ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಸಚಿವ ಸಿಸಿ ಪಾಟೀಲ್
- ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರಿಗೆ ಸಚಿವ ಸಿಸಿ ಪಾಟೀಲ್ ನೆರವು
- ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಚಿಕ್ಕಬೂರು ಗ್ರಾಮದ ಬಳಿ ಘಟನೆ
ಶಿವಮೊಗ್ಗ (ಆ.29): ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರಿಗೆ ಸಚಿವ ಸಿಸಿ ಪಾಟೀಲ್ ನೆರವಾಗುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಚಿಕ್ಕಬೂರು ಗ್ರಾಮದ ಬಳಿ ಶನಿವಾರ ಸಂಜೆ ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದರು.
ಈ ಸಂದರ್ಭದಲ್ಲಿ ಸಾಗರ ತಾಲೂಕು ವೀರಾಪುರ ಮಠಕ್ಕೆ ಭೇಟಿ ನೀಡಿ ಧಾರವಾಡಕ್ಕೆ ಶಿರಾಳಕೊಪ್ಪ - ಆನವಟ್ಟಿ - ಹಾನಗಲ್ ಮಾರ್ಗವಾಗಿ ತೆರಳುತ್ತಿದ್ದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಮ್ಮ ವಾಹನವನ್ನು ನಿಲ್ಲಿಸಿ ಗಾಯಾಳುಗಳ ರಕ್ಷಣೆಗೆ ಮುಂದಾದರು.
'ರಸ್ತೆ ಸಂಪರ್ಕದಲ್ಲಿ ದೇಶಕ್ಕೇ ಕರ್ನಾಟಕ ಮಾದರಿ'
ಘಟನೆಯಲ್ಲಿ ಗಾಯಗೊಂಡ ಮಹಿಳೆಯರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲು ವಾಹನ ವ್ಯವಸ್ಥೆಯನ್ನು ಸಚಿವರು ಮಾಡಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಸ್ಥಳದಲ್ಲೇ ಆರ್ಥಿಕ ಸಹಾಯ ನೀಡಿದರು.
ಈ ಮೂಲಕ ರಸ್ತೆಯಲ್ಲಿ ಗಾಯಾಳುಗಳ ನೆರವಿಗೆ ದಾವಿಸಿ ಸಚಿವರು ಮಾನವೀಯತೆ ಮೆರೆದರು.