Asianet Suvarna News Asianet Suvarna News

ಯುವಕರಿಗೆ ಪ್ರಧಾನಿ ಮೋದಿ ಅದ್ಯತೆ: ಸಚಿವ ಗೋವಿಂದ ಕಾರಜೋಳ

ಶೇಕಡಾ 50ಕ್ಕಿಂತ ಹೆಚ್ಚಿನ ಯುವಕರು ಇರುವ ಭಾರತವನ್ನು ವಿದೇಶಿಗರು ಯಂಗ್‌ ಇಂಡಿಯಾ (ಯುವ ಭಾರತ) ಎಂದು ಕರೆದಿದ್ದಾರೆ. ದೇಶವನ್ನು ರಕ್ಷಿಸುವಂತ ಯುವಕರು ಭಾರತದ ಆಸ್ತಿ. ಅದಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಪ್ರಥಮ ಆದ್ಯತೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.

minister govinda karjola talks about pm narendra modi gvd
Author
Bangalore, First Published Aug 15, 2022, 11:58 PM IST

ಮುಧೋಳ (ಆ.15): ಶೇಕಡಾ 50ಕ್ಕಿಂತ ಹೆಚ್ಚಿನ ಯುವಕರು ಇರುವ ಭಾರತವನ್ನು ವಿದೇಶಿಗರು ಯಂಗ್‌ ಇಂಡಿಯಾ (ಯುವ ಭಾರತ) ಎಂದು ಕರೆದಿದ್ದಾರೆ. ದೇಶವನ್ನು ರಕ್ಷಿಸುವಂತ ಯುವಕರು ಭಾರತದ ಆಸ್ತಿ. ಅದಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಪ್ರಥಮ ಆದ್ಯತೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ತಾಲೂಕಿನ ಜಾಲಿಬೇರ ಗ್ರಾಮದ ಸಹಿಪ್ರಾ ಶಾಲೆಯ ಮೊದಲ ಮಹಡಿಯಲ್ಲಿ .27.13 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮೂರು ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ದೇಶದ ಪ್ರಧಾನಿಯಾದ ಬಳಿಕ ಎಲ್ಲ ಕ್ಷೇತ್ರದಲ್ಲೂ ಸಾಕಷ್ಟುಅಭಿವೃದ್ಧಿಪರ ಕಾರ್ಯಗಳಾಗಿವೆ. ಮುತ್ಸದ್ದಿ ರಾಜಕಾರಣಿ ನರೇಂದ್ರ ಮೋದಿ ಅವರ ಹೆಸರು ಈಗ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲಿಯೂ ಇದೆ. ಭಾರತ ಕಂಡ ಅದ್ಭುತ ಪ್ರಧಾನಿ ಎಂಬ ಹೆಗ್ಗಳಿಕೆ ನರೇಂದ್ರ ಮೋದಿ ಅವರದು. ಇಂತಹ ವ್ಯಕ್ತಿತ್ವವಿರುವ ಪ್ರಧಾನಿ ಪಡೆದು ಕೊಂಡಿರುವುದು ಭಾರತದ ಸೌಭಾಗ್ಯ ಎಂದರು.

ಅನವಾಲ ಏತ ನೀರಾವರಿಗೆ ಸಚಿವ ಸಂಪುಟದ ಅನುಮೋದನೆ: ಸಚಿವ ಕಾರಜೋಳ

75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ದೇಶದ ಭದ್ರತೆ ಮತ್ತು ಐಕ್ಯತೆ ಕಾಪಾಡಬೇಕು. ಇಂದಿನ ಮಕ್ಕಳು ದೇಶದ ಆಸ್ತಿ, ಮಕ್ಕಳನ್ನು ಸನ್ಮಾರ್ಗದತ್ತ ಬೆಳೆಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಕರ ಮೇಲಿದೆ. ಹೀಗಾಗಿ ಸಮಾಜದಲ್ಲಿ ಶಿಕ್ಷಕರಿಗೆ ಎಲ್ಲಿಲ್ಲದ ಗೌರವವಿದೆ. ಅದನ್ನು ಶಿಕ್ಷಕರು ಅರಿತುಕೊಳ್ಳಬೇಕು. ಸಂಬಳಕ್ಕಾಗಿ ಶಿಕ್ಷಕರಾಗದೇ, ಸೇವೆಗಾಗಿ ಶಿಕ್ಷಕರಾಗಬೇಕು. ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಇತ್ತೀಚೆಗೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಇದು ಅವರ ವೃತ್ತಿಗೆ ಸರಿಯಾದುದಲ್ಲ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಮುಖಂಡರಾದ ಕೆ.ಆರ್‌. ಮಾಚಪ್ಪನವರ, ಕಲ್ಲಪ್ಪ ಸಬರದ, ಹನಮಂತ ತುಳಸಿಗೇರಿ, ಡಾ. ರವಿ ನಂದಗಾಂವ, ಅರುಣ ಕಾರಜೋಳ, ರಾಜು ಯಡಹಳ್ಳಿ, ನಾಗಪ್ಪ ಅಂಬಿ, ಕುಮಾರ ಹುಲಕುಂದ, ಗುರುಪಾದ ಕುಳಲಿ, ರಾಜಶೇಖರ ಭರಮೋಜಿ, ತಾಪಂ ಇಒ ಕಿರಣ ಘೋರ್ಪಡೆ, ತಹಸೀಲ್ದಾರ ವಿನೋದ ಹತ್ತಳ್ಳಿ, ಬಿಇಒ ಎಸ್‌.ಎಮ್‌. ಮುಲ್ಲಾ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಶಾಲಾ ಮುಖ್ಯೋಪಾಧ್ಯಯರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಮುಧೋಳ ಕ್ಷೇತ್ರಕ್ಕೆ 4 ಕೋಟಿ ಅನುದಾನ: ಮುಧೋಳ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು .4 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಧೋಳ ಪಟ್ಟಣದ ರನ್ನ ಕ್ರೀಡಾಂಗಣದಲ್ಲಿ ರನ್ನಿಂಗ್‌ ಟ್ಯ್ರಾಕ್‌ (ಮಡ್‌ ಟ್ರ್ಯಾಕ್‌, ಲಾಂಗ್‌ ಜಂಪ್‌, ಹೈ ಜಂಪ್‌, ವಾಕಿಂಗ್‌ ಟ್ರ್ಯಾಕ್‌) ನಿರ್ಮಾಣಕ್ಕೆ 10 ಲಕ್ಷ, ಮುಧೋಳ ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಮಲ್ಟಿಜಿಮ್‌ ನಿರ್ಮಾಣ ಮತ್ತು ಕ್ರೀಡಾ ಸಾಮಗ್ರಿಗಾಗಿ 25 ಲಕ್ಷ, ಮುಧೋಳ ಪಟ್ಟಣದ ವೆಂಕಟೇಶ್ವರ ಕೆರೆ ಹತ್ತಿರ ನಗರಸಭೆ ಜಾಗೆಯಲ್ಲಿ ಮಲ್ಟಿಜಿಮ್‌ ನಿರ್ಮಾಣ ಹಾಗೂ ಕ್ರೀಡಾ ಸಾಮಗ್ರಿಗಾಗಿ 25ಲಕ್ಷ, ಮುಧೋಳ ಪಟ್ಟಣದ ರನ್ನ ಕ್ರೀಡಾಂಗಣ ಸುತ್ತಲೂ ಗ್ಯಾಲರಿ ನಿರ್ಮಾಣಕ್ಕಾಗಿ 10ಲಕ್ಷ, ಮುಧೋಳ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ವಾಲಿಬಾಲ್‌ ಕೋರ್ಚ್‌, ಮಲ್ಟಿಜಿಮ್‌ ನಿರ್ಮಾಣ ಹಾಗೂ ಕ್ರೀಡಾ ಸಾಮಗ್ರಿಗಳಿಗಾಗಿ 70ಲಕ್ಷ, ಮುಧೋಳ ತಾಲೂಕಿನ ಲೋಕಾಪೂರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ವಾಲಿಬಾಲ್‌ ಕೋರ್ಚ್‌, 

ಧ್ವಜ ಅವರೋಹಣ ಬಳಿಕ ಏನು ಮಾಡಬೇಕು, ಜಮಖಂಡಿ ನಗರಸಭೆ ವಿಡಿಯೋ ಸಂದೇಶ ವೈರಲ್

ಮಲ್ಟಿಜಿಮ್‌ ನಿರ್ಮಾಣ ಹಾಗೂ ಕ್ರೀಡಾ ಸಾಮಗ್ರಿಗಳಿಗಾಗಿ 60ಲಕ್ಷ, ಮುಧೋಳ ಪಟ್ಟಣದ ರನ್ನ ಕ್ರೀಡಾಂಗಣದಲ್ಲಿ ಶೌಚಾಲಯ ನಿರ್ಮಾಣ ಮತ್ತು ಪಾರ್ಕಿಂಗ್‌ ನಿಲ್ದಾಣಕ್ಕಾಗಿ 20 ಲಕ್ಷ ಒಟ್ಟು 400 ಲಕ್ಷ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ಕೆ.ಆರ್‌. ಮಾಚಪ್ಪನವರ, ಕಲ್ಲಪ್ಪ ಸಬರದ, ಪ್ರಕಾಶ ವಸ್ತ್ರದ, ಹನಮಂತ ತುಳಸಿಗೇರಿ, ಡಾ. ರವಿ ನಂದಗಾಂವ, ಅರುಣ ಕಾರಜೋಳ, ರಾಜು ಯಡಹಳ್ಳಿ, ನಾಗಪ್ಪ ಅಂಬಿ, ಕುಮಾರ ಹುಲಕುಂದ, ಗುರುಪಾದ ಕುಳಲಿ, ರಾಜಶೇಖರ ಭರಮೋಜಿ, ತಾಪಂ ಇಒ ಕಿರಣ ಘೋರ್ಪಡೆ, ತಹಸೀಲ್ದಾರ ವಿನೋದ ಹತ್ತಳ್ಳಿ, ಪಿಡಬ್ಲ್ಯೂಡಿ ಎಂಜಿನಿಯರ್‌ ಎಸ್‌.ಎಸ್‌. ಸಾವನ್‌, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೋಹನ ಕೋರಡ್ಡಿ, ಬಿಇಒ ಎಸ್‌.ಎಮ್‌. ಮುಲ್ಲಾ ಸೇರಿದಂತೆ ಇತರರು ಇದ್ದರು.

Follow Us:
Download App:
  • android
  • ios