ನಮ್ಮ ಪರಂಪರೆಯ ಪ್ರತೀಕವಾದ ಕುಸ್ತಿ ಪಂದ್ಯಾವಳಿಯನ್ನು ಜಿಲ್ಲೆಯಲ್ಲೆ ಮೊದಲ ಬಾರಿಗೆ ಪ್ರಗತಿಪರ ಒಕ್ಕೂಟದ ಸಂಚಾಲಕರು ಆಯೋಜನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಶಾಸಕ ಮಹೇಶ್‌ ಹೇಳಿದರು. 

ಕೊಳ್ಳೇಗಾಲ (ನ.27): ನಮ್ಮ ಪರಂಪರೆಯ ಪ್ರತೀಕವಾದ ಕುಸ್ತಿ ಪಂದ್ಯಾವಳಿಯನ್ನು ಜಿಲ್ಲೆಯಲ್ಲೆ ಮೊದಲ ಬಾರಿಗೆ ಪ್ರಗತಿಪರ ಒಕ್ಕೂಟದ ಸಂಚಾಲಕರು ಆಯೋಜನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಶಾಸಕ ಮಹೇಶ್‌ ಹೇಳಿದರು. ಎಂಜಿಎಸ್‌ವಿ ಕಾಲೇಜಿನಲ್ಲಿ ಪ್ರಗತಿಪರ ಸಂಘಟನೆಯಿಂದ ನಡೆದ ಹೊನಲು, ಬೆಳಕಿನ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ನಾಡ ಕುಸ್ತಿ ದೇಶದ ಮೂಲ ಕ್ರೀಡೆ, ರಾಜ ಮಹಾರಾಜರು ಕಲಿಯುತ್ತಿದ್ದ 64 ವಿದ್ಯೆಗಳ ಪೈಕಿ ಕುಸ್ತಿ ಸಹಾ ಒಂದು. ಕೊಳ್ಳೇಗಾಲದಲ್ಲಿ ಈ ಪಂದ್ಯ ನಡೆಯುತ್ತಿರುವುದು ಜಿಲ್ಲೆಯ ಜನತೆ ಹೆಮ್ಮೆ ಪಡಬೇಕಾಗಿದೆ, ಇದು ನಿಜಕ್ಕೂ ಶ್ಲಾಘನೀಯ ಎಂದರು.

ಗಮನ ಸೆಳೆದ ಪಂದ್ಯಾವಳಿ: ಕೊಳ್ಳೇಗಾಲದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಾನಾ ಕಾರಣಗಳಿಗೆ ಗಮನ ಸೆಳೆಯಿತಲ್ಲದೆ ನೋಡುಗರಲ್ಲಿ ಕುತೂಹಲ ಉಂಟು ಮಾಡಿತು. ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಪೈಲ್ವಾನರು ಎದುರಾಳಿಗಳ ವಿರುದ್ಧ ಗೆಲುವಿಗಾಗಿ ಸೆಣಸಿದ್ದು, ವೀಕ್ಷಕರ ಆಕರ್ಷಿಸಿತು. ಒಟ್ಟಾರೆ ಹೊನಲು ಬೆಳಕಿನ ಈ ಪಂದ್ಯ ವೀಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಹರಿಯಾಣದ ಪೈಲ್ವಾನರಾದ ರಿಂಕು ಕುಮಾರ್‌ ಮತ್ತು ಮೈಸೂರಿನ ಪೈಲ್ವಾನ್‌ ದಿಕ್ಷೀತ್‌, ಬೆಳಗಾಂ ಪೈಲ್ವಾನ್‌ ಅಪ್ಪಸಾಬ್‌ ಹಿಂಗಳಿ ಮತ್ತು ಮಹಾರಾಷ್ಟ್ರದ ಸಾಂಗ್ಲಿ ಪೈಲ್ವಾನ್‌ ಬಾಳು ಅಪರಾದ್‌, ಜಮಖಂಡಿ ಪೈಲ್ವಾನ್‌ ಗಜಾನನ, ಮಹದೇವಪುರ ಪೈಲ್ವಾನ್‌ ವಿಕಾಸ್‌ ಇತರರು ದೈತ್ಯ ಗಾತ್ರದ ದೇಹ ಸದೃಢ ಘಟಾನುಟಿ ಪೈಲ್ವಾನರ ಕುಸ್ತಿ ವೀಕ್ಷಕಲ್ಲಿ ರೋಮಾಂಚನ ಉಂಟು ಮಾಡಿತು. 

Chamarajanagar: ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಮಾರಾಟ: ಕಣ್ಮುಚ್ಚಿ ಕುಳಿತಿರುವ ಸರ್ಕಾರಿ ಅಧಿಕಾರಿಗಳು

ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯವಾಳಿಯಲ್ಲಿ ಕನಕಪುರ ಪೈಲ್ವಾನ್‌ ಅಂಬಿಕ ಮತ್ತು ಬನ್ನೂರು ಪೆಲ್ವಾನ್‌ ಜಾನವಿ, ಗಾಣಿಗನಕೊಪ್ಪಲು ಪೈಲ್ವಾನ್‌ ನಂದಿನಿ ಮತ್ತು ಕನಕಪುರ ಲಲಿತ ಅವರೊಗೂಡಿದ ಪಂದ್ಯ ಎಲ್ಲರ ಚಿತ್ತ ಗಮನ ಸೆಳೆಯುವಂತೆ ಮಾಡಿತು. ಕುಸ್ತಿ ಆರಂಭವಾಗುತ್ತಿದಂತೆ ತಂಡೋಪ ತಂಡವಾಗಿ ಆಗಮಿಸಿದ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪಂದ್ಯ ವೀಕ್ಷಣೆಗೆ ಹಾಕಲಾಗಿದ್ದ ಆಸನಗಳ ಮೇಲೆ ಕುಳಿತು ಮುಗಿಯುವವರೆಗೂ ತದೇಕ ಚಿತ್ತದಿಂದ ವೀಕ್ಷಿಸಿದರು. ನೂರಾರು ಮಂದಿ ಕೂರಲು ಕುರ್ಚಿಗಳು ಇಲ್ಲದಿದ್ದರೂ ಪ್ರಾರಂಭದಿಂದ ಕೊನೆಯವರೆಗೂ ನಿಂತುಕೊಂಡ ಉತ್ಸಾಹದಿಂದ ವೀಕ್ಷಿಸಿದರು. ಕುಸ್ತಿ ಪಟುಗಳ ಸೆಣಸಾಟಕ್ಕೆ ನೆರೆದಿದ್ದ ಪ್ರೇಕ್ಷಕರು, ಸಿಳ್ಳೇ, ಕೇಕೆ, ಚಪ್ಪಾಳೆಗಳ ಸುರಿಮಳೆಯ ಹರಿದು ಬಂತು.

ಹಿಂದೂಗಳು ಸಂಘಟನೆಯಾಗದಿದ್ದರೆ ಧರ್ಮಕ್ಕೇ ಅಪಾಯ: ಪ್ರಮೋದ್‌ ಮುತಾಲಿಕ್‌

ಕುಸ್ತಿ ಪ್ರದರ್ಶನದಲ್ಲಿ ಆಕರ್ಷಕವಾಗಿ ಪ್ರದರ್ಶನ ನೀಡಿದ ಪೈಲ್ವಾನರಿಗೆ ನೆರೆದಿದ್ದ ಗಣ್ಯರು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ವಿಜೇತರಿಗೆ ಟ್ರೋಪಿ ಜೊತೆ ನಗದು ಬಹುಮಾನ ನೀಡಿಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಶೀಲಾ ಶಾಂತರಾಜು, ಎಎಸ್ಪಿ ಕೆ.ಎಸ್‌.ಸುಂದರ್‌ ರಾಜ್‌, ಡಿವೈಎಸ್ಪಿ ಜಿ.ನಾಗರಾಜ, ಶ್ರೀಕ್ಷೇತ್ರ ಚಿಕ್ಕಲ್ಲೂರು ದೇವಾಲಯ ಆಡಳಿತಾಧಿಕಾರಿ ಭರತರಾಜೇ ಅರಸ್‌, ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ಅಮೃತ್‌ ಪುರೋಹಿತ್‌, ಜಿಲ್ಲಾ ಬಿಜಿಪಿ ಉಪಾಧ್ಯಕ್ಷ ಡಾ. ದತ್ತೇಶ್‌ ಕುಮಾರ್‌, ನಗರಸಭೆ ಸದಸ್ಯರಾದ ಶಾಂತರಾಜು ಬಸ್ತೀಪುರ, ಪ್ರಕಾಶ್‌ ಶಂಕನಪುರ, ಜಿ.ಪಿ. ಶಿವಕುಮಾರ್‌, ಮಂಜುನಾಥ್‌, ರಾಮಕೃಷ್ಣ, ಸೋಮಣ್ಣ, ಗುತ್ತಿಗೆದಾರ ಓಲೆ ಮಹದೇವ, ಮಹೇಶ್ವರ್‌, ಮುಖಂಡರಾದ ಮುಜಾಹಿಲ್‌ ಪಾಷ, ಯುವ ಮುಖಂಡ ಜಿ.ಎನ್‌.ಲೋಕೇಶ್‌, ಪ್ರಗತಿಪರ ಒಕ್ಕೂಟದ ಸಂಚಾಲಕರಾದ ದಿಲೀಪ್‌ ಸಿದ್ದಪ್ಪಾಜಿ, ಎಸ್‌. ಸಿದ್ದಪ್ಪಾಜಿ, ಶಂಕರ್‌, ಕಿರಣ್‌, ನಗರಸಭೆ ಮಾಜಿ ಅಧ್ಯಕ್ಷ ರಮೇಶ್‌ ಇದ್ದರು.