Asianet Suvarna News Asianet Suvarna News

ರಾಗಿಗೆ ಬೆಂಬಲ ಬೆಲೆ ಘೋಷಣೆ: ಕ್ವಿಂಟಾಲ್‌ಗೆಷ್ಟು..?

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಬೆಂಬಲ ಬೆಲೆಗಳನ್ನು ಘೋಷಿಸುತ್ತಿದ್ದು, ರಾಗಿಗೂ ಬೆಂಬಲ ಬೆಲೆ ನಿಗದಿಯಾಗಿದೆ. ಕ್ವಿಂಟಾಲ್‌ಗೆ ಇಂತಿಷ್ಟು ಎಂದು ಬೆಲೆ ನಿಗದಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Minimum Support Price of ragi fixed in kolar
Author
Bangalore, First Published Jan 9, 2020, 11:39 AM IST

ಕೋಲಾರ(ಜ.09): ರಾಗಿ ಬೆಳೆಗೆ 3,150 ರು. ಬೆಂಬಲ ಬೆಲೆ ಘೋಷಣೆ ಮಾಡಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಮುಂಗಾರು ಹಂಗಾಮಿ ಬೆಳೆಯಿಲ್ಲದ ಪ್ರಯೋಗಗಳ ವರದಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ.

ರಾಗಿ, ಭತ್ತ, ಶೇಂಗಾ, ತೊಗರಿ, ಹುರುಳಿ ಬೆಳೆಗಳ ಕುರಿತು ಪ್ರಯೋಗ ನಡೆಸಿದ್ದು, ಅವುಗಳಲ್ಲಿ ಕೆಲವು ಕಡೆ ಮಾವು ಜೊತೆ ರಾಗಿ ಕೂಡ ಬೆಳೆದಿದ್ದಾರೆ. ಆದರೆ ಪಹಣಿಯಲ್ಲಿ ಮಾವು ಬೆಳೆದಿರುವುದಾಗಿ ತಿಳಿದು ಬಂದಿದ್ದು, ಇವುಗಳಿಗೆ ವಿಮೆ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೋಲಾರದಲ್ಲಿ ಒಂದಾದ್ರು JDS, BJP, ಕಾಂಗ್ರೆಸ್ ಶಾಸಕರು..!

ಜುಲೈಯಿಂದ ಡಿಸೆಂಬರ್‌ವರೆಗೂ ಕೃಷಿ ಭೂಮಿಯು ಎಷ್ಟುಕನ್ವರ್ಷನ್‌ ಭೂಮಿಯಾಗಿ ಪರಿವರ್ತನೆಯಾಗಿದೆ ಎಂದು ಸರ್ವೆ ಮಾಡಿಸುವುದರ ಮೂಲಕ ಅವುಗಳ ಅಂಕಿ ಅಂಶಗಳ ಬಗ್ಗೆ ಸೂಕ್ತ ಮಾಹಿತಿ ತಿಳಿದುಕೊಳ್ಳಬೇಕು. ಹಿಂದಿನ ಸರ್ವೇಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಂದ ಸರ್ವೆ ಮಾಡಿಸಲು ತಹಸೀಲ್ದಾರ್‌ಗೆ ಸೂಚಿಸಿದ್ದಾರೆ.

ಅಧಿಕಾರಿಗಳು ಸರ್ವೆ ಮಾಡಿದ್ದ ಅಂಕಿ ಅಂಶಗಳನ್ನು ಕಂಪ್ಯೂಟರ್‌ನಲ್ಲಿ ನಮೂದಿಸುವಾಗ ತಪ್ಪು ಮಾಡಿದ್ದು, ಮುಂದೆ ಈ ರೀತಿ ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಕೋಲಾರ ತಹಸೀಲ್ದಾರ್‌ ಶೋಭಿತಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಎಲ್ಲ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಮತ್ತಿತರರಿದ್ದರು.

ಮತ ಸೆಳೆಯೋಕೆ ಸರ್ಕಾರಿ ಲಾಂ‍ಛನ ಬಳಕೆ..!

Follow Us:
Download App:
  • android
  • ios