ನರಗುಂದದಲ್ಲಿ ಮತ್ತೆ ಭೂಕುಸಿತ: ಆತಂಕದಲ್ಲಿ ಜನತೆ
ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ| ಪಟ್ಟಣದ ಕಸಬಾ ಓಣಿಯಲ್ಲಿ ಕಾಶಪ್ಪ ಗುಡಗಾನೂರ ಅವರ ಮನೆಯಲ್ಲಿ ಭೂಕುಸಿತ| ಭಯಭೀತರಾಗ್ರಾಮದ ಜನ| ಕಾಶಪ್ಪ ಗುಡಗಾನೂರ ಅವರ ಮನೆಯಲ್ಲಿ ದಿಢೀರ್ ಭೂಕುಸಿತ| ಅದೃಷ್ಟವಷಾತ್ ಕಾಶಪ್ಪ ಗುಡಗಾನೂರ ಕುಟುಂಬದ 5 ಜನ್ರು ಪ್ರಾಣಾಪಾಯದಿಂದ ಪಾರಾಗಿದ್ದಾರೆ| ರಾತ್ರಿ ಮಲಗಿದಾಗ ಮಣ್ಣು ಉದುರುತ್ತಿದ್ದಂತೆ ಮನೆಯ ಮಂದಿಯೆಲ್ಲಾ ಎದ್ದು ಹೊರ ಓಡಿ ಬಂದಿದ್ದಾರೆ|
ಗದಗ(ನ.22): ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತವಾಗಿದೆ. ಪಟ್ಟಣದ ಕಸಬಾ ಓಣಿಯಲ್ಲಿ ಕಾಶಪ್ಪ ಗುಡಗಾನೂರ ಅವರ ಮನೆಯಲ್ಲಿ ಭೂಕುಸಿತವಾಗಿದೆ. ಇದರಿಂದ ಗ್ರಾಮದ ಜನ ಭಯಭೀತರಾಗಿದ್ದಾರೆ.
ನರಗುಂದದಲ್ಲಿ ಮತ್ತೆ ಭೂಕುಸಿತ: ಕಂಗಾಲಾದ ಜನತೆ
ಕಾಶಪ್ಪ ಗುಡಗಾನೂರ ಅವರ ಮನೆಯಲ್ಲಿ ದಿಢೀರ್ ಆಗಿ ಭೂಕುಸಿತವಾಗಿದೆ. ಅದೃಷ್ಟವಷಾತ್ ಕಾಶಪ್ಪ ಗುಡಗಾನೂರ ಕುಟುಂಬದ 5 ಜನ್ರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರಾತ್ರಿ ಮಲಗಿದಾಗ ಮಣ್ಣು ಉದುರುತ್ತಿದ್ದಂತೆ ಮನೆಯ ಮಂದಿಯೆಲ್ಲಾ ಎದ್ದು ಹೊರ ಓಡಿ ಬಂದಿದ್ದಾರೆ. ಹೀಗಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನರಗುಂದದಲ್ಲಿ ದಿಢೀರ್ ಭೂ ಕುಸಿತ: ನಿದ್ದೇ ಮಾಡೋಕು ಭಯ ಪಡ್ತಿದ್ದಾರೆ ಜನ!
ಕುಟುಂಬದ ಸದಸ್ಯರೆಲ್ಲರೂ ಮನೆಬಿಟ್ಟು ಹೊರಬರುತ್ತಿದ್ದಂತೆ ಭೂಕುಸಿತವಾಗಿದೆ. ಭೂಕುಸಿತದಿಂದ ಮನೆ ಗೋಡೆ ಹೊರಭಾಗದಲ್ಲಿ ಬಿದ್ದಿದೆ. ಇದು ಮೊದಲನೇ ಬಾರಿಗೆ ಭೂಕುಸಿತವಾದ ಘಟನೆಯಲ್ಲ, ಇದು ಇದೊಂದೇ ತಿಂಗಳಲ್ಲಿ 9ನೇ ಬಾರಿಗೆ ಭೂಕುಸಿತವಾಗಿದೆ. ಪದೇ ಪದೇ ಭೂಕುಸಿತದಿಂದ ಪಟ್ಟಣದ ಜನತೆ ಭಯಭೀತರಾಗಿದ್ದಾರೆ.