ಬೆಂಗಳೂರು(ನ.22): ತನ್ನನ್ನು ತಾನು ಶಾಸಕನ ಮಗ ಎಂದು ಪರಿಚಯಿಸಿಕೊಂಡು ಹೆದರಿಸಿ ಯುವತಿಯರ ಮೇಲೆ ಅತ್ಯಾಚಾರ ಮಾಡುತ್ತಿದ್ದು ಎಂಬಿಎ ಪದವೀಧರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜಹಂಗೀರ್‌ ಎಂಬಾತನನ್ನು ಬಂಧಿಸಲಾಗಿದ್ದು, ಈತ ಯುವತಿಯರನ್ನು ವಂಚಿಸಿ ಅತ್ಯಾಚಾರ ಮಾಡುತ್ತಿದ್ದ.

MLA ಮಗ ಎಂದು ಹೆದರಿಸಿ ರೇಪ್ ಮಾಡಿದ್ದ ಆರೋಪಿ ಅರೆಸ್ಟ್ ಆಗಿದ್ದು, ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಅರೋಪಿ. ಹಲಸೂರು ಪೊಲೀಸರು ಅರೋಪಿಯನ್ನು ಬಂಧಿಸಿದ್ದು, ಬಂಧಿತನ ವಿರುದ್ಧ ಅತ್ಯಾಚಾರ , ಲೈಂಗಿಕ ದೌರ್ಜನ್ಯ, ವಂಚನೆ ಕೇಸ್‌ಗಳು ದಾಖಲಾಗಿದ್ದವು.

ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ!

ತಮಿಳುನಾಡು, ಕರ್ನಾಟಕದಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದು, ಬಂಧಿತ ಅರೋಪಿ ಜಹಂಗೀರ್ ಒರ್ವ ಎಂಬಿಎ ಪಧವೀದರನಾಗಿದ್ದಾನೆ. ತಮಿಳುನಾಡಿನ ತಿರುಚಿ ಮೂಲದ ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಪ್ರತಷ್ಠಿತ ಮಾಲ್ , ಹೋಟೆಲ್‌ಗಳಲ್ಲಿ ಯುವತಿಯರನ್ನು ಭೇಟಿ ಮಾಡುತಿದ್ದ. ನಂತರ ತಾನು ಮಾಲ್ ಮ್ಯಾನೆಜರ್, ಎಂಡಿ ಎಂದು ಹೇಳಿ ಪರಿಯಚ ಮಾಡಿಕೊಳ್ಳತಿದ್ದ.

ಮಂಡ್ಯ: JDS ಭದ್ರ ಕೋಟೆ ಭೇದಿಸಲು ಪ್ಲಾನ್ ಬದಲಿಸಿದ BJP

ಯುವತಿಯರ ಹಿನ್ನೆಲೆ ತಿಳಿದು ಕೆಲಸ ಕೊಡಿಸುವ ಆಫರ್ ಮಾಡುತಿದ್ದ. ಹಂತ ಹಂತವಾಗಿ ಯುವತಿರನ್ನು ತನ್ನತ್ತ ಸೆಳೆಯುತಿದ್ದ ಅರೋಪಿ ಕೆಲಸ ಕೊಡಿಸುವುದಾಗಿ ನಂಬಿಸಿ ಜೊತೆಯಲ್ಲಿ ಕರೆದೊಯ್ಯುತಿದ್ದ. ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಕೆಲಸದ ಸಂದರ್ಶನ ಇದೆ ಎಂದು ಕರೆದೊಯ್ಯುತ್ತಿದ್ದ.

ಹೋಟೆಲ್ ರೂಮ್ ಸೇರಿದ ಬಳಿಕ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಮಾಡುತ್ತಿದ್ದ. ಅತ್ಯಾಚಾರ ಬಳಿಕ ಯುವತಿಯ ಬಳಿಂದ ಮೊಬೈಲ್ ಹಣ ಒಡವೆಗಳನ್ನು ದೋಚುತ್ತಿದ್ದ.

ನಾಗಮಂಗಲ ಬಳಿ ಭೀಕರ ಅಪಘಾತ: ಆರು ಸಾವು, ಒಂಬತ್ತು ಮಂದಿಗೆ ಗಾಯ!