Asianet Suvarna News Asianet Suvarna News

MES Riots : ಸಾರಿಗೆ ಬಸ್ ಮೇಲೆ ಮಸಿ ಬರಹ : ಮತ್ತೆ ವಿಕೃತಿ

  • ಮಹಾರಾಷ್ಟ್ರ ಏಕೀಕರಣ ಸಮೀತಿ (ಎಂಇಎಸ್‌) ಕಿಡಿಗೇಡಿಗಳ ಅಟ್ಟಹಾಸ
  • ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಮುಂದುವರಿಕೆ
MES  Again Write in Black ink On Karnataka Transport Department Bus  snr
Author
Bengaluru, First Published Dec 22, 2021, 7:46 AM IST

ಕಲಬುರಗಿ (ಡಿ.22):  ಮಹಾರಾಷ್ಟ್ರ (Maharashtra) ಏಕೀಕರಣ ಸಮೀತಿ (ಎಂಇಎಸ್‌ -  MES ) ಕಿಡಿಗೇಡಿಗಳ ಅಟ್ಟಹಾಸ ಕರ್ನಾಟಕ- ಮಹಾರಾಷ್ಟ್ರ (Karnataka Maharashtra)  ಗಡಿ ಭಾಗದಲ್ಲಿ ಮುಂದುವರೆದಿದೆ. ಎಂಇಎಸ್‌  ಕಾರ್ಯಕರ್ತರು ಕಲ್ಯಾಣ ಕರ್ನಾಟಕದ ಸಾರಿಗೆ ಬಸ್‌ ತಡೆದು, ಬಸ್‌ (Bus)  ಮೇಲೆ ಜೈ ಶಿವಾಜಿ, ಜೈ ಶಿವಸೇನೆ ಎಂದು ಬರೆದು ಘೋಷಣೆಗಳನ್ನು ಕೂಗಿರುವ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ.  ಮುಂಬೈನಿಂದ (Mumbai)  ಕಲಬುರಗಿಗೆ (Kalaburagi) ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ (KSRTC)  ಸೇರಿದ್ದ ಬಸ್‌ ತಡೆದು ನಿಲ್ಲಿಸಿದ ಎಂಇಎಸ್‌ (MES) ಕಿಡಿಗೇಡಿಗಳು, ಬಸ್‌ ಮೇಲೆ ಜೈ ಶಿವಾಜಿ ಅಂತಾ ಬರೆದಿದ್ದಾರೆ. ಬಸ್‌ ಮುಂಭಾಗದಲ್ಲಿ ಎಂಇಎಸ್‌ ಧ್ವಜ ಕಟ್ಟಿ, ಬಸ್‌ಗೆ ಕಪ್ಪು ಮಸಿ ಬಳಿದಿದ್ದಾರೆ. ನಂತರ ಚಾಲಕನ ಕೈಗೆ ಎಂಇಎಸ್‌ ಧ್ವಜ ನೀಡಿ ಜೈ ಶಿವಾಜಿ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದ್ದಾರೆ.

ಈ ಪುಂಡಾಟಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದ್ದು, ಎಂಇಎಸ್‌ ಕಾರ್ಯಕರ್ತರ ವಿಕೃತಿ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಎಂಇಎಸ್‌ ಕಿಡಿಗೇಡಿಗಳ ವಿರುದ್ಧ ತಕ್ಷಣ ಕಾನೂನು ಕ್ರಮಕ್ಕೆ ಮುಂದಾಗುವಂತೆ ಕಲಬುರಗಿ ಜಿಲ್ಲೆಯ ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಕಲಬುರಗಿ (Kalaburagi) ಜಿಲ್ಲೆಯ ಆಳಂದ, ಅಫಜಲ್ಪುರ ತಾಲೂಕುಗಳು ಮಹಾರಾಷ್ಟ್ರದ ಸೊಲ್ಲಾಪುರ ಗಡಿ ಹಂಚಿಕೊಂಡಿವೆ. ಇದೀಗ ಈ ಗಡಿಯಲ್ಲಿ ಕಳೆದ 2 ದಿನದಿಂದ ಅವ್ಯಕ್ತ ಭಯ- ಆತಂಕ ಮೂಡಿದೆ. ಹೀಗಾಗಿ ಪರಸ್ಪರ ಉಭಯ ರಾಜ್ಯಗಳ ಜನತೆ ಗಡಿ ಮೂಲಕ ವಾಹನ (Vehicle)  ಸಂಚಾರಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ.

ಇಲ್ಲಿನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯವರು ಮಹಾರಾಷ್ಟ್ರದ (Maharashtra) ಊರುಗಳಾದ ಸೊಲ್ಲಾಪುರ, ಔರಂಗಾಬಾದ್‌, ಲಾತೂರ್‌, ಸಾಂಗಲಿ, ಮೀರಜ್‌ ಇಲಿಗೆ ಬಸ್ಸುಗಳನ್ನು ಓಡಿಸಲು ಆಲೋಚಿಸುವಂತಾಗಿದೆ. ದಿನ ನಿತ್ಯದ ಬೆಳವಣಿಗೆಗಳನ್ನು ಅಮೂಲಾಗ್ರವಾಗಿ ತಿಳಿದುಕೊಂಡೇ, ಪರಿಶೀಲನೆ ನಡೆಸಿಯೇ, ಅಲ್ಲಿನ ಕಾನೂನು- ಸುವ್ಯವಸ್ಥ ಸಂಗತಿಗಳನ್ನು ಅರಿತುಕೊಂಡೇ ಬಸ್ಸುಗಳನ್ನು ಮಹಾರಾಷ್ಟ್ರದ ಊರುಗಳಿಗೆ ಓಡಿಸುವ ನಿರ್ಧಾರ ಮಾಡಲಾಗುತ್ತಿದೆ ಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಮೂಲಗಳು ’ಕನ್ನಡಪ್ರಭ’ಕ್ಕೆ ತಿಳಿಸಿವೆ.

ಸಾರಿಗೆ ಬಸ್‌ಗೆ ಕಲ್ಲು ತೂರಾಟ :   ಕನ್ನಡ (Kannada) ಧ್ವಜ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಮಾಡಿ ವಿಕೃತಿ ಮೆರೆದ ಎಂಇಎಸ್‌ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡಾಟಿಕೆ ಮೀತಿಮೀರಿದ್ದು, ಇಲ್ಲಿಂದ ಮಹಾರಾಷ್ಟ್ರಕ್ಕೆ (Maharashtra) ತೆರಳಿದ್ದ ರಾಜ್ಯ ಸಾರಿಗೆ ಬಸ್‌ ಗಳ (Bus)  ಮೇಲೆ ಕಲ್ಲು ತೂರಾಟ ನಡೆಸಿ, ಪುಂಡಾಟಿಕೆ ಮುಂದುವರೆಸಿದೆ. ಸುರಪುರ ಡಿಪೋಗೆ ಸೇರಿದ ಎನ್ನಲಾದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು ಮಹಾರಾಷ್ಟ್ರ ಪುಣೆಗೆ ಹೋಗಿದ್ದ ಸಂದರ್ಭದಲ್ಲಿ, ಭಾನುವಾರ ಮುಂಜಾನೆ ಬಸ್‌ ನಿಲ್ದಾಣದಲ್ಲಿ ಸಾರಿಗೆ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ಸಿನ ಗಾಜುಗಳು ಪುಡಿಪುಡಿಯಾಗಿವೆಯೆಲ್ಲದೆ, ಚಾಲಕ ಹಾಗೂ ನಿರ್ವಾಹಕರಿಗೆ ಜೀವಬೇದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಮಹಾರಾಷ್ಟ್ರದ ಪುಣೆಯ ಖಡ್ಕಿ ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೀವ ಬೆದರಿಕೆಯಿಂದ ಚಾಲಕ ಸುರಪುರಕ್ಕೆ ಬಸ್‌ ತೆಗೆದುಕೊಂಡು ಬರಲು ಆತಂಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ರದ್ದುಗೊಳಿಸಿ :  ಕರ್ನಾಟಕ (Karnataka)  ಧ್ವಜಕ್ಕೆ ಅವಮಾನಗೊಳಿಸಿದ ಶಿವಸೇನೆ ಮತ್ತು ಎಂಇಎಸ್‌ (MES) ಪುಂಡರಿಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಂಡು ಮತ್ತು ಕನ್ನಡಿಗರ ಮೇಲೆ ಹಾಕಿದ ಕೊಲೆ ಪ್ರಯತ್ನ ಪ್ರಕರಣವನ್ನು ದೋಷಮುಕ್ತಗೊಳಿಸುವಂತೆ ಒತ್ತಾಯಿಸಿ ನಗರದ ಗಂಜ್‌ ವೃತ್ತದಲ್ಲಿ ಜಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡ ಹೋರಾಟಗಾರರು ಮಹಾ ಸರ್ಕಾರದ ವಿರುದ್ಧ ಕಿಡಿಕಾರಿ, ಕರ್ನಾಟಕ (Karnataka) ರಾಜ್ಯದ ಏಳುಕೋಟಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಬರುವ ನಿಟ್ಟಿನಲ್ಲಿ ಮಹಾರಾಷ್ಟ್ರ (Maharashtra) ಶಿವಸೇನೆ, ಮತ್ತು ಎಂ.ಇ.ಎಸ್‌. ಸಂಘಟನೆಗಳು ಮಹಾರಾಷ್ಟ್ರದ ಕೋಲ್ಹಾಪೂರ ಜಿಲ್ಲೆಯಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕುವ ಮೂಲಕ ನಾಡದ್ರೋಹದ ಕೃತ್ಯ ಎಸಗಿದ್ದಾರೆ, ಇಂತಹ ಸಂಘಟನೆಗಳಿಗೆ ಮಹಾರಾಷ್ಟ್ರ ಸರ್ಕಾರ ಬೆಂಬಲಿಸುತ್ತಿದ್ದು, ಕನ್ನಡಿಗರ ಭಾವನೆಗಳಿಗೆ ಧಕ್ಕೆ ಬರುವ ಕೃತ್ಯಗಳಿಗೆ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿ ಕಾರಿದರು.

ಮಹಾರಾಷ್ಟ್ರದ ಶಿವಸೇನೆ ಎಂ.ಇ.ಎಸ್‌. (MES) ಸಂಘಟನೆಗಳು ರದ್ದತಿಗೆ ಹಾಗೂ ಶಿವಸೇನೆ ಮತ್ತು ಎಂ.ಇ.ಎಸ್‌. ಸಂಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಲು ಮನವಿ ಮಾಡುತ್ತೇವೆ. ಈ ಕೃತ್ಯ ಮಾತ್ರವಲ್ಲದೇ ಪ್ರತಿ ವರ್ಷದ ಕರ್ನಾಟಕ ರಾಜ್ಯೋತ್ಸವ ದಿನದಂದು ಹಾಗೂ ಬೆಳಗಾವಿ ಅ​ವೇಶನ ನಡೆಯುವ ಸಂದರ್ಭದಲ್ಲಿ ಕಪ್ಪು ಪಟ್ಟಿಧರಿಸಿ ನಾಡಿಗೆ ಅವಮಾನಿಸುವುದು, ಕನ್ನಡ ನಾಮಫಲಕಗಳನ್ನು ಧ್ವಂಸಗೊಳಿಸುವುದು, ಕನ್ನಡ ನಾಡಿನ ಧಿ​ೕಮಂತ ನಾಯಕರು ಕವಿಗಳಿಗೆ ಅವಮಾನಿಸುವುದು, ಕನ್ನಡಿಗರ ಮೇಲೆ ಹಲ್ಲೆ ಮಾಡುವುದು ಈ ರೀತಿಯ ಕೃತ್ಯಗಳು ಪ್ರತಿಸಲ ನಡೆಯುತ್ತಲೇ ಇವೆ. ಕಾರಣ ಮಹಾರಾಷ್ಟ್ರದ ಶಿವಸೇನೆ (Shivasene) ಮತ್ತು ಎಂ.ಇ.ಎಸ್‌. ಸಂಘಟನೆಗಳನ್ನು ರದ್ದುಪಡಿಸಲು ಹಾಗೂ ಮಹಾರಾಷ್ಟ್ರ (Maharashtra) ಸರ್ಕಾರ ವಜಾಗೊಳಿಸಲು ಒತ್ತಾಯಿಸಿದರು.

ಅಶೋಕ ಕರಾಟೆ, ಸಂಗಮೇಶ ಭೀಮನಳ್ಳಿ, ಸಾಬಣ್ಣ ಮುಂಡರಗಿ, ರೆಡ್ಡಿ ಕೊಟ್ರಿಕಿ, ಶಿವರಾಜ ಹಡಪದ, ಮಹೇಶÜ ಚಿಂತನಳ್ಳಿ, ವಿಜಯಕುಮಾರ ಮಡಿವಾಳ, ಧರ್ಮಣ್ಣ ತೆಲುಗುರು, ವೆಂಕಟೇಶ ಕ್ಯಾಶಪ್ಪನಳ್ಳಿ, ಮಲ್ಲುಗೌಡ ಹೊಸಳ್ಳಿ, ಸಂಜೀವರೆಡ್ಡಿ ತುಮಕೂರು ಇತರರು ಹಾಜರಿದ್ದರು.

Follow Us:
Download App:
  • android
  • ios