Asianet Suvarna News Asianet Suvarna News

ಕಬಿನಿ ಜಲಾಶಯಕ್ಕೆ ಸಚಿವ ಗೋವಿಂದ ಕಾರಜೋಳ ಭೇಟಿ: ಪರಿಶೀಲನೆ

ತಾಲೂಕಿನ ಕಬಿನಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, ರಾಜ್ಯದಲ್ಲಿ ಭಾರಿ ಮಳೆಯಿಂದ ನಾಲೆಗಳು, ಲೈನಿಂಗ್‌, ರಸ್ತೆ, ಬೆಟ್ಟ ಕುಸಿದಿದೆ. ಸೇತುವೆಗಳು ಕೊಚ್ಚಿ ಹೋಗಿವೆ. ಇದರ ವೀಕ್ಷಣೆ ನಡೆಸಲಾಗುತ್ತಿದೆ. 

Minister Govinda Karajola visit to Kabini Reservoir gvd
Author
Bangalore, First Published Aug 23, 2022, 1:35 AM IST

ಎಚ್‌.ಡಿ. ಕೋಟೆ (ಆ.23): ತಾಲೂಕಿನ ಕಬಿನಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, ರಾಜ್ಯದಲ್ಲಿ ಭಾರಿ ಮಳೆಯಿಂದ ನಾಲೆಗಳು, ಲೈನಿಂಗ್‌, ರಸ್ತೆ, ಬೆಟ್ಟ ಕುಸಿದಿದೆ. ಸೇತುವೆಗಳು ಕೊಚ್ಚಿ ಹೋಗಿವೆ. ಇದರ ವೀಕ್ಷಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು ತುರ್ತು ರಿಪೇರಿಗಾಗಿ 8.10 ಕೋಟಿ ಬೇಕಿದೆ. ಇದರ ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಿದ್ದು, ಕೂಡಲೇ ಅಂದಾಜು ಪಟ್ಟಿ ಸಿದ್ದಪಡಿಸಿ ಕಾಮಗಾರಿ ಆರಂಭಿಸಲು ತಿಳಿಸಲಾಗಿದೆ ಎಂದರು.

ಈ ಬಾರಿ ವಾಡಿಕೆಗಿಂತ 10 ಪಟ್ಟು ಹೆಚ್ಚು ಮಳೆಯಾಗಿದೆ. ಇದರಿಂದ ರೈತರ ಬೆಳೆ, ಮನೆ, ಫಸಲು ಹಾಳಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಖಾತೆಗೆ ತುರ್ತು ನಿರ್ವಾಹಣೆಗಾಗಿ ಹಣ ನೀಡಲಾಗಿದೆ. ಮಳೆಯಿಂದ ಹಾನಿಯಾದ ಮನೆಗಳಿಗೆ . 50 ಸಾವಿರದಿಂದ 5 ಲಕ್ಷದವರೆಗೆ ಹಣ ನೀಡಲಾಗುತ್ತಿದೆ. ಪ್ರಾಣ ಹಾನಿಯಾದವರಿಗೆ . 5 ಲಕ್ಷ ನೀಡಲಾಗುತ್ತದೆ. ರಾಜ್ಯದಲ್ಲಿ ಒಟ್ಟಾರೆ 600 ಕೋಟಿ ಹಾನಿಯಾಗಿರುವುದಾಗಿ ತಿಳಿದು ಬಂದಿದೆ ಎಂದರು. ಅಣೆಕಟ್ಟೆಗಳು ಇರುವ ಕಡೆಗಳಲ್ಲಿ ಬೃಂದಾವನ ನಿರ್ಮಿಸಲು ಬೇಡಿಕೆ ಇದೆ. ಆದರೆ ಹಿನ್ನೀರಿನಲ್ಲಿ ಖಾಸಗಿಯವರು ರೆಸಾರ್ಚ್‌ಗಳನ್ನು ನಿರ್ಮಿಸಿ ಹಣ ಸಂಪಾದಿಸುತ್ತಿದ್ದಾರೆ. ಕಬಿನಿ ಜಲಾಶಯದಲ್ಲಿ ಖಾಸಗಿ ರೆಸಾರ್ಚ್‌ಗಳು ಸಫಾರಿ ಮಾಡುತ್ತಿರುವ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಅವರು ಹೇಳಿದರು.

ಮಡಿಕೇರಿ ಚಲೋ ಹಿಂತೆಗೆದುಕೊಳ್ಳಿ: ಸಿದ್ದರಾಮಯ್ಯಗೆ ಮಾಜಿ ಕುಚುಕು ಮನವಿ, ಸಲಹೆ

ಬೃಂದಾನವನವನ್ನು ಖಾಸಗಿಯವರು ನಡೆಸಲು ಕ್ರಮವಹಿಸಲಾಗುವುದು. ತಾಲೂಕಿನ ತಾರಕಾ ಜಲಾಶಯಕ್ಕೆ ಏತ ನೀರಾವರಿ ಯೋಜನೆಯ ಪೈಪ್‌ಗಳು ದುರಸ್ಥಿಯಾಗಿದ್ದು ಅಂತಹ ಜಾಗದಲ್ಲಿ ಬದಲಿಸಲು ಸೂಚಿಸಲಾಗಿದೆ ಎಂದರು. ಕಾಂಗ್ರೆಸ್‌ನವರಿಗೆ ಆರೋಪ ಮಾಡುವುದು ಬಿಟ್ಟರೆ ಬೇರೆ ಕೆಲಸ ಇಲ್ಲ. ದೇಶದಲ್ಲಿ 50ಕ್ಕೂ ಹೆಚ್ಚು ವರ್ಷಗಳ ಕಾಲ ಕಾಂಗ್ರೆಸ್‌ನವರು ಆಡಳಿತ ನಡೆಸಿದ್ದಾರೆ ಎಂದು ಅವರು ಕಿಡಿಕಾರಿದರು. ಈ ವೇಳೆ ಇಲಾಖೆ ಅಧಿಕಾರಿಗಳಾದ ಶಂಕರೇಗೌಡ, ಮುಖ್ಯ ಎಂಜಿನಿಯರ್‌ ವೆಂಕಟೇಶ್‌, ಅಧೀಕ್ಷಕ ಎಂಜಿನಿಯರ್‌ಗಳಾದ ಶಿವ ಮಾದಯ್ಯ, ಮೋಹನ್‌ ಕುಮಾರ್‌, ಚಂದ್ರಶೇಖರ್‌, ರಾಮೇಗೌಡ, ನಟಶೇಖರ್‌, ರಮೇಶ್‌ಬಾಬು, ಗೇಜ್‌ ನಾಗರಾಜು, ಗೌಸಿಯಾ ಇದ್ದರು.

ನೀರು ತುಂಬಿಸುವ ಯೋಜನೆ ಬೇಗ ಪೂರ್ಣಗೊಳಿಸಿ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಅಕ್ಟೋಬರ್‌ ಅಂತ್ಯದೊಳಗೆ ಮುಗಿಸಿ ನವೆಂಬರ್‌ ಒಂದು ಅಥವಾ ಎರಡನೇ ತಾರೀಕಿನಂದು ಲೋಕಾರ್ಪಣೆ ಮಾಡುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚಿಸಿದರು. ತಾಲೂಕಿನ ಮುತ್ತಿನ ಮುಳಸೋಗೆ ಬಳಿ . 295 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. 2017ರಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು 2019ರೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಇನ್ನೂ ಸಂಪೂರ್ಣ ಮುಗಿಯದೇ ಪ್ರಗತಿ ಹಂತದಲ್ಲಿದೆ. 

ದೇಶದ ಬೆಳವಣಿಗೆಗೆ ಕಾಂಗ್ರೆಸ್‌ ಕೊಡುಗೆ ಅಪಾರ: ಧ್ರುವನಾರಾಯಣ್‌

ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೆಪ ಹೇಳದೆ ಸೆಪ್ಟೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಯೋಜನೆ ಪೂರ್ಣಗೊಂಡರೆ ಪಿರಿಯಾಪಟ್ಟಣ ತಾಲೂಕಿನ 150ಕ್ಕೂ ಹೆಚ್ಚು ಕೆರೆ ಕಟ್ಟೆಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದ್ದು, 79 ಹಳ್ಳಿಗಳ ಸುಮಾರು 60 ಸಾವಿರ ಜನರಿಗೆ ಮತ್ತು ಅಲ್ಲಿನ ಜಾನುವಾರುಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಈ ಯೋಜನೆಗೆ . 133 ಕೋಟಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಶೀಘ್ರ ಮುಗಿಸಿದರೆ ಉಳಿಕೆ ಹಣ ಬಿಡುಗಡೆ ಮಾಡಲಾಗುವುದು. ಗುತ್ತಿಗೆದಾರರು ದಾನ ಧರ್ಮಕ್ಕೆ ಕೆಲಸ ಮಾಡುವುದಿಲ್ಲ. ನಾವು ಹಣ ನೀಡುತ್ತಿದ್ದೇವೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಈಗಾಗಲೇ ಕೆಲಸ ತಡವಾಗಿದ್ದು ಮತ್ತಷ್ಟುತಡವಾದರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸುವುದಾಗಿ ಅವರು ಎಚ್ಚರಿಸಿದರು.

Follow Us:
Download App:
  • android
  • ios