ಕೊರೋನಾ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಔಷಧ , ಸಿಎಂಗೆ ಪತ್ರ
ಇಡೀ ವಿಶ್ವವನ್ನು ನಾಶ ಮಾಡಲು ಹೊರಟಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಉತ್ತರವಿದ್ದು, ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ಚಿಕಿತ್ಸೆಯ ಪ್ರಯತ್ನವನ್ನು ಮುಂದುವರೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಶಿವಮೊಗ್ಗ(ಏ.28): ಇಡೀ ವಿಶ್ವವನ್ನು ನಾಶ ಮಾಡಲು ಹೊರಟಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಉತ್ತರವಿದ್ದು, ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ಚಿಕಿತ್ಸೆಯ ಪ್ರಯತ್ನವನ್ನು ಮುಂದುವರೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಮ್ಮ ದೇಶದ ಪ್ರಾಚೀನ ಔಷಧ ಪರಂಪರೆಯಲ್ಲಿ ಆಯುರ್ವೇದ ಮುಂಚೂಣಿಯಲ್ಲಿದೆ. ಪ್ರಕೃತಿಯೇ ಕೂಡಿಟ್ಟಈ ಔಷಧ ಭಂಡಾರವನ್ನು ಅಂದಿನಿಂದ ಇಂದಿನವರೆಗೆ ಯಶಸ್ವಿಯಾಗಿ ನಾವು ಬಳಸಿದ್ದೇವೆ. ಅನೇಕಾನೇಕ ಭಯಂಕರವಾದ ಕಾಯಿಲೆಗಳಿಗೆ ಆಯುರ್ವೇದಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಯಿದೆ. ಇದನ್ನು ನಮ್ಮ ಆಯುರ್ವೇದ ತಜ್ಞರ ಸಲಹೆ ಮೇರೆಗೆ ಕಂಡುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಗ್ರಾಪಂ ಅಧ್ಯಕ್ಷರ ಬಳಿ ಜಾಬ್‌ಕಾರ್ಡ್ ಇದ್ರೆ ಕ್ರಿಮಿನಲ್ ಕೇಸ್..!
ನೆರೆಯ ಕೇರಳದಲ್ಲಿ ಕೊರೋನಾ ನಿಯಂತ್ರಣ ಮೀರಿ ಹರಡುತ್ತಿದ್ದ ವೇಳೆಯಲ್ಲಿ ಕೇರಳ ಸರ್ಕಾರ ಆಯುರ್ವೇದದ ಮೊರೆ ಹೋಗಿತ್ತು. ಈ ಮೂಲಕ ನಿಯಂತ್ರಣ ಸಾಧ್ಯವಾಗಿದೆ. ಈಗಾಗಲೇ ರಾಜ್ಯ ಮತ್ತು ದೇಶದಲ್ಲಿ ಅನೇಕ ಆಯುರ್ವೇದ ತಜ್ಞರು, ಪಂಡಿತರು ತಮ್ಮ ಜ್ಞಾನವನ್ನು ಬಳಸಿ ಕೊರೋನಾಕ್ಕೆ ಔಷಧ ಕಂಡು ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಕೂಡಾ ಹೋಗಿದ್ದಾರೆ.
ತೆವಳುತ್ತಿರುವ ವೃದ್ಧನ ವಿಡಿಯೋ ವೈರಲ್, ಮನೆ ಬಾಗಿಲಿಗೆ ಬಂತು ಪಿಂಚಣಿ
ಆಯುರ್ವೇದದ ಅನುಭವಿ ವೈದ್ಯರು ತಮ್ಮ ಸಲಹೆಗಳನ್ನು ಒಂದು ವರದಿಯ ರೂಪದಲ್ಲಿ ನನಗೆ ನೀಡಿದ್ದಾರೆ. ಅನೇಕ ಉದಾಹರಣೆಗಳನ್ನು ನೀಡಿದ್ದಾರೆ. ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅಶೋಕ್‌ಕುಮಾರ್, ಕರ್ನಾಟಕ ಮತ್ತು ಕೇರಳದ ಹಲವಾರು ಹಿರಿಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆಯುರ್ವೇದ ಅನುಭವಿ ವೈದ್ಯರು ತಮ್ಮ ಸಲಹೆಗಳ ಒಂದು ವರದಿಯನ್ನು ರೂಪದಲ್ಲಿ ಕಳುಹಿಸಿದ್ದಾರೆ. ಇದೆಲ್ಲವೂ ಕೊರೋನಾ ವೈರಸ್‌ಗೆ ಆಯುರ್ವೇದ ಸೂಕ್ತ ಚಿಕಿತ್ಸೆಯನ್ನು ದೊರಕಿಸಿಕೊಡಬಲ್ಲದು ಎಂಬ ಆಶಾ ಭಾವನೆ ಮೂಡಿದೆ ಎಂದಿದ್ದಾರೆ.
ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಹತೋಟಿಗೆ ತರುವ ದೃಷ್ಟಿಯಿಂದ ಪ್ರಾಯೋಗಿಕವಾಗಿ ಒಂದು ಜಿಲ್ಲೆಯನ್ನು ಆರಿಸಿಕೊಂಡು ಅಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಬಳಸುವ ಮೂಲಕ ಅದರ ಫಲಿತಾಂಶವನ್ನು ಕಂಡುಕೊಳ್ಳಬಹುದಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಾಸ್ಕ್ ಧರಿಸದಿದ್ರೆ 100 ರೂ. ದಂಡ, ಏ.30ರಿಂದಲೇ ಜಾರಿ..!
ಲಾಕ್‌ಡೌನ್ ತಂತ್ರದ ಮೂಲಕ ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದೆ. ಇದೇ ರೀತಿ ಕರ್ನಾಟಕ ರಾಜ್ಯವು ಆಯುರ್ವೇದಲ್ಲಿ ಮದ್ದನ್ನು ಕಂಡುಕೊಂಡು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ತಾವು ಬಯಸಿದರೆ ಆಯುರ್ವೇದ ವೈದ್ಯರಾದ ಡಾ.ಅಶೋಕ್‌ಕುಮಾರ್ ಮತ್ತು ಹಿರಿಯ ವೈದ್ಯರು ತಮ್ಮನ್ನು ಭೇಟಿ ಮಾಡಲು ಇಚ್ಚಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.