Karnataka Politics :ಸುಧಾಕರ್ ಬಣ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದ ಮುಖಂಡರು
- ಶಾಸಕ ಜೆ.ಕೆ. ಕೃಷ್ಣಾರೆಡ್ಡಿರ ನಿವಾಸದಲ್ಲಿ ತಾಲೂಕಿನ ಅನೇಕರು ಜೆಡಿಎಸ್ ಸೇರ್ಪಡೆ
- ಮಾಜಿ ಶಾಸಕ ಎಂ.ಸಿ. ಸುಧಾಕರ್ ಬಣವನ್ನು ತೊರೆದು ಜೆಡಿಎಸ್ ಸೇರ್ಪಡೆ
ಚಿಂತಾಮಣಿ (ಡಿ.14): ಶಾಸಕ ಜೆ.ಕೆ. ಕೃಷ್ಣಾ ರೆಡ್ಡಿ (MLA Krishna Reddy) ನಿವಾಸದಲ್ಲಿ ತಾಲೂಕಿನ ಹಿರೇಕಟ್ಟಿಗೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಿಡಗುರ್ಕಿ, ಕರಡಿಗುಟ್ಟ, ಜಂಗಮಪುರ, ಹಿರೇಕಟ್ಟಿಗೇನಹಳ್ಳಿ ವಿವಿಧ ಗ್ರಾಮಗಳಿಂದ ಮಾಜಿ ಶಾಸಕ ಎಂ.ಸಿ. ಸುಧಾಕರ್ (MC Sudhakar) ಬಣವನ್ನು ತೊರೆದು ಜೆಡಿಎಸ್ (JDS) ಸೇರ್ಪಡೆಗೊಂಡರು. ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ ಜೆಡಿಎಸ್ ಪಕ್ಷಕ್ಕೆ ಹಿರೇಕಟ್ಟಿಗೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಸೇರ್ಪಡೆಗೊಳ್ಳುತ್ತಿದ್ದು ಅವರು ಜೆಡಿಎಸ್ ಪಕ್ಷದಲ್ಲಿನ ಜಾತ್ಯತೀತ ತತ್ವಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ (HD Kumaraswamy) ರೈತ ಪರ ಹಾಗೂ ಅಭಿವೃದ್ಧಿ ಅದ್ಯತೆಗಳನ್ನು ಅರಿತು ಯುವ ಪಡೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದು ನುಡಿದರು.
ಮುಖಂಡರುಗಳಾದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ, ಗ್ರಾ.ಪಂ. ಸದಸ್ಯ ನಿಡಗುರ್ಕಿ ರವಿ ಎಂ, ತಾ ಜೆ ಡಿಎಸ್ ಉಪಾಧ್ಯಕ್ಷ ನಿಖಲ್‌ಗೌಡ, ನಿಡಗುರ್ಕಿ ಪಿಳ್ಳೆಗೌಡ, ವಿನಯ್ ಬಾಬು, ಹಿರೇಕಟ್ಟಿಗೇನಹಳ್ಳಿ ನರಸಿಂಹಮೂರ್ತಿ ಮಾಜಿ ಸದಸ್ಯ ವೆಂಕಟೇಶ್, ಬ್ಯಾಲಹಳ್ಳಿ ಬಿ ಕೆ ಮಂಜು ಇದ್ದರು.
ತೆನೆ ಇಳಿಸಿ ಕೈನತ್ತ ನಾಯಕನ ಚಿತ್ತ : ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ(NH Konareddy) ಚಿತ್ತ ಇದೀಗ ಕಾಂಗ್ರೆಸ್‌ನತ್ತ(Congress) ವಾಲಿದೆ. ಶೀಘ್ರದಲ್ಲೇ ತೆನೆಯ ಹೊರೆ ಇಳಿಸಿ ಕೈ ಹಿಡಿಯಲಿದ್ದಾರೆಯೇ? ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ಸಿಗರೊಂದಿಗೆ ಕೋನರಡ್ಡಿ ಒಡನಾಟ, ಅದರತ್ತ ತೋರುತ್ತಿರುವ ಒಲವು ಇಂತಹ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಉತ್ತರ ಕರ್ನಾಟಕದಲ್ಲಿ(North Karnataka) ಅಲ್ಪಸ್ವಲ್ಪ ಜೆಡಿಎಸ್(JDS) ಉಸಿರಾಡುತ್ತಿದೆ ಎಂದರೆ ಎನ್.ಎಚ್. ಕೋನರಡ್ಡಿ ಪಾತ್ರ ಅಲ್ಲಗೆಳೆಯುವಂತಿಲ್ಲ. ಆದರೆ ಇವರಿಗೆ ಸಾಥ್ ಕೊಡುವವರೇ ಯಾರೂ ಇಲ್ಲದಂತಾಗಿದೆ. ಅತ್ತ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಬರುತ್ತಿಲ್ಲ. ಇತ್ತ ಪಕ್ಷ ಸಂಘಟನೆಯೂ ಆಗುತ್ತಿಲ್ಲ. ಇಲ್ಲಿದ್ದ ನಾಯಕರೆಲ್ಲ ಬಿಜೆಪಿ(BJP), ಕಾಂಗ್ರೆಸ್‌ನತ್ತ ಹೋಗಿದ್ದಾರೆ. ಇಲ್ಲಿದ್ದರೆ ತಮಗೆ ಭವಿಷ್ಯವಿಲ್ಲ ಎಂದುಕೊಂಡು ಇದೀಗ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆ ಕೋನರಡ್ಡಿ.
ಕಳಸಾ-ಬಂಡೂರಿ(Kalasa Banduri) ಹೋರಾಟದ ಮೂಲಕ ರಾಜಕೀಯ(Politics) ಪ್ರವೇಶ ಮಾಡಿದವರು ಕೋನರಡ್ಡಿ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೊಂದಿಗೆ ನಿರಂತರವಾಗಿ ಮಹದಾಯಿಗಾಗಿ(Mahadayi) ಹೋರಾಟ ನಡೆಸಿದರೂ ಬೊಮ್ಮಾಯಿ ಅವರೊಂದಿಗೆ ಬಿಜೆಪಿಗೆ ಹೋದವರಲ್ಲ. ಅದೇ ರೀತಿ ಕಾಂಗ್ರೆಸ್‌ನೊಂದಿಗೆ ಅಂತರ ಕಾಯ್ದುಕೊಂಡವರು. ಜಾತ್ಯತೀತ ಜನತಾದಳದೊಂದಿಗೆ ಗುರುತಿಸಿಕೊಂಡು ಹಂತ-ಹಂತವಾಗಿ ಮೇಲೆ ಬಂದವರು. ಒಂದು ಬಾರಿ ಶಾಸಕರಾಗಿ(MLA), ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ(JDS-Congress Coalition Government) ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ(Political Secretary) ಕೆಲಸ ಮಾಡಿದವರು.
ಉತ್ತರ ಕರ್ನಾಟಕದಲ್ಲಿ ಎಷ್ಟೇ ಕಷ್ಟಪಟ್ಟರೂ ಪಕ್ಷ ಸಂಘಟನೆಯೇ ಆಗುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಪಕ್ಷ ಮಾಡಲಿಲ್ಲ. ಇಲ್ಲೇ ಇದ್ದರೆ ತಮಗೆ ಭವಿಷ್ಯವಿಲ್ಲ. ಚುನಾವಣೆ(Election) ಸಮೀಪವಿದ್ದಾಗ ಪಕ್ಷ ತೊರೆದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಅದರ ಬದಲಿಗೆ ಈಗಲೇ ಹೋಗುವ ಮೂಲಕ ಭವಿಷ್ಯ ಭದ್ರಪಡಿಸಿಕೊಳ್ಳಬಹುದು ಎಂಬ ಇರಾದೆ ಕೋನರಡ್ಡಿ ಅವರದು. ಹಾಗಂತ ಈಗಲೇ ಕಾಂಗ್ರೆಸ್‌ಗೆ ಹೋಗಲು ತಯಾರಿ ನಡೆಸಿದ್ದಾರೆ ಅಂತೇನೂ ಅಲ್ಲ. ಕಳೆದ ಐದಾರು ತಿಂಗಳಿಂದಲೇ ಈ ಬಗ್ಗೆ ಗುಸು ಗುಸು ನಡೆದೇ ಇತ್ತು. ಇದಕ್ಕೆ ಪುಷ್ಠಿ ನೀಡಿದಂತೆ ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿ(Vidhan Parishat Election) ಹೈಕಮಾಂಡ್ ನಿರ್ಧಾರಕ್ಕೂ ಕಾಯದೇ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ(Saleem Ahmed) ಪರವಾಗಿ ಪ್ರಚಾರ(Campaign) ಶುರು ಹಚ್ಚಿಕೊಂಡವರು ಕೋನರಡ್ಡಿ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಶಾಲು ಕೂಡ ಹೊದ್ದುಕೊಂಡರು