ಬಹುದಿನಗಳ ಬೇಡಿಕೆ: ಮಂಗಳೂರು-ದೆಹಲಿ ನೇರ ವಿಮಾನ ಯಾನ ಆರಂಭ

*  ಕರಾವಳಿಗರ ಬೇಡಿಕೆ ಕೊನೆಗೂ ಈಡೇರಿದೆ
*  ಇಂಡಿಗೋ ಏರ್‌ವೇಸ್‌ನ ವಿಮಾನ ಯಾನ ಆರಂಭ
*  ಈ ಹಾರಾಟದ ನೇತೃತ್ವ ವಹಿಸಿದ್ದ ಕ್ಯಾಪ್ಟನ್‌ ಅನುಭವ್‌ ಬ್ಯಾನರ್ಜಿ
 

Mangaluru to Delhi Flight Service Started on July 1st Onwards grg

ಮಂಗಳೂರುಜು.02): ಮಂಗಳೂರು-ದೆಹಲಿ ನಡುವೆ ನೇರ ವಿಮಾನ ಯಾನದ ಕರಾವಳಿಗರ ಬೇಡಿಕೆ ಕೊನೆಗೂ ಈಡೇರಿದೆ. ಇಂಡಿಗೋ ಏರ್‌ವೇಸ್‌ನ ವಿಮಾನಯಾ ನಿನ್ನೆ(ಶುಕ್ರವಾರ)ಯಿಂದ ಮಂಗಳೂರು- ದೆಹಲಿ ನಡುವೆ ವಿಮಾನ ಯಾನ ಆರಂಭಿಸಿದೆ.

6ಇ 2164 ವಿಮಾನದಲ್ಲಿ 77 ಪ್ರಯಾಣಿಕರು ದೆಹಲಿಯಿಂದ ಮಂಗಳೂರು ತಲುಪಿದ್ದರೆ, 6ಇ 2165 ವಿಮಾನದಲ್ಲಿ 140 ಪ್ರಯಾಣಿಕರು ಮಂಗಳೂರಿನಿಂದ ದೆಹಲಿಗೆ ಪ್ರಯಾಣಿಸಿದರು. ಕ್ಯಾಪ್ಟನ್‌ ಅನುಭವ್‌ ಬ್ಯಾನರ್ಜಿ ಈ ಹಾರಾಟದ ನೇತೃತ್ವ ವಹಿಸಿದ್ದರು. 6ಇ 2164 ಮತ್ತು 6ಇ 2165 ವಿಮಾನಗಳು ಭಾನುವಾರ, ಸೋಮವಾರ, ಬುಧವಾರ ಮತ್ತು ಸಂಚರಿಸಲಿವೆ.

ಮುಂಬೈ-ಮಂಗಳೂರು ನಡುವೆ ಹೊಸ ವಿಮಾನ ಸಂಚಾರ ಆರಂಭ

6ಇ 2164 ವಿಮಾನ ದೆಹಲಿಯಿಂದ ಬೆಳಗ್ಗೆ 7.40ಕ್ಕೆ ಹೊರಟು ಬೆಳಗ್ಗೆ 10.45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇದೇ ವೇಳೆ 6ಇ 2165 ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.45ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಲಿದೆ.

ಈ ನೇರ ವಿಮಾನ ಯಾನ ಚಂಡೀಗಡ, ಡೆಹ್ರಾಡೂನ್‌, ಪಾಟ್ನಾ, ರಾಂಚಿ, ಲಕ್ನೋ, ಬೋಪಾಲ್‌, ದಮಾಮ್‌, ಜೆದ್ದಾ ಮತ್ತು ರಿಯಾದ್‌ ಸ್ಥಳಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕವನ್ನು ಸುಗಮಗೊಳಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
 

Latest Videos
Follow Us:
Download App:
  • android
  • ios