Assembly Elections: 70 ವರ್ಷದ ರಾಗ ಬಿಡಿ, 7 ವರ್ಷದಲ್ಲಿ ಏನು ಮಾಡಿದ್ರಿ ಹೇಳಿ: ಮೋದಿಗೆ ಪ್ರಿಯಾಂಕಾ ಸವಾಲು!

* ಕಾಂಗ್ರೆಸ್‌ ಸಮಾವೇಶದಲ್ಲಿ ಬಿಜೆಪಿಗೆ ಪ್ರಿಯಾಂಕಾ ಕಠಿಣ ಸವಾಲು

* ಎಪ್ಪತ್ತು ವರ್ಷದಲ್ಲಿ ಮಾಡಿದ್ದನ್ನು ಮಾರುತ್ತಿದ್ದೀರೆಂಬ ಆರೋಪ

* ಮೋದಿ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್ ನಾಯಕಿ

Whatever Congress built in 70 years Modi govt wants to sell to its industrialist friends Priyanka Gandhi pod

ಜೈಪುರ(ಡಿ.12): 

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಣದುಬ್ಬರ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಭಾನುವಾರ ಗುರಿಯಾಗಿಸಿದ್ದಾರೆ, ಕೇಂದ್ರ ಸರ್ಕಾರವು ಸಾರ್ವಜನಿಕ ಕಲ್ಯಾಣವನ್ನು ಬಯಸುವುದಿಲ್ಲ ಅದು ಕೇವಲ ಕೆಲ ಉದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಜೈಪುರದಲ್ಲಿ ಕಾಂಗ್ರೆಸ್‌ನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರದಲ್ಲಿರುವ ಸರ್ಕಾರ ಜನರ ಹಿತ ಬಯಸುವುದಿಲ್ಲ ಎಂಬುವುದು ಖಚಿತವಾಗಿದೆ. ಅವರು ನಿಮಗಾಗಿ ಕೆಲಸ ಮಾಡುತ್ತಿಲ್ಲ. ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದೀರಿ? ಈ ಸರ್ಕಾರ ಕೆಲವೇ ಆಯ್ದ ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಇಡೀ ದೇಶ, ಇಡೀ ಜಗತ್ತು ನೋಡುತ್ತಿದೆ ಎಂದಿದ್ದಾರೆ.

ಜೈಪುರದ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮಹಂಗಾಯಿ ಹಠಾವೋ ರ್ಯಾಲಿ’(ಬೆಲೆ ಏರಿಕೆ ನಿಲ್ಲಿಸಿ ಸಮಾವೇಶ) ಉದ್ದೇಶಿಸಿ ಮಾತನಾಡಿದ  ಪ್ರಿಯಾಂಕಾ ಗಾಂಧಿ ವಾದ್ರಾ, 'ಎರಡು ರೀತಿಯ ಸರ್ಕಾರಗಳಿವೆ. ಜನರ ಸೇವೆ, ಸಮರ್ಪಣೆ ಮತ್ತು ಸತ್ಯದ ಬಗ್ಗೆ ಮಾತನಾಡುವುದು ಸರ್ಕಾರದ ಗುರಿಯಾಗಿದೆ. ಸುಳ್ಳು, ದುರಾಸೆ ಮತ್ತು ಲೂಟಿಯೇ ಗುರಿಯಾಗಿರುವ ಸರಕಾರ ಕೂಡಾ ಇದೆ. ಈಗಿನ ಕೇಂದ್ರ ಸರಕಾರದ ಗುರಿ ಸುಳ್ಳು, ದುರಾಸೆ ಮತ್ತು ಲೂಟಿಯಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಂದ್ರದ ಮೋದಿ ಸರ್ಕಾರ ಪದೇ ಪದೇ ಕೇಳುತ್ತದೆ ಎಂದು ಹೇಳಿದರು. ನಾನು ಹೇಳುತ್ತೇನೆ, '70 ವರ್ಷಗಳ ಹಳಿ ಬಿಡಿ, ಏಳು ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಹೇಳಿ ಎಂದು ನೇರವಾಗಿ ಬಿಜೆಪಿಗೆ ಪ್ರಶ್ನೆ ಎಸೆದಿದ್ದಾರೆ.70 ವರ್ಷಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆಯೋ ಅದನ್ನೆಲ್ಲ ಬಿಜೆಪಿ ಸರ್ಕಾರ ಮಾರಾಟ ಮಾಡಲು ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಈ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಬಿಜೆಪಿಗೆ 'ಹಿಂದುತ್ವವಾದಿ' ಪಾಠ ಮಾಡಿದ ರಾಹುಲ್ ಗಾಂಧಿ!

ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಓರ್ವ ಹಿಂದೂ ಮತ್ತು ಆದರೆ ಗೋಡ್ಸೆ ಹಿಂದುತ್ವವಾದಿ. ಒಬ್ಬ ಹಿಂದೂ ಸತ್ಯವನ್ನು ಹುಡುಕುತ್ತಾನೆ, ಅವನ ಮಾರ್ಗವು ಸತ್ಯಾಗ್ರಹಿಯಾಗಿರುತ್ತದೆ. ಆದರೆ ಒಬ್ಬ ಹಿಂದುತ್ವವಾದಿ ತನ್ನ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾನೆ ಎಂದು ರಾಹುಲ್ ಆರೋಪಿಸಿದ್ದಾರೆ. ಹಿಂದೂ ಆಗಿರುವವನು ಹೆದರುವುದಿಲ್ಲ, ಇಂಚಿಂಚೂ ಹಿಮ್ಮೆಟ್ಟುವುದಿಲ್ಲ. ನೀವೆಲ್ಲರೂ ಹಿಂದೂಗಳೇ ಹೊರತು ಹಿಂದುತ್ವವಾದಿಗಳಲ್ಲ ಎಂದು ಸಮಾವೆಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ರಾಹುಲ್ ಹೇಳಿದರು. ಇದು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳಲ್ಲ ಎಂದು ಬಿಜೆಪಿಗೆ ಗುದ್ದು ನೀಡಿದ್ದಾರೆ.

ಅಲ್ಲದೇ ನಾನು ಹಿಂದುತ್ವವಾದಿ ಅಲ್ಲ, ಹಿಂದೂ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮೂರ್ನಾಲ್ಕು ಸ್ನೇಹಿತರು ಏಳು ವರ್ಷಗಳಲ್ಲಿ ದೇಶವನ್ನು ನಾಶ ಮಾಡಿದ್ದಾರೆ. ದೇಶದಲ್ಲಿ ಹಣದುಬ್ಬರ, ನೋವು ಇದ್ದರೆ ಇದೆಲ್ಲಕ್ಕೂ ಹಿಂದುತ್ವವಾದಿಗಳು  ಕಾರಣ, ಅವರೇ ಈ ಕೆಲಸ ಮಾಡಿದ್ದಾರೆ. ಹಿಂದುತ್ವವಾದಿಗಳು ಏನೇ ಆಗಲಿ ಆದರೆ ಅಧಿಕಾರ ಬೇಕೆಂದು ಬಯಸುತ್ತಾರೆ ಎಂದೂ ರಾಹುಲ್ ತಿಳಿಸಿದ್ದಾರೆ.

ಹಿಂದೂ ಮತ್ತು ಹಿಂದುತ್ವ ಎರಡು ವಿಭಿನ್ನ ಪದಗಳು ಎಂದು ಬಣ್ಣಿಸಿದ ರಾಹುಲ್, ಎರಡು ಆತ್ಮಗಳು ಒಂದೇ ಆತ್ಮವನ್ನು ಹೊಂದಲು ಸಾಧ್ಯವಿಲ್ಲ, ಅದೇ ರೀತಿಯಲ್ಲಿ ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು. ಯಾರಿಗೂ ಹೆದರದ, ಎಲ್ಲರೂ ಅಪ್ಪಿಕೊಳ್ಳುವವನೇ ಹಿಂದೂ ಎಂದು ಹೇಳಿದರು.

Latest Videos
Follow Us:
Download App:
  • android
  • ios