ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಗಳ ಅಂಧ ದರ್ಬಾರ್‌ ನಡೆಯುತ್ತಿದ್ದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಮಧ್ಯವರ್ತಿಗಳು, ಹಣವಿಲ್ಲದೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ?

ಗುಂಡ್ಲುಪೇಟೆ (ಡಿ.01): ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಗಳ ಅಂಧ ದರ್ಬಾರ್‌ ನಡೆಯುತ್ತಿದ್ದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಮಧ್ಯವರ್ತಿಗಳು, ಹಣವಿಲ್ಲದೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ? ಇದಕ್ಕೆಲ್ಲ ನೆರೆ ರಾಜ್ಯಗಳ ಬಂಡವಾಳಶಾಹಿಗಳು ಜಮೀನು ಖರೀದಿಸುತ್ತಿರುವ ಕಾರಣ ಕೇಳಿದಷ್ಟು ಹಣ ಕೊಡುವ ಕಾರಣ ನೆರೆ ರಾಜ್ಯಗಳ ವ್ಯಕ್ತಿಗಳ ಕೆಲಸ ಸಲೀಸಾಗಿ ನಡೆಯುತ್ತಿವೆ. ಸಬ್‌ರಿಜಿಸ್ಟರ್‌ ಕಚೇರಿ ಮುಂದೆ ನಾಮಫಲಕ ಹಾಕಲಾಗಿದೆ. ಆದರೆ, ನಾಮಫಲಕದ ನಿಯಮಗಳಲ್ಲಿ ಒಂದೂ ಪಾಲನೆಯಾಗುತ್ತಿಲ್ಲ, ಕಾರಣ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು ಮಧ್ಯವರ್ತಿಗಳ ಹಾವಳಿಗೆ ಬ್ರೇಕ್‌ ಯಾವಾಗ ಎಂದು ಜನರು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ.

ಕಾಯುವ ಬದಲು ಹಣ: ಜಮೀನು ನೋಂದಣಿಗೆ ಬರುವ ನೆರೆ ರಾಜ್ಯಗಳ ಹಾಗೂ ರಾಜ್ಯದ ಬಂಡವಾಳ ಶಾಹಿಗಳು ಕಚೇರಿಯಲ್ಲಿ ಕಾದು ನಿಲ್ಲುವ ಬದಲು ಅಧಿಕಾರಿಗಳಿಗೆ ಹಾಗೂ ಮಧ್ಯವರ್ತಿಗಳಿಗೆ ಹಣದಾಸೆ ತೋರಿಸುವ ಕಾರಣ ನೋಂದಣಿ ಶೀಘ್ರ ಆಗುತ್ತಿವೆ. ರೈತರು ಹಾಗೂ ಮಧ್ಯ ವರ್ಗದ ಜನರು ಕಚೇರಿ ಮುಂದೆ ಕಾದು ನಿಲ್ಲಬೇಕು, ಹಣದ ವಾಸನೆ ತೋರಿಸಬೇಕು, ಅದು ಮಧ್ಯವರ್ತಿಗಳ ಮೂಲಕ ಎಂದು ರೈತರು ಹಾಗೂ ಸಾರ್ವಜನಿಕರು ದೂರಿದ್ದಾರೆ. ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಮಧ್ಯವರ್ತಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅಲ್ಲದೆ ಕಚೇರಿಯ ಅಭಿಲೇಖಾಲಾಯ ಕೊಠಡಿಗೂ ತೆರಳುತ್ತಿದ್ದಾರೆ ಎಂದರೆ ಅ​ಕಾರಿಗಳ ನಿರ್ಲಕ್ಷತ್ರ್ಯತೆಗೆ ಸಾಕ್ಷಿಯಾಗಿದೆ.

ಕೊಳ್ಳೇಗಾಲದಲ್ಲಿ ಕುಸ್ತಿ ಪಂದ್ಯಾವಳಿ ಹೆಮ್ಮೆ ವಿಚಾರ: ಶಾಸಕ ಮಹೇಶ್‌

ಬೋರ್ಡಿನಲ್ಲೇನಿದೆ?: ದಾಖಲೆಗಳನ್ನ ಕೌಂಟರ್‌ನಲ್ಲಿ ನೀಡಿ ಟೋಕನ್‌ ಪಡೆದು ಸರದಿಗಾಗಿ ಕಾಯುವಂತೆ ನೋಟಿಸ್‌ ಬೋರ್ಡ್‌ನಲ್ಲಿದೆ. ನೋಂದಣಿಗೆ ಸಂಬಂಧಪಟ್ಟವರು ಮಾತ್ರ ಕಚೇರಿಯಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನ ಸಂಪರ್ಕಿಸಬೇಡಿ ಎಂದು ನಾಮಫಲಕದಲ್ಲಿದೆ. ಆದರೆ, ನೋಟಿಸ್‌ ಬೋರ್ಡಿಗೂ ನಡೆಯುವ ವ್ಯವಹಾರಕ್ಕೂ ಸಾಮ್ಯತೆಯೇ ಇಲ್ಲ.

ವಸೂಲಿ ದಂಧೆ?: ಆಸ್ತಿ ನೋಂದಣಿಗೆ ಬರುವ ವ್ಯಕ್ತಿಗಳಿಂದ ಮಧ್ಯವರ್ತಿಗಳು ಸಾವಿರಾರು ರು. ವಸೂಲಿ ಮಾಡ್ತಾರೆ. ಆಸ್ತಿ ಮಾರಾಟ ಮಾಡಿದವ್ರು ಸಹ ಸರ್ಕಾರಿ ಶುಲ್ಕದ ಜೊತೆ ಲಂಚ ಕೊಡಲೇಬೇಕು ಎಂದು ವೆಂಕಟೇಶ್‌ ಆರೋಪಿಸಿದ್ದಾರೆ. ಇದೇನು ಉಪನೋಂದಣಿ ಕಛೇರಿಯೇ ಅಥವಾ ಹಣ ವಸೂಲಾತಿ ಕೇಂದ್ರವೇ? ಅಷ್ಟಕ್ಕೂ ಸರ್ಕಾರಿ ಕಚೇರಿಯೊಳಗೆ ಖಾಸಗಿ ವ್ಯಕ್ತಿ ಹಾಗೂ ಮಧ್ಯವರ್ತಿಗಳಿಗೇನು ಕೆಲಸ? ಕಣ್ಮುಂದೆ ಖಾಸಗಿ ವ್ಯಕ್ತಿಗಳ ಅಂಧ ದರ್ಬಾರ್‌ ನಡೆಯುತ್ತಿದೆ.

Chamarajanagar: ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಮಾರಾಟ: ಕಣ್ಮುಚ್ಚಿ ಕುಳಿತಿರುವ ಸರ್ಕಾರಿ ಅಧಿಕಾರಿಗಳು

ಸಾರ್ವಜನಿಕರ ಕೆಲಸ ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಸಲೀಸಾಗಿ ಆಗುತ್ತಿಲ್ಲ. ಸಬ್‌ರಿಜಿಸ್ಟರ್‌ ಶಾಮೀಲಾಗಿರುವುದೇ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಲು ಕಾರಣ. ಒಟ್ಟಾರೆ ಸಬ್‌ ಕಚೇರಿಯಲ್ಲಿ ಲಂಚಾವತಾರ ಹೆಚ್ಚಾಗಿದೆ. ಇದು ಬಡವರು ಹಾಗೂ ಮಧ್ಯಮ ವರ್ಗಗಳ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ದಿಢೀರ್‌ ಭೇಟಿ ನೀಡಿ, ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಲಿ.
-ಎನ್‌.ಕುಮಾರ್‌,ಪುರಸಭೆ ಸದಸ್ಯ