ಮುಂಬೈ-ಮಂಗಳೂರು ನಡುವೆ ಹೊಸ ವಿಮಾನ ಸಂಚಾರ ಆರಂಭ
* ಬೆಳಗ್ಗೆ 8.50 ಕ್ಕೆ ಮುಂಬೈನಿಂದ ಹೊರಡುವ ವಿಮಾನ 10.20ಕ್ಕೆ ಮಂಗಳೂರಿಗೆ ತಲುಪುವುದು
* ಮಂಗಳೂರಿನಿಂದ ಬೆಳಗ್ಗೆ 11ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12.40ಕ್ಕೆ ಮುಂಬೈ ತಲುಪುವುದು
* ಹುಬ್ಬಳ್ಳಿ ವೇಳಾಪಟ್ಟಿ ಬದಲು
ಮಂಗಳೂರು(ಜೂ.20): ಮುಂಬೈ- ಮಂಗಳೂರು- ಮುಂಬೈ ಮಾರ್ಗದಲ್ಲಿ ಇಂಡಿಗೋ ಹೊಸ ವಿಮಾನ ಸಂಚಾರವನ್ನು ನಿನ್ನೆ(ಭಾನುವಾರ) ಆರಂಭಿಸಿದೆ. ಬೆಳಗ್ಗೆ 8.50 ಕ್ಕೆ ಮುಂಬೈನಿಂದ ಹೊರಡುವ ವಿಮಾನ (6ಇ 5236) 10.20ಕ್ಕೆ ಮಂಗಳೂರಿಗೆ ತಲುಪುವುದು. ಮಂಗಳೂರಿನಿಂದ ಬೆಳಗ್ಗೆ 11ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12.40ಕ್ಕೆ ಮುಂಬೈ ತಲುಪುವುದು.
ಮುಂಬೈನಿಂದ ಭಾನುವಾರ ಹೊರಟ ವಿಮಾನದಲ್ಲಿ 55 ಪ್ರಯಾಣಿಕರು ಮಂಗಳೂರು ತಲುಪಿದರು. ಬಳಿಕ ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸಿದ ಪ್ರಥಮ ವಿಮಾನದಲ್ಲಿ ಒಂದು ಮಗು ಸಹಿತ 143 ಪ್ರಯಾಣಿಕರು ಇದ್ದರು. ಪ್ರಸ್ತಾವಿತ ಮಾರ್ಗದಲ್ಲಿ ಇಂಡಿಗೋ ಜೂ.17ರಂದು ಪರೀಕ್ಷಾರ್ಥ ಓಡಾಟ ನಡೆಸಿತ್ತು. ಆಗ ಈ ವಿಮಾನದಲ್ಲಿ ಇಬ್ಬರು ಶಿಶುಗಳು ಸಹಿತ 88 ಮಂದಿ ಪ್ರಯಾಣಿಸಿದ್ದರು.
ಬೀದರ್‌ನಿಂದ ಬೆಂಗಳೂರಿಗೆ ಸ್ಟಾರ್‌ಏರ್ ವಿಮಾನ ಸೇವೆ ಆರಂಭ
ಹುಬ್ಬಳ್ಳಿ ವೇಳಾಪಟ್ಟಿ ಬದಲು:
ಹುಬ್ಬಳ್ಳಿ ಮತ್ತು ಮಂಗಳೂರು ನಡುವೆ ಕಳೆದ ಮೇ 1 ರಂದು ಆರಂಭಗೊಂಡ ಇಂಡಿಗೋ ವಿಮಾನ ಸಂಚಾರÜದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ವಾರದಲ್ಲಿ ನಾಲ್ಕು ದಿನ ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಈ ವಿಮಾನ ಹೊಸ ವೇಳಾಪಟ್ಟಿಯಂತೆ ಹುಬ್ಬಳ್ಳಿಯಿಂದ ರಾತ್ರಿ ಏಳು ಗಂಟೆಗೆ ಹೊರಟು ಎಂಟು ಗಂಟೆಗೆ ಮಂಗಳೂರು ತಲುಪುವುದು. ಮಂಗಳೂರಿನಿಂದ ಮರಳಿ ರಾತ್ರಿ 8.20ಕ್ಕೆ ಹೊರಡುವ ವಿಮಾನ ರಾತ್ರಿ 9.35ಕ್ಕೆ ಹುಬ್ಬಳ್ಳಿ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.