ಮಂಗಳೂರು(ಆ.08): ಸುಬ್ರಹ್ಮಣ್ಯ ಸಕಲೇಶಪುರ ಮತ್ತು ಹಾಸನ ಭಾಗದಲ್ಲಿ ನಿರಂತರವಾಗಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಮಂಗಳೂರು-ಬೆಂಗಳೂರು ರೈಲು ಹಳಿಯ ಮೇಲೆ ಬುಧವಾರ ಗುಡ್ಡ ಕುಸಿದು ಬಿದ್ದಿದೆ.

ಸುಬ್ರಹ್ಮಣ್ಯ ರೋಡ್‌ ನೆಟ್ಟಣ ರೈಲು ನಿಲ್ದಾಣ -ಸಕಲೇಶಪುರ ನಡುನ ಸಿರಿಬಾಗಿಲು ಪರಿಸರದಲ್ಲಿ ಮತ್ತೆ ಎರಡು ಕಡೆಗಳಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿದೆ. ಇದರಿಂದಾಗಿ ಮಂಗಳೂರು- ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ.

ನೆಟ್ಟಣ ರೈಲು ನಿಲ್ದಾಣದಿಂದ ಸಕಲೇಶಪುರ ರೈಲು ನಿಲ್ದಾಣದ ನಡುವಣ ಸಿರಿಬಾಗಿಲು ರೈಲು ನಿಲ್ದಾಣದ ಸಮೀಪದ ದೂರ 90/900 ಮತ್ತು 90/00ಯಲ್ಲಿನ ಹಳಿಯ ಮೇಲೆ ಬೃಹತ್‌ ಗುಡ್ಡ ಕುಸಿದು ಬಿದ್ದಿದೆ. ಇದರಿಂದ ಬುಧವಾರ ಈ ಮಾರ್ಗದಲ್ಲಿ ಹಗಲು ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಎರಡನೇ ದಿನ ಹಗಲು ರೈಲು ಸಂಚಾರ ಸ್ಥಗಿತ:

ಮಂಗಳವಾರ ಸಂಖ್ಯೆ 86/100 ಮತ್ತು 83ರ ಆಸುಪಾಸಿನಲ್ಲಿ ಸುಮಾರು ಮೂರು ಕಡೆ ಹಳಿಯ ಮೇಲೆ ಗುಡ್ಡ ಕುಸಿದಿತ್ತು. ಇದನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗಿತ್ತು. ಆದರೆ ಈ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಮತ್ತೆ ಸಿರಿಬಾಗಿಲು ಸಮೀಪ ಎರಡು ಕಡೆ ಭಾರಿ ಪ್ರಮಾಣದ ಮಣ್ಣು ಹಳಿಯ ಮೇಲೆ ಕುಸಿತಗೊಂಡಿದೆ. ಹೀಗಾಗಿ ಸತತ ಎರಡನೇ ದಿನ ರೈಲು ಸಂಚಾರ ಸ್ಥಗಿತಗೊಂಡಿತು.

ಹಳಿಯ ಮೇಲೆ ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿತ:

ಈ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಮತ್ತಷ್ಟುಕಡೆ ಮಣ್ಣು ಕುಸಿಯುವ ಆತಂಕವಿದೆ. ಸುಬ್ರಹ್ಮಣ್ಯ ರೋಡ್‌ ನೆಟ್ಟಣ ರೈಲು ನಿಲ್ದಾಣದಿಂದ ಮುಂದೆ ಬರುವ ಸಿರಿಬಾಗಿಲಿನ ಸಮೀಪದ ದೂರ ಸಂಖ್ಯೆ 90/900 ಮತ್ತು 90/00 ಯ ಎರಡು ಕಡೆ ಬೃಹತ್‌ ಪ್ರಮಾಣದ ಮಣ್ಣು ಬುಧವಾರ ಕುಸಿತಗೊಂಡಿದೆ. ಇದರಿಂದ ಭಾರಿ ಪ್ರಮಾಣದ ಮಣ್ಣು ಹಳಿಯ ಮೇಲೆ ಬಂದು ಬಿದ್ದಿದೆ.

ಹಾಗಾಗಿ ಹಗಲು ಬೆಂಗಳೂರು-ಮಂಗಳೂರು ರೈಲು, ಮಂಗಳೂರು- ಬೆಂಗಳೂರು ರೈಲುಗಳು ಹಾಗೂ ಎಲ್ಲ ಗೂಡ್ಸ್‌ ರೈಲುಗಳ ಪ್ರಯಾಣವನ್ನು ಈ ಹಾದಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಮಂಗಳೂರು-ಸುಬ್ರಹ್ಮಣ್ಯ ರೋಡ್‌ ನೆಟ್ಟಣದ ತನಕ ಸಂಚರಿಸುವ ಸ್ಥಳೀಯ ರೈಲು ಮಾತ್ರ ಪ್ರಯಾಣಿಸಿತ್ತು.

ಮಳೆಯಲ್ಲಿ ಕಾರ್ಯಾಚರಣೆ:

ಈ ಘಟನೆ ತಿಳಿದ ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ ಇಲಾಖೆ ತಕ್ಷಣ ತೆರವು ಕಾರ್ಯ ಆರಂಭಿಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದೆ. ಸುಮಾರು 50ಕ್ಕೂ ಅಧಿಕ ಕಾರ್ಮಿಕರು ಐದಕ್ಕೂ ಅಧಿಕ ಹಿಟಾಚಿ ಯಂತ್ರದ ಸಹಾಯದಿಂದ ಭಾರಿ ಮಳೆಯಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅವೈಜ್ಞಾನಿಕ ಕಾಮಗಾರಿ: ಕೃಷಿ ಭೂಮಿ ಜಲಾವೃತ

ಅಧಿಕ ಮಳೆ ಮತ್ತು ಆಗಾಗ ಮಣ್ಣುಗಳು ಹಳಿಯ ಮೇಲೆ ಬೀಳುತ್ತಿರುವುದು ಕಾರ್ಮಿಕರ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ತೀವ್ರ ಕಾರ್ಯಾಚರಣೆ ನಡೆಯುತ್ತಿದ್ದರೂ ಹಳಿಯ ಮೇಲೆ ಭಾರಿ ಪ್ರಮಾಣ ಮಣ್ಣು ಕುಸಿತಗೊಂಡ ನೆಲೆಯಲ್ಲಿ ಮತ್ತು ಈ ಪ್ರದೇಶದಲ್ಲಿ ಅತ್ಯಧಿಕ ಗಾಳಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಇದರಿಂದ ತೆರವು ಕಾರಾರ‍ಯಚರಣೆ ಸಂಪೂರ್ಣವಾಗದಿದ್ದರೆ ರಾತ್ರಿ ಸಂಚರಿಸುವ ಮಂಗಳೂರು- ಬೆಂಗಳೂರು ರೈಲು ಪಥ ಬದಲಾಯಿಸಿ ಚಲಿಸಲಿದೆ. ಅಲ್ಲದೆ ರಾತ್ರಿ ಬೆಂಗಳೂರಿನಿಂದ ಹೊರಡಲಿರುವ ಬೆಂಗಳೂರು-ಮಂಗಳೂರು ರೈಲು ಕೂಡಾ ಪಥ ಬದಲಿಸುವ ಸಾಧ್ಯತೆ ದಟ್ಟವಾಗಿದೆ.

ಶಿವಮೊಗ್ಗ: ಮಳೆಯಬ್ಬರಕ್ಕೆ 20ಕ್ಕೂ ಹೆಚ್ಚು ಕಟ್ಟಡಳಿಗೆ ಹಾನಿ