Asianet Suvarna News Asianet Suvarna News

Belagavi Assembly Session: ಅಧಿವೇಶದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ

*  ಆಸೆ ಆಮೀಷ ಒಡ್ಡಿ ಮತಾಂತರ ಆಗೋದಕ್ಕೆ ಅವಕಾಶವಿಲ್ಲ
*  ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ
*  ಬಡತನ ದುರುಪಯೊಗ ಮಾಡಿಕೊಂಡು ಮತಾಂತರ ಮಾಡೋದು ತಪ್ಪು

Discussion on Development of North Karnataka in Belagavi Session Says Basavaraj Bommai grg
Author
Bengaluru, First Published Dec 12, 2021, 12:40 PM IST

ಹುಬ್ಬಳ್ಳಿ(ಡಿ.12): ನಾಳೆಯಿಂದ(ಸೋಮವಾರ) ಬೆಳಗಾವಿಯಲ್ಲಿ(Belagavi) ಚಳಿಗಾಲದ ಅಧಿವೇಶ(Winter Session) ಆರಂಭವಾಗುತ್ತದೆ. ಈ ಸಂಬಂಧ ಈಗಾಗಲೇ ಎಲ್ಲಾ ತಯಾರಿಯನ್ನ ಮಾಡಿದ್ದೇವೆ. ಅಧಿವೇಶದಲ್ಲಿ ಉತ್ತರ ಕರ್ನಾಟಕ(North Karnataka) ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. 

"

ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ(Conversion Prohibition Act) ಮಂಡನೆ ವಿಚಾರ‌ದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ರೈಸ್ತ(Christian) ಸಮುದಾಯದವರು ನನ್ನನ್ನು ಭೇಟಿ ಮಾಡಿದ್ರು, ಅವರಿಗೆ ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ಹಿಂದೂ(Hindu), ಇಸ್ಲಾಂ(Islam), ಕ್ರಿಶ್ಚಿಯನ್, ಸಿಖ್(Sikh) ಸೇರಿದಂತೆ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ. ಅವರಿಗೆ ಯಾವುದೇ ಆತಂಕ ಬೇಡ. ಅವರಿಗೆ ಯಾವುದೇ ತೊಂದರೆಯಾಗಲ್ಲ. ಬದಲಾಗಿ ಬಡತನವನ್ನ ದುರುಪಯೊಗ ಮಾಡಿಕೊಂಡು ಮತಾಂತರ(Conversion) ಮಾಡೋದು ತಪ್ಪು. ಆಸೆ ಆಮೀಷ ಒಡ್ಡಿ ಮತಾಂತರ ಆಗೋದಕ್ಕೆ ಅವಕಾಶವಿಲ್ಲ. ಮತಾಂತರ ಕಾಯ್ದೆ ಚರ್ಚೆಗೂ ಮೊದಲು ಒಂದು ಕಮೀಟಿ ಮಾಡಿದ್ದೇವೆ. ಕಾನೂನು ಇಲಾಖೆಯ ಕಮೀಟಿ ಪರಿಶೀಲನೆ ಮಾಡುತ್ತಿದೆ ಅಂತ ಹೇಳಿದ್ದಾರೆ. 

Belagavi Winter Session: ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

ಕಮೀಟಿ ನೀಡುವ ವರದಿ ನಮ್ಮ ಕ್ಯಾಬಿನೆಟ್‌ಗೆ ಬರುತ್ತೆ. ಈ ಸಂಬಂಧ ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೇವೆ. ಅಲ್ಲಿಂದ ಅಸೆಂಬ್ಲಿಗೆ ಬಂದ್ರೆ ಬೆಳಗಾವಿಯಲ್ಲೇ ಚರ್ಚೆ ಮಾಡುತ್ತೇವೆ. ಯಾವ ಧರ್ಮಕ್ಕೂ(Religion) ಆತಂಕವಾಗಬಾರದು‌. ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನು ತರುವ ಪ್ರಯತ್ನವನ್ನ ನಮ್ಮ ಸರ್ಕಾರ ಮಾಡುತ್ತಿದೆ ಅಂತ ತಿಳಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ(Narendra Modi)ಟ್ವಿಟರ್ ಹ್ಯಾಕ್(Twitter Hack) ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಪ್ರಧಾನಿಗಳು ರಿಯಾಕ್ಟ್ ಮಾಡಿದ್ದಾರೆ. ಅದರ ವಿರುದ್ಧ ಕಾರ್ಯಾಚರಣೆ ಕೂಡ ಮಾಡಿದ್ದಾರೆ. ಈ ರೀತಿ ಅಲ್ಲಲ್ಲಿ ಘಟನೆಗಳು ಆಗುತ್ತಿವೆ. ತಾಂತ್ರಿಕ ಬಲದಿಂದ ಅವುಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಅಂತ ಹೇಳಿದ್ದಾರೆ. 

ಮಹದಾಯಿ ಕೇಸ್‌ ರೀ ಓಪನ್‌ ಇಲ್ಲ: ಸಿಎಂ ಬೊಮ್ಮಾಯಿ

ಬೆಳಗಾವಿ ಅಧಿವೇಶನದಲ್ಲಿ(Belagavi Session) ಸರ್ಕಾರದಿಂದ ಕಾನೂನು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಶ್ನೋತ್ತರ ಇರುತ್ತದೆ. ಪ್ರತಿಪಕ್ಷದವರು ಎತ್ತುವ ವಿಚಾರಗಳಿಗೆ ಸೂಕ್ತ ಉತ್ತರ ನೀಡಲು ಸಿದ್ಧರಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದರು. 

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ(Vidhan Parishat Election) ಶುಕ್ರವಾರ ನಡೆದ ಚುನಾವಣೆಯಲ್ಲಿ ಶಿಗ್ಗಾಂವಿ(Shiggoan) ತಾಪಂ ಕಾರ್ಯಾಲಯದ ಮತಗಟ್ಟೆಯಲ್ಲಿ ಅವರು ಮತ(vote) ಚಲಾಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಮಹದಾಯಿ(Mahadayi) ಕೇಸ್‌ ರೀ ಓಪನ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ರೀ ಓಪನ್‌ ಮಾಡಿಲ್ಲ. ಕೋರ್ಟ್‌ನಿಂದ ಸಮನ್ಸ್‌ ಬಂದಿದೆ. ಪ್ರಕರಣ ವಾಪಸ್‌ ಪಡೆಯುವ ಪ್ರಕ್ರಿಯೆ ನಡೆದಿದೆ ಎಂದು ಪ್ರತಿಕ್ರಿಯಿಸಿದರು.

Karnataka Politics: ಬಿಎಸ್‌ವೈ ಕಣ್ಣೀರು ಹಾಕಿದ್ದೇಕೆ? ಡಿಕೆಶಿ ಮತ್ತೆ ಪ್ರಶ್ನೆ

ಮತ್ತೊಂದು ರೈತ ಬಂಡಾಯಕ್ಕೂ ಸಿದ್ಧ: ಬೊಮ್ಮಾಯಿ ಸರ್ಕಾರಕ್ಕೆ ಸೊಬರದಮಠ ಎಚ್ಚರಿಕೆ

ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ(Belagavi Session) ಮಹದಾಯಿ(Mahadayi) ಯೋಜನೆ ಜಾರಿ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೊಂದು ರೈತ ಬಂಡಾಯ ಮಾಡುತ್ತೇವೆ ಎಂದು ರಾಜ್ಯ ರೈತ ಸೇನಾ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ(Veeresh Sobaradamatha) ಎಚ್ಚರಿಸಿದ್ದಾರೆ. 

ನರಗುಂದ ಪಟ್ಟಣದ ಎ.ಪಿ. ಪಾಟೀಲ ಗೋದಾಮಿನಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ(Farmers Meeting) ಮಾತನಾಡಿದ ಅವರು, ಕಳೆದ 7 ವರ್ಷದಿಂದ ಮಹದಾಯಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ(Government of Karnataka) ಮಹದಾಯಿ ಹೋರಾಟವನ್ನು ಹಗುರವಾಗಿ ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ಮತ್ತೊಂದು ನರಗುಂದದಲ್ಲಿ(Nargund) ರೈತ ಬಂಡಾಯ ಮಾಡಲು ಸಿದ್ಧ ಎಂದರು.
 

Follow Us:
Download App:
  • android
  • ios