ಶಿವಮೊಗ್ಗ: ಮಳೆಯಬ್ಬರಕ್ಕೆ 20ಕ್ಕೂ ಹೆಚ್ಚು ಕಟ್ಟಡಳಿಗೆ ಹಾನಿ

ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಶಿರಾಳಕೊಪ್ಪದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆ ಬಿಡದೆ ಮಳೆಯಾಗುತ್ತಿದೆ. ತಾಳಗುಂದ ಹೋಬಳಿಯಲ್ಲಿ ಜಾವಗಟ್ಟಿಗ್ರಾಮದಲ್ಲಿ 10 ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು, ಜನರು ಎಚ್ಚರಿಕೆ ವಹಿಸಬೇಕಾಗಿದೆ.

around 20 buildings damaged due to Heavy rain in Shivamogga

ಶಿರಾಳಕೊಪ್ಪ(ಆ.08): ಕಳೆದ ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಈ ಭಾಗದ ಉಡಗಣಿ-ತಾಳಗುಂದ ಹೋಬಳಿಯಲ್ಲಿ ಸಾಕಷ್ಟುಮನೆಗಳು ಬಿದ್ದು, ಇನ್ನು ಕೆಲವು ಮನೆಗಳಿಗೆ ಹಾನಿ ಆಗಿದೆ. ಉಡಗಣಿ ಹೋಬಳಿ ಹಾಗೂ ಶಿರಾಳಕೊಪ್ಪದಲ್ಲಿ ಎರಡು ಮನೆ, ಅಡಗಂಟಿ, ಮುತ್ತಿಗೆ ಗ್ರಾಮಗಳಲ್ಲಿ ಒಂದು ಮನೆ ಹಾಗೂ ಬಿದರಕೊಪ್ಪ ಗ್ರಾಮದಲ್ಲಿ ಎರಡು ಮನೆಗಳು ಬಿದ್ದಿವೆ.

ಹಾಗೆಯೇ ತಾಳಗುಂದ ಹೋಬಳಿಯಲ್ಲಿ ಜಾವಗಟ್ಟಿಗ್ರಾಮದಲ್ಲಿ 10 ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಕೊರಟಿಕೆರೆ, ರಾಗಿಕೊಪ್ಪ, ಮುಳಕೊಪ್ಪ ಗ್ರಾಮಗಳಲ್ಲಿ ತಲಾ ಒಂದು ಮನೆ ಬಿದ್ದಿವೆ. ತೊಗರ್ಸಿಯಲ್ಲಿ ಶಾಲೆಯ ಚಾವಣಿ ಕುಸಿದಿದೆ.

ಶಂಕ್ರೀಕೊಪ್ಪ, ಕೊಳಗಿ ತಾಂಡಾ, ನರಸಾಪುರಗಳಲ್ಲಿ ಎರಡು ಮನೆ, ಬಿಳಕಿಯಲ್ಲಿ 2 ಮನೆ ಗೋಡೆ, ಮಳೂರು ಮುರಾರ್ಜಿ ಶಾಲೆಯ ಕಾಂಪೌಂಡ್‌ ಹಾಗೂ ತೊಗರ್ಸಿಯಲ್ಲಿ ಎರಡು ಮನೆ ಗೋಡೆಗಳು ಕುಸಿದಿವೆ.

ಶಿರಾಳಕೊಪ್ಪದ ಶಿಕಾರಿಪುರ ರಸ್ತೆಯಲ್ಲಿ ಇರುವ ಮಲ್ಲಿಕಾರ್ಜುನ ಶಾಲೆಯ ಮುಂಬದಿಯಲ್ಲಿ ಮುಖ್ಯರಸ್ತೆಯಿಂದ ಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿವೆ. ಈ ಭಾಗದ ಬಹುತೇಕ ಕೆರೆಗಳು ಭರ್ತಿ ಆಗಿವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ದಿನ ಐದೂವರೆ ಅಡಿ ತುಂಬಿದ ಲಿಂಗನಮಕ್ಕಿ

Latest Videos
Follow Us:
Download App:
  • android
  • ios