ದಾವಣಗೆರೆ (ಮೇ.13): ದಾವಣಗೆರೆ ಉಸ್ತುವಾರಿ ಸಚಿವನಾಗಿ ನಾನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೂ ನನ್ನ ಮೇಲೆ ಆರೋಪ ಕೇಳಿ ಬರುತ್ತಿದೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು. 

ದಾವಣಗೆರೆಯಲ್ಲಿಂದು ಮಾತನಾಡಿದ ಸಚಿವ ಬೈರತಿ ಬಸವರಾಜ್ ಸಚಿವನಾಗಿ ಸೂಕ್ತ ಕೆಲಸ ಮಾಡಿತ್ತಿದ್ದೇನೆ. ವಾರದಲ್ಲಿ ಎರಡು ಭಾರೀ ದಾವಣಗೆರೆಗೆ ಆಗಮಿಸುತ್ತಿದ್ದೇನೆ. ಆದರು ಸಹ ದಾವಣಗೆರೆಗೆ ಬರಲ್ಲ ಎಂದು ಕೆಲ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ.  ನಾನೆಷ್ಟು ಭಾರೀ ಬಂದೇ ಅಂತ ಲೆಕ್ಕ ಹಾಕಿ ಎಂದು ಗರಂ ಆದರು.  

ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಮಸ್ಯೆ ಆಗುತ್ತಿರುವುದು ನಿಜ. ಆದರೆ ಎಲ್ಲವನ್ನು ಸರಿಪಡಿಸುತ್ತಿದ್ದೇವೆ ಎಂದರು. 

ಶಾಸಕರ ಸಮಯಪ್ರಜ್ಞೆ : ತಪ್ಪಿದ ದುರಂತ - 20 ಜೀವ ಉಳಿಸಿದ ರೇಣುಕಾಚಾರ್ಯ
 
ಲಸಿಕೆ ವಿಚಾರ :  ನಮ್ಮ ಜಿಲ್ಲೆಗೆ  ಸಾಕಷ್ಟು ಲಸಿಕೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದೇನೆ. ಗೋಗರೆದರು ಜನ ಬಂದಿರಲಿಲ್ಲ ಈಗ ಬರುತ್ತಿದ್ದಾರೆ.  ಸದ್ಯ ಲಸಿಕೆ ಕೊರತೆ ಆಗಿದೆ. ತಯಾರು ಮಾಡುವ ಕಂಪನಿಯಿಂದ ತಡವಾಗಿದೆ. ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ  ಎಂದರು.

'ಕುರುಬ ಸಮಾಜಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ' ...

ಇನ್ನು ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಸುಮ್ಮನೆ ಆರೋಪ ಮಾಡುತ್ತಾ ಇದ್ದಾರೆ. ಆದರೆ ಸರ್ಕಾರ ಮುತುವರ್ಜಿ ವಹಿಸ ಕೆಲಸ ಮಾಡುತ್ತಾ ಇದ್ದಾರೆ ಎಂದರು. 

ಸಿಎಂ ಬದಲಾವಣೆ ಚರ್ಚೆ  : ಯಾವೂದೇ ಕಾರಣಕ್ಕೆ ಸಿಎಂ ಬದಲಾವಣೆ ಇಲ್ಲ. ಗೃಹ ಸಚಿವ ಅಮಿತ್ ಷಾ, ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದಾರೆ. ಎರಡು ವರ್ಷ ಬಿಎಸ್ ವೈ ಅವರೇ ಸಿಎಂ.  ಸಿಎಂ ಬದಲಾವಣೆ ಪ್ರಶ್ನೆ ಉದ್ಭವ ಆಗಿಲ್ಲ ಎಂದರು.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona