ಅನವಾಲ ಏತ ನೀರಾವರಿಗೆ ಸಚಿವ ಸಂಪುಟದ ಅನುಮೋದನೆ: ಸಚಿವ ಕಾರಜೋಳ
ಅನವಾಲ ಏತ ನೀರಾವರಿ ಯೋಜನೆಯ .411.10 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬಾಗಲಕೋಟೆ (ಆ.13): ಜಿಲ್ಲೆಯ ಬಾದಾಮಿ ಮತ್ತು ಬಾಗಲಕೋಟೆ ತಾಲೂಕಿನ ಘಟಪ್ರಭಾ ಬಲದಂಡೆ ಕಾಲುವೆಯ ಸುಮಾರು 14525.43 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಅನವಾಲ ಏತ ನೀರಾವರಿ ಯೋಜನೆಯ .411.10 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಘಟಪ್ರಭಾ ಯೋಜನೆಯಡಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಭಾಗ, ರಾಮದುರ್ಗ, ಸವದತ್ತಿ, ಬದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ ತಾಲೂಕುಗಳ ಒಟ್ಟಾರೆ 310823 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲು ಯೋಜಿಸಲಾಗಿದೆ. ಸದರಿ ಯೋಜನೆಯಡಿ ಬಲದಂಡೆ ಮುಖ್ಯ ಕಾಲುವೆಯ 199 ಕಿಮೀ ಮತ್ತು ಎಡದಂಡೆ ಮುಖ್ಯ ಕಾಲುವೆಯ 109 ಕಿಮೀ, ಬಲದಂಡೆ ಉಪ ಕಾಲುವೆ 88 ಕಿಮೀ ಎಡದಂಡೆ ಉಪ ಕಾಲುವೆ 210 ಕಿಮೀ ಮತ್ತು ಬಲದಂಡೆ ಹಂಚು ಕಾಲುವೆ 994 ಕಿಮೀ ಹಾಗೂ ಎಡದಂಡೆ ಹಂಚು ಕಾಲುವೆ 494 ಕಿಮೀಗಳನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವರದಿಯನ್ನು ಆಧರಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಐತಿಹಾಸಿಕ ಬಾದಾಮಿಯ ಬನಶಂಕರಿದೇವಿಗೆ ನೇಕಾರರಿಂದ ಸೀರೆಗಳ ವಿಶೇಷ ಅಲಂಕಾರ
ಈ ಯೋಜನೆಯಡಿ ಬಲದಂಡೆ ಮುಖ್ಯ ಕಾಲುವೆಯು 199 ಕಿಮೀ ಉದ್ದ ಇದ್ದು, ಡಿಸ್ಚಾಜ್‌ರ್ 66.56 ಕ್ಯುಮೆಕ್ಸ್ ಮೂಲಕ 169129 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, 2004ರಲ್ಲಿ ಫಟಪ್ರಭಾ ಬಲದಂಡೆ ಮುಖ್ಯ ಕಾಲುವೆಯ ನಿರ್ಮಾಣದ ನಂತರ 148.00 ಕಿಮೀ ಯಿಂದ 199 ಕಿಮೀವರೆಗೆ ಸಮರ್ಪಕವಾಗಿ ನೀರು ತಲುಪದೇ ಸುಮಾರು 24750.00 ಹೆ. ಅಚ್ಚುಕಟ್ಟು ಪ್ರದೇಶಗಳು, ಒಣ ಪ್ರದೇಶವಾಗಿದ್ದು, ಇದು ನೀರಾವರಿಯಿಂದ ವಂಚಿತವಾಗಿರುತ್ತದೆ ಎಂದು ತಿಳಿಸಿದರು. ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ನೀರಾವರಿ ನಿಗಮ ಇವರು ಸಲ್ಲಿಸಿರುವ ವಿವರವಾದ ಯೋಜನಾ ವರದಿಯಲ್ಲಿ ಘಟಪ್ರಭಾ ಬಲದಂಡೆ ಕಾಲುವೆಯು ಕೇವಲ 2000 ಕ್ಯುಸೆಕ್ ಹರಿವನ್ನು ಮಾತ್ರ ತೆಗೆದುಕೊಳ್ಳುವ ಬದಲು 2000 ಕ್ಯುಸೆಕ್ ಮಾತ್ರ ಬಿಡಲಾಗುತ್ತಿದೆ.
ರಾಜ್ಯದ ಮೀನುಗಾರರಿಗೆ ನಿಲ್ಲದ ಸಂಕಷ್ಟ, ಬೇರೆ ರಾಜ್ಯದವರಿಗೆ ಗುತ್ತಿಗೆಗೆ ಚಿಂತನೆ!
ಕಾಲುವೆಯ ಮೇಲ್ಭಾಗದಲ್ಲಿ ವಿನ್ಯಾಸಿಸಿರುವಂತೆ 2100 ಕ್ಯುಸೆಕ್ ಬದಲು 2000 ಕ್ಯುಸೆಕ್ ಮಾತ್ರ ಬಿಡಲಾಗುತ್ತಿದೆ. ಕಾಲುವೆಯ ಮೇಲ್ಭಾಗದ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇದರಿಂದಾಗಿ ಯೋಜಿತ ಬಳಕೆಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಕಾಲುವೆಯ ಮೇಲ್ಭಾಗದಲ್ಲಿ ಬಳಸಲಾಗುತ್ತಿರುವುದರಿಂದ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡಾಗಿನಿಂದ ಕಿಮೀ 148.00 ನಂತರದ ಪ್ರದೇಶಕ್ಕೆ ಸಾಕಷ್ಟುಪ್ರಮಾಣದ ನೀರು ಹರಿಯುತ್ತಿಲ್ಲವಾದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು, ರೈತರುಗಳು ಬಾಧಿತ 24750.00 ಹೆ. ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸುತ್ತಿರುವುದಾಗಿ ಸದರಿ ಯೋಜನೆಗೆ ಅವಶ್ಯವಿರುವ 3.64 ಟಿಎಂಸಿ ನೀರಿನ ಹಂಚಿಕೆ ಅವಶ್ಯಕವಿರುತ್ತದೆ ಎಂದು ವಿವರಿಸಿದರು.