Mysuru : ಲಾಭದತ್ತ ಸಾಗುತ್ತಿರುವ ಹಾಲು ಉತ್ಪಾದಕರ ಸಂಘಗಳು
ತಾಲೂಕಿನಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದತ್ತ ಸಾಗುತ್ತಿದ್ದು, ಯಾವುದೇ ಪಕ್ಷ ಬೇಧವಿಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದ್ದೇನೆ ಎಂದು ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.
ರಾವಂದೂರು (ಡಿ.14): ತಾಲೂಕಿನಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದತ್ತ ಸಾಗುತ್ತಿದ್ದು, ಯಾವುದೇ ಪಕ್ಷ ಬೇಧವಿಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದ್ದೇನೆ ಎಂದು ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಂಗಣವನ್ನು ಶಾಸಕ ಕೆ. ಮಹದೇವ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಸುಮಾರ 195 ಸಂಘಗಳಿದ್ದು, ಯಾವುದೇ ರೀತಿಯ ಸಮಸ್ಯೆಗಳಿಲ್ಲದೇ ಲಾಭದಲ್ಲಿ ನಡೆಯುತ್ತಿವೆ. ಗುಣಮಟ್ಟದ ಹಾಲನ್ನು (Milk) ಉತ್ಪಾದಕರು ಸಂಘಕ್ಕೆ ಹಾಕುವುದರ ಮೂಲಕ ಜಿಲ್ಲೆಯಲ್ಲಿಯೇ ಹೆಚ್ಚು ಹಾಲನ್ನು ಉತ್ಪಾದಿಸುವ ತಾಲೂಕಾಗಿ ಹಾಗೂ ತಾಲೂಕಿನಲ್ಲಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗೆ ಪ್ರಯತ್ನಿಸಲಾಗುತ್ತಿದೆ. ಸಹಕಾರ ಸಂಘಗಳು ಹೆಚ್ಚು ಲಾಭಗಳಿಸ ಬೇಕಾದರೇ ಕಾರ್ಯದರ್ಶಿಗಳು ಸಂಘದ ಬಗೆ ಹೆಚ್ಚು ಕಾಳಜಿ ಹೊಂದಿರಬೇಕು. ಆಗ ಮಾತ್ರ ಸಂಘಗಳು ಹೆಚ್ಚು ಲಾಭಗಳಿಸಲು ಸಾಧ್ಯವಾಗುತ್ತದೆ ಎಂದರು.
ಶಾಸಕ (MLA) ಕೆ. ಮಹದೇವ್ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಕುಟುಂಬದ ನಿರ್ವಹಣೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕಾರಿಯಾಗಿದ್ದು, ಮನೆಯ ಯಜಮಾನನನ್ನು ಅವಲಂಭಿಸದೆ ಕುಟುಂಬ ನಿರ್ವಹಣೆ ಮಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳು ನೆರವಾಗುತ್ತದೆ ಹಾಗೂ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿದ್ದು, ತಾಲೂಕಿನಲ್ಲಿ ಹೈನುಗಾರಿಕೆಗೆ ಅತೀ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಆರ್.ಎಲ… ಮಣಿ, ಮೈಮುಲ… ನಿರ್ದೇಶಕ ಎಚ್.ಡಿ. ರಾಜೇಂದ್ರ, ಪ್ರಭಾರ ವ್ಯವಸ್ಥಾಪಕ ಬಿ.ಎಸ್. ನಿಶ್ಚಿತ್, ವಿಸ್ತಾರಣಾಧಿಕಾರಿ ಕೆ.ಆರ್. ಜಯಂತ್‌ಕುಮಾರ್, ಇಒ ಎಚ್.ಪಿ. ಶಿವಮೂರ್ತಿ, ಅಧ್ಯಕ್ಷ ಎಚ್.ಡಿ. ರಾಮಚಂದ್ರ, ಉಪಾಧ್ಯಕ್ಷ ರೇಣುಕಾಚಾರ್ಯ, ನಿರ್ದೇಶಕರಾದ ವೆಂಕಟೇಶ್, ಗೋವಿಂದರಾಜು, ಪ್ರಭಾಕರ್, ನಾರಾಯಣ…, ಕೃಷ್ಣಶೆಟ್ಟಿ, ಬಸವಶೆಟ್ಟಿ, ಭಾಗ್ಯ, ಹಾಲು ಪರೀಕ್ಷಕ ಎಚ್.ಪಿ. ಕುಮಾರ್, ಜಗನ್ನಾಥ್, ಗ್ರಾಪಂ ಸದ್ಸಯ ದೀಪು, ರಾಮಚಂದ್ರ ಇದ್ದರು.
ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್
ಬೆಂಗಳೂರು(ಡಿ.09): ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ಸಾರ್ವಜನಿಕರಿಗೆ ಕೆಎಂಎಫ್ ಮತ್ತೊಂದು ಶಾಕ್ ನೀಡಿದೆ. ಹೌದು, ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಸದ್ದಿಲ್ಲದೇ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆಯಾಗುತ್ತಿವೆ. ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ. 15 ರಷ್ಟು ದರ ಏರಿಕೆಯಾಗಿದೆ.
ನವೆಂಬರ್ 24 ರಂದು ಕೆಎಂಎಫ್ ನಂದಿನಿ ಹಾಲು, ಮೊಸರಿನ ದರದ ಮೇಲೆ 2 ರೂಪಾಯಿ ಏರಿಸಿತ್ತು. ಅಲ್ಲದೇ ಆ ಸಂಪೂರ್ಣ ಹಣವನ್ನು ರೈತರಿಗೆ ನೀಡುವುದಾಗಿ ಕೆಎಂಎಫ್ ತಿಳಿಸಿತ್ತು. ಆದ್ರೆ ಹಾಲು, ಮೊಸರು ದರ ಏರಿಕೆಗೂ ಮೊದಲೇ ಹಂತಹಂತವಾಗಿ ಉತ್ಪನ್ನಗಳ ಬೆಲೆಯನ್ನ ಕೆಎಂಎಫ್ ಏರಿಸಿದೆ.
ನಂದಿನಿ ಹಾಲಿನ ಬೆಲೆ ಹೆಚ್ಚಳ: ಕಾಫಿ-ಟೀ ಹಾಗೂ ಉಪಹಾರದ ಮೇಲೆ ಎಫೆಕ್ಟ್
ಯಾವ ಉತ್ಪನ್ನಗಳ ಬೆಲೆ ಎಷ್ಟಿತ್ತು?, ಈಗ ಉತ್ಪನ್ನಗಳ ದರ ಎಷ್ಟಾಗಿದೆ?
* ತುಪ್ಪ 1 ಕೆ.ಜಿ 520 ರಿಂದ 610 ರೂಗೆ ಏರಿಕೆ
* ಪೇಡ 250 ಗ್ರಾಂ 105 ರಿಂದ 140 ರೂಪಾಯಿ ಏರಿಕೆ
* ಮೈಸೂರು ಪಾಕ್ 250 ಗ್ರಾಂ 115 ರಿಂದ 160 ರೂಪಾಯಿಗೆ ಏರಿಕೆ
* ಕೋವಾ 200 ಗ್ರಾಂ 90 ರಿಂದ 100 ರೂಪಾಯಿ ಏರಿಕೆ
* ಜಾಮೂನ್ ಅರ್ಧ ಕೆಜಿ ಟಿನ್ 105 ರಿಂದ 135 ರೂಪಾಯಿಗೆ ಏರಿಕೆ
* ಪ್ಲೇವರ್ಡ್ ಮಿಲ್ಕ್ 20 ರಿಂದ 25 ರೂಪಾಯಿಗೆ ಏರಿಕೆ
* ನಂದಿನಿ ಐಸ್ ಕ್ರೀಂನ ಪ್ರತಿ ಪ್ಯಾಕೇಟ್ ಮೇಲೂ 5 ರೂಪಾಯಿ ಏರಿಕೆ
* ಪನ್ನೀರು ಪ್ರತಿ ಕೆಜಿಗೆ 20 ರೂಪಾಯಿ ಏರಿಕೆ