ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ಇತ್ತ ಕಾಂಗ್ರೆಸ್‌ ಜೊತೆ   ಚುನಾವಣೆ ಉದ್ದೇಶಕ್ಕಾಗಿ ಮೈತ್ರಿಯೊಂದು ಆಗಿದೆ.

ಪಾಂಡವಪುರ (ಸೆ.15): ಮಾಸಾಂತ್ಯದಲ್ಲಿ ನಡೆಯುವ ಟಿಎಪಿಸಿಎಂಎಸ್‌ ಚುನಾವಣೆಗೆ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಕೊಳ್ಳಲಾಗಿದೆ. ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಶಕ್ತಿ ಮೀರಿ ದುಡಿಯುವಂತೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್ ಕೆಂಪೂಗೌಡ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತಸಂಘ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಟಿಎಪಿಸಿಎಂಎಸ್‌ಗೆ ಈ ಹಿಂದೆಯೂ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಅದೇ ರೀತಿ ಈ ಬಾರಿಯೂ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

ಶೀಘ್ರ ಶರತ್ ಬಚ್ಚೇಗೌಡ ಅಧಿಕೃತ ಪಕ್ಷ ಸೇರ್ಪಡೆ : ಯಾವ ಪಕ್ಷ..? ...

ಅದೇ ರೀತಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಗಳ ಮಟ್ಟದಲ್ಲಿ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆದು ಸ್ಥಳೀಯ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರ ಗೆಲುವಿಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಡಿಕೆಶಿ ಸೂಚನೆ :ಶಿರಾದಲ್ಲಿ ಇವರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ? ..

ಸಭೆಯಲ್ಲಿ ಸ್ವರಾಜ್‌ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ದಯಾನಂದ್‌, ಅಮೃತಿ ರಾಜಶೇಖರ್‌, ಎಣೆಹೊಳೆಕೊಪ್ಪಲು ಮಂಜು, ವೈ.ಜಿ.ರಘು, ಇಂಗಲಗುಪ್ಪೆ ಲೋಕೇಶ್‌, ಬೇವಿನಕುಪ್ಪೆ ಶಿವಲಿಂಗೇಗೌಡ ಇತರರು ಇದ್ದರು.