ತೀರ್ಥಹಳ್ಳಿ[ನ.23]  ಆಕೆ ಪ್ರತಿದಿನ ಸಂಕಟ ಅನುಭವಿಸುತ್ತಿದ್ದಳು. ಭಯದಿಂದಿದಲೇ ದಿನ ದೂಡುವಂತಾಗಿತ್ತು. ಒಂದು ಕ್ಷಣದ ಆಕರ್ಷಣೆಗೆ ಯುವಕನೊಬ್ಬನಿಗೆ ಎಲ್ಲವನ್ನು ಅರ್ಪಿಸಿದ್ದವಳಿಗೆ ನೋವೊಂದನ್ನು ಬಿಟ್ಟು ಬೇರೆ ಇನ್ನೇನೂ ಉಳಿದಿರಲಿಲ್ಲ.

ಇದು ಕೋಣಂದೂರಿನ ಅಪ್ರಾಪ್ತ ಬಾಲಕಿಯ ವೇದನೆಯ ಕತೆ. ಕೋಣಂದೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದವಳನ್ನು ಯುವಕನೊಬ್ಬ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಆತನ ಜೊತೆ ಲೈಂಗಿಕ ಸಂಪರ್ಕಕ್ಕೂ ಮುಂದಾಗುವ ಸ್ಥಿತಿ ನಿರ್ಮಾಣ ಮಾಡಿದ್ದಾನೆ. ಆದರೆ ಏಕಾಂತದ ವಿಡಿಯೋವನ್ನು ಚಿತ್ರೀಕರಿಸಿ ಪದೇ ಪದೇ ತನ್ನ ಜೊತೆ ಬರುವಂತೆ ಒತ್ತಾಯಿಸಲು ಆರಂಭಿಸಿದ್ದಾನೆ. ಬರಲಿಲ್ಲ ವೆಂದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಲು ಆರಂಭಿಸಿದ್ದಾನೆ. ಈ ಎಲ್ಲ ನೋವನ್ನು ಬಾಲಕಿ ಮನಸ್ಸಿನಲ್ಲಿಯೇ ನುಂಗಿಕೊಳ್ಳುತ್ತಿದ್ದಳು.

ಕಾಲೇಜಿಗೆ ವಿದ್ಯಾರ್ಥಿಗಳು ಮೊಬೈಲ್ ತರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ನಂತರ  ಕಾಲೇಜಿನಲ್ಲಿ ಪರಿಶೀಲನೆ ಆರಂಭವಾಗಿದೆ. ತಪಾಸಣೆ ನಡೆಸಿದಾಗ ಹಲವಾರು ವಿದ್ಯಾರ್ಥಿಗಳ ಮೊಬೈಲ್ ಸಿಗುತ್ತದೆ. ಹೀಗೆ ಮೊಬೈಲ್ ಪರೀಕ್ಷಿಸುವಾಗ ಓರ್ವ ಯುವತಿಯ ಮೊಬೈಲ್ ಗ್ಯಾಲರಿಯಲ್ಲಿ  ಆಘಾತಕ್ಕೆ ಗುರಿಮಾಡುವಂತಹ ಅಶ್ಲೀಲ ವಿಡಿಯೋ ಕಂಡುಬರುತ್ತದೆ.

ಓರಲ್‌ ಸೆಕ್ಸ್‌ಗೆ ಒತ್ತಾಯಿಸಿದವನಿಗೆ ಮಹಿಳೆ ಕೊಟ್ಟ ಮರ್ಮಾಘಾತ, ಪೇರಿ ಕಿತ್ತಿದ್ದು ಹೀಗೆ!

ಅದೆಷ್ಟೋ ಯುವಕರ ಕೈನಲ್ಲಿ ಇರುವ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಇರುತ್ತವೆ. ಆದರೆ ಕೋಣಂದೂರು ಕಾಲೇಜಿನ ಪ್ರಾಧ್ಯಾಪಕರು ಬೆಚ್ಚಿ ಬೀಳುವಂತಹ ಸಂಗತಿಯೊಂದು ಗೊತ್ತಾಗುತ್ತದೆ. ಬಾಲಕಿಯೊಬ್ಬಳ ಮೋಬೈಲ್ ನಲ್ಲಿ ಅಶ್ಲೀಲ ವಿಡಿಯೋ ಕಂಡು ಬಂದಿದ್ದು ಅಲ್ಲದೇ ಅದರಲ್ಲಿ ಆಕೆಯೇ ಇದ್ದಿದ್ದನ್ನು ಕಂಡು ಬೆಚ್ಚಿ ಬೀಳುತ್ತಾರೆ.

ತಕ್ಷಣ ಬಾಲಕಿಯ ಪೋಷಕರನ್ನು ಕರೆಸಿ ವಿಚಾರ ತಿಳಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ.ತಕ್ಷಣ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ವಿಡಿಯೋ ದಲ್ಲಿದ್ದ ಕಾರ್ತಿಕ್ ಹಿತ್ತಲಸರ ಎಂಬ ಯುವಕನನ್ನು ಬಂಧಿಸುತ್ತಾರೆ. ವಿಚಾರಣೆ ವೇಳೆ ಆತನ ಮೊಬೈಲ್ ಪರೀಕ್ಷಿಸಿದಾಗ ಅಂತಹ ವಿಡಿಯೋಗಳು ಹಲವಾರು ಆತನ ಮೊಬೈಲ್ ಗ್ಯಾಲರಿಯಲ್ಲಿ ಕಂಡುಬಂದಿವೆ.

ಯಾರೀತ  ಕಾರ್ತಿಕ್ ಹಿತ್ತಲಸರ:   ಕಾರ್ತಿಕ್ ಹಿತ್ತಲಸರ ಉತ್ತಮ ವಾಕ್ ಚಾತುರ್ಯತೆಯುಳ್ಳ ಯುವಕ ತನ್ನ ಮಾತುಗಾರಿಕೆ ಇಂದಲೇ ಕೋಣಂದೂರು ಸುತ್ತ-ಮುತ್ತ ಉತ್ತಮ ಹೆಸರು ಗಳಿಸಿದ್ದವ. ಬಿಜೆಪಿಯಲ್ಲಿ ಗುರುತಿಸಿಕೊಂಡು ತ್ರಿಯಂಬಕಪುರ ಗ್ರಾಮಪಂಚಾಯ್ತಿಯಿಂದ ಸ್ಪರ್ಧೆ ಮಾಡಿ ಸೋತ್ತಿದ್ದ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ.ಇತ್ತೀಚಿಗೆ ಅಕ್ಕ-ಪಕ್ಕದ ಊರುಗಳಲ್ಲಿನ ಯುವಕರ ಮೇಲೆ ವಿನಾಕಾರಣ ಜಗಳವಾಡಿ ರಾಜಕೀಯ ಮತ್ತು ಸ್ನೇಹಿತರ ಸಂಪರ್ಕದಿಂದ ದೂರಾಗಿದ್ದ. 

ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಕಾರ್ತಿಕ್ ನ ಮೇಲೆ ಎಫ್ಐಆರ್ ದಾಖಲಿಸಿಲಾಗಿದೆ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತೀರ್ಥಹಳ್ಳಿ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಒಂದು ಕ್ಷಣ ಮೈ ಮರೆತಿದ್ದು ಬಾಲಕಿಯ ಬಾಳನ್ನು ಕತ್ತಲೆಗೆ ದೂಡಿದೆ.