ಯ ಹಾಗೂ ಬೌದ್ದಿಕ ಬೆಳವಣಿಗೆ ಹೆಚ್ಚಿಸಬಹುದಾಗಿದೆ, ಇಂತಹ ಕಾರ್ಯಕ್ರಮಗಳಿಂದ ಹೆಚ್ಚು ಹೆಚ್ಚು ಹಸುಗಳ ಪ್ರದರ್ಶನದ ಜೊತೆಗೆ ರೈತರಿಗೆ ವೈದ್ಯರಿಂದ ಮಿಶ್ರತಳಿ ಹಸುಗಳ ಪಾಲನೆ ಪೋಷಣೆ, ಅಭಿವೃದ್ದಿ ಹಾಗೂ ಸರಕಾರದ ಸವಲತ್ತುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದಾಗಿದೆ ಎಂದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಮಾತನಾಡಿ, ಕರುಗಳ ಆರೈಕೆ ಉತ್ತಮ ಮಾಡಿದಲ್ಲಿ ಹಸುಗಳಾದ ಉತ್ತಮ ಹಾಲು ನೀಡುತ್ತದೆ. ಕರು ಜನಿಸಿದ 20 ದಿನದೊಳಗಾಗಿ ಕೊಂಬು ಬಾರದಂತೆ ಚುಚ್ಚುಮದ್ದು ಕೊಡಿಸಬೇಕು. ಇದರಿಂದ ಅದರ ಆಕಾರ, ಆರೋಗ್ಯ ಉತ್ತಮವಾಗಿರುತ್ತದೆ. ಜವಾರಿ ಆಕಳಿಗಿಂತ ಮಿಶ್ರ ತಳಿ ಹಸುಗಳು ಜಂತುಭಾದೆಗೆ ತುತ್ತಾಗುತ್ತಿದ್ದು, ಕಾಲಕಾಲಕ್ಕೆ ಅಗತ್ಯ ಚುಚ್ಚುಮದ್ದು, ಲಸಿಕೆ ಕೊಡಿಸಿ ಆರೈಕೆ ಮಾಡಬೇಕು. ಕರುಗಳ ಲಾಲನೆ, ಪಾಲನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರದರ್ಶನ ಆಯೋಜಿಸಲಾಗಿದ್ದು, ಇದರ ಸದುಪಯೋಗಬಾಗಬೇಕು ಎಂದು ತಿಳಿಸಿದರು.
ಆಕಳು ಹಾಗೂ ಎಮ್ಮೆ ಕರುಗಳ ಸಾಕಾಣಿಕೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಹರಂಬಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಕರುಗಳ ಪ್ರದರ್ಶನ ಗಮನ ಸೆಳೆಯಿತು.
40 ರೈತರ 50ಕ್ಕೂ ಹೆಚ್ಚು ಮಿಶ್ರ ತಳಿಯ ಕರುಗಳ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಈ ವೇಳೆ ಎಚ್ ಎಫ್ ತಳಿಯ ಕರುಗಳು, ಜೆರ್ಸಿ ತಳಿಯ ಕರುಗಳು ಹಾಗೂ ಮಿಶ್ರ ತಳಿಯ ಕರುಗಳ ಪ್ರದರ್ಶಿಸಲಾಯಿತು.
ಪಶುಪಾಲನಾ ಇಲಾಖೆಯಿಂದ ನಡೆದ ಪ್ರದರ್ಶನದಲ್ಲಿ ಆರೋಗ್ಯಕರವಾಗಿದ್ದ ಅತ್ಯುತ್ತಮ ಕರುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ಕರುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ರ್ತೀರ್ಪುಗಾರರಾಗಿ ಡಾ. ಸಂತೋಷ್, ಡಾ. ಚಂದನ್, ಡಾ. ಚೈತ್ರಾ ಕಾರ್ಯನಿರ್ವಹಿಸಿದರು. ಹರಂಬಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಕವಿತಾ ಲಕ್ಷ್ಮಣ್, ಕಾರ್ಯದರ್ಶಿ ವಿಜಯಲಕ್ಷ್ಮೀ, ಪಶುವೈದ್ಯ ಇಲಾಖೆಯ ಸಿಬ್ಬಂದಿ ಆನಂದ್, ಪೃಥ್ವಿ, ರಾಜಶೇಖರ್, ಸಂತೋಷ್, ಪಶುಸಖಿಯರಾದ ನಂದಿನಿ, ಲಕ್ಷ್ಮೀ, ಗ್ರಾಮಸ್ಥರಾದ ಚಂದ್ರೇಗೌಡ, ಮಲ್ಲೇಶ್, ನಿಂಗರಾಜು, ನಂದೀಶ್ ಇದ್ದರು.