ಮೈಸೂರು(ಏ.28): ಕೊರೋನಾ ವೈರಸ್‌ನಿಂದಾಗಿ ಜನರಿಗೆ ಮಾಸ್ಕ್ ಧರಿಸುವ, ಕೈಗಳನ್ನು ತೊಳೆಯುವುದರ ಮಹತ್ವ ಅರಿವಾಗತೊಡಗಿದೆ. ಇದನ್ನು ಮನಗಂಡು ಮಾಸ್ಕ್ ಧರಿಸದಿದ್ದರೆ, ರಸ್ತೆಯಲ್ಲಿ ಉಗುಳಿದರೆ ದಂಡ ವಿಧಿಸಲು ನಿರ್ಧರಿಸಲಾಗಿದೆ.

"

ಇನ್ಮುಂದೆ ಮಾಸ್ಕ್ ಧರಿಸೋದಿಲ್ವಾ..? ರಸ್ತೇಲಿ ಉಗುಳುತ್ತೀರಾ...? ಹಾಗಿದ್ರೆ ದಂಡ ಕಟ್ಟಲು ರೆಡಿಯಾಗಿ. ಹೌದು. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾದ ಪಾಲಿಕೆ ದಂಡ ವಿಧಿಸಲು ಸಜ್ಜಾಗಿದೆ.

ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!

ಮಾಸ್ಕ್ ಧರಿಸದಿದ್ರೆ 100 ರೂ ದಂಡ, ರಸ್ತೆಯಲ್ಲಿ ಉಗುಳಿದ್ರೂ 100 ರೂ ದಂಡ, ಏಪ್ರಿಲ್ 30 ರಿಂದ ಅನ್ವಯಿಸುವಂತೆ ಜಾರಿಯಾಗಲಿದೆ. ಪಾಲಿಕೆ ಸಿಬ್ಬಂದಿಗಳು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಿದ್ದಾರೆ.

ಇಂದಿನಿಂದ ಏಪ್ರಿಲ್ 30 ರವರೆಗೆ ಜಾಗೃತಿ ಮೂಡಿಸಲಿರುವ ಪಾಲಿಕೆ ಅಧಿಕಾರಿಗಳು ಏಪ್ರಿಲ್ 30ರ ನಂತರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ಹೇರಲಿದ್ದಾರೆ. ಇದಕ್ಕಾಗಿ 9 ತಂಡಗಳನ್ನೂ ರಚನೆ ಮಾಡಲಾಗಿದೆ.

ಸಬ್‌ ರಿಜಿಸ್ಟ್ರಾರ್‌ ಕಚೇರಿ, ಆಸ್ತಿ ನೊಂದಣಿ ಆರಂಭಕ್ಕೆ ನಿರ್ಧಾರ

ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ರ ನಿಯಮ 431 ರ ಅನ್ವಯ ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಜನ ಮಾಸ್ಕ್ ಧರಿಸಿ ದಂಡದಿಂದ ತಪ್ಪಿಸಿಕೊಳ್ಳಬಹುದಾಗಿದೆ. ರಸ್ತೆಯಲ್ಲಿ ಕಂಡು ಕಂಡಲ್ಲಿ ಉಗುಳುವುದನ್ನ ನಿಲ್ಲಿಸಬೇಕಿದೆ.