ಪೆಟ್ರೋಲ್, ವಿದ್ಯುತ್ ದರ ಏರಿಕೆ ಬಳಿಕ ಮತ್ತೊಂದು ಶಾಕ್ ಕೊಡಲು ಸಜ್ಜಾದ ಸರ್ಕಾರ..!
* ಬಸ್ ಪ್ರಯಾಣ ದರ ಏರಿಕೆಗೆ ಪ್ರಸ್ತಾಪ
* ಶೇ. 10 ರಿಂದ 15 ರಷ್ಟು ಮಾಡುವ ಸಾಧ್ಯತೆ
* ಪರೋಕ್ಷವಾಗಿ ಪ್ರಯಾಣ ದರ ಏರಿಕೆ ಸುಳಿವು ನೀಡಿದ ಕಳಸದ
ಬಾಗಲಕೋಟೆ(ಜೂ.13): ರಾಜ್ಯದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಪ್ರಯಾಣ ದರದಲ್ಲಿ ಶೇ.10 ರಿಂದ 15ರಷ್ಟು ದರ ಏರಿಕೆ ಕುರಿತು ಪ್ರಸ್ತಾಪ ಇದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಗೆ ಆಗುತ್ತಿರುವ ನಷ್ಟದ ಪ್ರಮಾಣ ನೋಡಿದರೆ ನಮಗೆ ಶೇ.50ರಷ್ಟು ದರ ಏರಿಕೆ ಆಗಬೇಕು. ಆದರೆ ಅಷ್ಟು ಪ್ರಮಾಣದಲ್ಲಿ ದರ ಹೆಚ್ಚಿಗೆ ಮಾಡುವುದಕ್ಕೆ ಆಗುವುದಿಲ್ಲ. ಶೇ.10ರಿಂದ 15 ರಷ್ಟು ಮಾಡುವ ಸಾಧ್ಯತೆ ಇದೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.
ಚಾಲಕರು ತೂಕಡಿಸಿದರೆ ಬರುತ್ತೆ ಅಲಾರ್ಮ್ ಸಂದೇಶ!
ಅದು ಈಗ ಸರ್ಕಾರದ ಪರಿಶೀಲನೆ ಮಟ್ಟದಲ್ಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಯಾಣ ದರ ಏರಿಕೆ ಸುಳಿವು ನೀಡಿದ್ದಾರೆ.