49 ಕಾರ್ಮಿಕರನ್ನು ತೆಲಂಗಾಣಕ್ಕೆ ಕಳುಹಿಸಿದ ಎಂಐಟಿ ವಿದ್ಯಾರ್ಥಿನಿ
ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಲು ಹಣವಿಲ್ಲದೆ ಕಂಗಾಲಾಗಿದ್ದ ತೆಲಂಗಾಣದ 49 ಮಂದಿ ಕಾರ್ಮಿಕರನ್ನು ಊರಿಗೆ ಹೋಗಲು ವ್ಯವಸ್ಥೆ ಮಾಡಿದ ಇಲ್ಲಿನ ಎಂಐಟಿ ವಿದ್ಯಾರ್ಥಿನಿ ಸಾಯಿಶ್ರೀ ಮಾದರಿಯಾಗಿದ್ದಾರೆ.
ಮಣಿಪಾಲ(ಮೇ 20): ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಲು ಹಣವಿಲ್ಲದೆ ಕಂಗಾಲಾಗಿದ್ದ ತೆಲಂಗಾಣದ 49 ಮಂದಿ ಕಾರ್ಮಿಕರನ್ನು ಊರಿಗೆ ಹೋಗಲು ವ್ಯವಸ್ಥೆ ಮಾಡಿದ ಇಲ್ಲಿನ ಎಂಐಟಿ ವಿದ್ಯಾರ್ಥಿನಿ ಸಾಯಿಶ್ರೀ ಮಾದರಿಯಾಗಿದ್ದಾರೆ.
ಗುತ್ತಿಗೆದಾರನೊಬ್ಬ ಈ ಕಾರ್ಮಿಕರನ್ನು ರೈಲ್ವೆ ಕಾಮಗಾರಿಗೆ ಕರೆತಂದು ಲಾಕ್‌ಡೌನ್ ಘೋಷಣೆಯಾಗುತಿದ್ದಂತೆ ಕೈಕೊಟ್ಟು ಪರಾರಿಯಾಗಿದ್ದ. ಸುಮಾರು 45 ದಿನ ದುಡಿಮೆ, ಸಂಪಾದನೆ ಇಲ್ಲದೆ ಕಂಗಾಲಾದ ಈ ಕಾರ್ಮಿಕರು, ಮಹಿಳೆಯರು, ಮಕ್ಕಳು ಕೆಲದಿನಗಳ ಹಿಂದೆ ನಡೆದುಕೊಂಡು ತೆಲಂಗಾಣಕ್ಕೆ ಹೊರಟಿದ್ದರು. ಆಗ ಅವರನ್ನು ಉಡುಪಿ ಜಿಲ್ಲಾಡಳಿತ ತಡೆದು ಹಿಂದಕ್ಕೆ ಕರೆತಂದಿತ್ತು.
ಮೂಡುಬಿದಿರೆ ಅರ್ಚಕರ ಆನ್‌ಲೈನ್ ಕ್ವಿಜ್‌ಗೆ ಭರ್ಜರಿ ರೆಸ್ಪಾನ್ಸ್
ಇದನ್ನು ನೋಡಿದ ಮುಂಬೈ ಮೂಲದ, ಮಣಿಪಾಲದ ಎಂಐಟಿ ಹಳೆ ವಿದ್ಯಾರ್ಥಿನಿ, ಪ್ರಸ್ತುತ ಪ್ರಾಜೆಕ್ಟ್ಗಾಗಿ ಎಂಐಟಿಗೆ ಬಂದಿರುವ ಸಾಯಿಶ್ರೀ, ಕಾರ್ಮಿಕರಿಗೆ ಸಹಾಯ ಮಾಡಲು ಮುಂದೆ ಬಂದರು. ಮೊದಲು ತೆಲಂಗಾಣ ಮುಖ್ಯಮಂತ್ರಿಗೆ ಕಾರ್ಮಿಕರ ಸ್ಥಿತಿಯ ಬಗ್ಗೆ ಟ್ವೀಟ್ ಮಾಡಿದರು. ತಕ್ಷಣ ಸ್ಪಂದಿಸಿದ ಸಿಎಂ ಅವರ ಸೂಚನೆಯಂತೆ ಆಕೆ ತಮ್ಮ ಗೆಳೆಯನೊಂದಿಗೆ ಸೇರಿ ಕಾರ್ಮಿಕರೆಲ್ಲರ ಹೆಸರನ್ನು ಸೇವಾಸಿಂಧುಗೆ ನೋಂದಾಯಿಸಿಕೊಂಡು, ತೆಲಂಗಾಣ ರಾಜ್ಯದ ಪಾಸ್ ಮಾಡಿಸಿದರು.
ಹಬ್ಬ ಯಕ್ಷಗಾನದ ಸದಲ್ಲಿಲ್ಲ, ಆನ್ ಲೈನ್ ಜಾತ್ರೆ ಇದೆಯಲ್ಲ
ನಂತರ ಅವರನ್ನು ಹಿಂದಕ್ಕೆ ಕಳುಹಿಸಲು ಕೆಎಸ್‌ಆರ್‌ಟಿಸಿಯ 2 ಬಸ್‌ಗಳನ್ನು ನಿಗದಿ ಮಾಡಿದರು. ಆದರೆ ಅವರು 1.98 ಲಕ್ಷ ರು. ಟಿಕೇಟು ದರ ನಿಗದಿ ಮಾಡಿದ್ದಾರೆ. ಕಾರ್ಮಿಕರಲ್ಲಿ ಕೇವಲ 50 ಸಾವಿರ ರು.ಗಳಷ್ಟೇ ಇತ್ತು. ಆಗ ಸಾಯಿಶ್ರೀ ಮತ್ತೆ ತೆಲಂಗಾಣ ಸರ್ಕಾರಕ್ಕೆ ದಂಬಾಲು ಬಿದ್ದು, ಅಷ್ಟೂಹಣವನ್ನು ಸರ್ಕಾರವೆ ಭರಿಸುವಂತೆ ಮಾಡಿದ್ದಾರೆ. ಮಾತ್ರವಲ್ಲದೆ ಸಾರ್ವಜನಿಕರಿಂದ 50 ಸಾವಿರ ರು.ಗಳನ್ನು ಸಂಗ್ರಹಿಸಿ ಕಾರ್ಮಿಕರಿಗೆ ನೀಡಿದ್ದಾರೆ.