ಮೈಸೂರು(ನ.22): ಒಳ ಉಡುಪಿಗೆ ಅಂಬೇಡ್ಕರ್ ಚಿತ್ರ ಹಾಕಿದ್ದ ಫೋಟೋ ಶೇರ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ಗೆ ಅವಮಾನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಒಳ ಉಡುಪಿಗೆ ಅಂಬೇಡ್ಕರ್ ಚಿತ್ರ ಹಾಕಿದ್ದ ಫೋಟೋ ಶೇರ್ ಮಾಡಿದ್ದ ಬಿಜೆಪಿ ಕಾರ್ಯಕರ್ತ, ಅಶ್ಲೀಲ ಪೋಸ್ಟ್ ಶೇರ್ ಮಾಡಿದ್ದಾನೆ.

ಹುಣಸೂರು ಬಿಜೆಪಿ ಕಾರ್ಯಕರ್ತ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಅಶ್ಲೀಲವಾಗಿ ಶೇರ್ ಮಾಡಿದ್ದಾನೆ. ಒಳ ಉಡುಪಿಗೆ ಅಂಬೇಡ್ಕರ್ ಚಿತ್ರ ಹಾಕಿದ್ದ ಫೋಟೋ ಶೇರ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

ಹುಣಸೂರಿನ ವಿಪಿ ಬೋರೆ ನಿವಾಸಿ ಮಂಜುನಾಥ್‌ನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಆದಿ ಕರ್ನಾಟಕ ಯುವ ವಿಚಾರ ವೇದಿಕೆ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ದೀಪಕ್ ತಿವಾರಿ ಎಂಬಾತನ ಪೋಸ್ಟ್‌ನ್ನು ಬಿಜೆಪಿ ಕಾರ್ಯಕರ್ತ ಮಂಜುನಾಥ್ ಶೇರ್ ಮಾಡಿದ್ದ. ಪೋಸ್ಟ್ ಮಾಡಿದ ದೀಪಕ್ ತಿವಾರಿ ಬಂಧನಕ್ಕೂ ಆದಿ ಕರ್ನಾಟಕ ಯುವ ವಿಚಾರ ವೇದಿಕೆ ಆಗ್ರಹಿಸಿದೆ.

ಬಂಧಿಸದಿದ್ದರೆ ಉಗ್ರ ಹೋರಾಟ ಮಾಡಿ, ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಪಾಲ್ಗೊಂಡಿದ್ದ.

ಗಾಂಜಾ ಸೇವಿಸಿದ್ರೆ 2 ಲಕ್ಷ ಸಂಬಳ: ಕಂಪನಿಯ ವಿಚಿತ್ರ ಆಫರ್!