13ರ ಬಾಲಕ ಸಾಕ್ಷ್ಯವನ್ನು ಪರಿಗಣಿಸಿ ಮದ್ಯದ ನಶೆಯಲ್ಲಿ ಪತ್ನಿ ಕೊಂದಿದ್ದ ಪತಿಗೆ  ಜೀವಾವಧಿ ಶಿಕ್ಷೆ ಪತ್ನಿ ಕೊಂದ ಪತಿಗೆ ಶಿಕ್ಷೆ ವಿಧಿಸಿದ ಸತ್ರ ಮತ್ತು ಪ್ರಧಾನ ನ್ಯಾಯಾಲಯ

 ಚಾಮರಾಜನಗರ (ಡಿ.09): 13ರ ಬಾಲಕ (Boy) ಸಾಕ್ಷ್ಯವನ್ನು ಪರಿಗಣಿಸಿ ಮದ್ಯದ ನಶೆಯಲ್ಲಿ ಪತ್ನಿ (Wife) ಕೊಂದಿದ್ದ ಪತಿಗೆ ಇಲ್ಲಿನ ಜಿಲ್ಲಾ ನ್ಯಾಯಲಯ (Court) ಜೀವಾವಧಿ ಶಿಕ್ಷೆ (life sentence) ವಿಧಿಸಿ ಆದೇಶ ಹೊರಡಿಸಿದೆ. ಚಾಮರಾಜನಗರ (Chamarajanagar) ತಾಲೂಕಿನ ಉತ್ತುವಳ್ಳಿ ಗ್ರಾಮದ ಮಂಜು ಎಂಬಾತ ಶಿಕ್ಷೆಗೊಳಗಾದ ಅಪರಾಧಿ. 13 ವರ್ಷದ ಶಿವರಾಜು ಎಂಬ ಬಾಲಕ ‘ತನ್ನ ತಾಯಿಯನ್ನು ಹೇಗೆ ಕೊಂದನು, ಯಾವ ರೀತಿ ಗಲಾಟೆ ನಡೆಯುತ್ತಿತ್ತು’’ ಎಂಬುದನ್ನು ಸವಿವರವಾಗಿ ತಿಳಿಸಿದ್ದನ್ನು ಪರಿಗಣಿಸಿದ ಸತ್ರ ಮತ್ತು ಪ್ರಧಾನ ನ್ಯಾಯಾಲಯದ (Court) ಹೆಚ್ಚುವರಿ ನ್ಯಾ. ಎನ್‌.ಆರ್‌. ಲೋಕಪ್ಪ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರು. ದಂಡ ವಿಧಿಸಿದ್ದಾರೆ.

ಏನಿದು ಪ್ರಕರಣ: 18 ವರ್ಷಗಳ ಹಿಂದೆ ಉತ್ತುವಳ್ಳಿ ಗ್ರಾಮದ ಚಿನ್ನತಾಯಮ್ಮ ಎಂಬಾಕೆಯನ್ನು ಮಂಜು ವಿವಾಹವಾಗಿದ್ದ (Marriage). ಆದರೆ, 5-6 ವರ್ಷಗಳಿಂದ ಈಚೆಗೆ ಮದ್ಯ ಪಾನಕ್ಕೆ ದಾಸನಾಗಿ ನಿತ್ಯ ಪತ್ನಿಯೊಟ್ಟಿಗೆ ಜಗಳ ಮಾಡುವುದನ್ನು ರೂಢಿಸಿಕೊಂಡಿದ್ದನು. ಅದೇ ರೀತಿ, 2017 ರ ಅಕ್ಟೋಬರ್‌ 26 ಮಧ್ಯರಾತ್ರಿ ದಂಪತಿ ಜಗಳ ತಾರಕಕ್ಕೇರಿದೆ. ಆ ವೇಳೆ, ಮಂಜು ಪತ್ನಿ ಚಿನ್ನತಾಯಮ್ಮಳಿಗೆ ಮರದ ಪಟ್ಟಿಯಿಂದ ತಲೆಗೆ ಹೊಡೆದು, ಜುಟ್ಟು ಹಿಡಿದು ಗೋಡೆಗೆ ಗುದ್ದಿಸಿ ಕೊಲೆ (Murder) ಮಾಡಿದ್ದ.

ಅಂದು ರಾತ್ರಿ ತನ್ನ ಅಪ್ಪ-ಅಮ್ಮನ ನಡುವೆ ನಡೆದ ಗಲಾಟೆಯನ್ನು ಸಂಪೂರ್ಣ ಕಂಡಿದ್ದ ಮಗ ಶಿವರಾಜು ಕೊಲೆ ಮಾಡಿದ್ದು ಹೇಗೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದ್ದಾನೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಉಷಾ ವಾದ ಮಂಡಿಸಿದ್ದರು.

ಲಾಡ್ಜ್‌ನಲ್ಲಿ ಅಂತ್ಯವಾಯ್ತು ಲವ್ ಕಹಾನಿ : ಅವರಿಬ್ಬರು 4 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದು ಮನೆಯವರಿಗೆ ಗೊತ್ತಾಗಿತ್ತು. ಇಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಆದ್ರೆ ಹುಡುಗಿಯ ಅಪ್ಪ ಹಾಕಿದ ಆ ಒಂದು ಕಂಡಿಷನ್ ಪ್ರೇಮಿಗಳ (Lovers) ಜೀವವನ್ನೇ ಬಲಿ ಪಡೆದಿದೆ. ಏನದು ಕಂಡಿಷನ್ ? ಆ ಪ್ರೇಮಿಗಳಿಗೆ ಆಗಿದ್ದು ಏನು ? ಇಲ್ಲಿದೆ ಕಂಪ್ಲೀಟ್ ಸ್ಟೋರಿ. 

ಶವಗಳ ಮುಂದೆ ಬಿದ್ದು ಒರಳಾಡ್ತಾ ಇರೋ ಪೋಷಕರು. ಮುಖ ಮುಚ್ಚಿಕೊಂಡು ಅಳ್ತಾ ಇರೋ ನರ್ಸಿಂಗ್ ವಿದ್ಯಾರ್ಥಿಗಳು (students). ಇವತ್ತು ಮೈಸೂರು (Mysuru) ಶವಾಗಾರ ಬಳಿ ಕಂಡು ಬಂದ ಮನ ಕಲಕುವ ದೃಶ್ಯವಿದು. ಇದಕ್ಕೆ ಕಾರಣ ಈ ಪ್ರೇಮಿಗಳ ಆತ್ಮಹತ್ಯೆ. ಹೌದು ಮೈಸೂರಿನಲ್ಲಿ ಇವತ್ತು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣ ಯುವತಿಯ ತಂದೆ ಹಾಕಿದ ಆ ಒಂದು ಕಂಡಿಷನ್.

ಯೆಸ್, ಇದು ಹುಡುಗರು ಚಿತ್ರದಲ್ಲಿ ರಾಧಿಕ ಪಂಡಿತ್ ಅವರ ತಂದೆ ಪುನೀತ್ ರಾಜ್‍ಕುಮಾರ್‌ಗೆ ಹಾಕುವ ಕಂಡಿಷನ್. ಈ ಕೈಲಿ‌ ಪೊಲೀಸ್ ಕೆಲ್ಸ ತಗೋ ಬಾ ಈ‌ ಕೈಲಿ ನನ್ ಮಗಳನ್ನು ಕರ್ಕೊಂಡು ಹೋಗು ಅನ್ನೋ ಒಂದು ಕಂಡಿಷನ್‌ಗೆ ಈ ಪ್ರೇಮಿಗಳು ಬಲಿಯಾಗಿದ್ದಾರೆ. 

20 ವರ್ಷದ ವರಲಕ್ಷ್ಮಿ ಹಾಗೂ 21 ವರ್ಷದ ಸತೀಶ್ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇವರು ಚಾಮರಾಜನಗರ (Chamarajanagara) ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ನಿವಾಸಿಗಳು. ಕಳೆದ 4 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸತೀಶ್ ಬಿ ಕಾಂ ಮುಗಿಸಿ ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕಿದ್ದ ವರಲಕ್ಷ್ಮಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಳು.

ಇವರಿಬ್ಬರ ಪ್ರೀತಿ ಬಗ್ಗೆ ಎರಡು ಕುಟುಂಬಕ್ಕೆ ಗೊತ್ತಾಗಿತ್ತು. ಒಂದೇ ಊರಿನವರಾಗಿದ್ದ ಕಾರಣ ಮದುವೆಗೂ ಅಷ್ಟಾಗಿ ವಿರೋಧವಿರಲಿಲ್ಲ. ಆದ್ರೆ ಯುವತಿ ಅಪ್ಪ ಮಾತ್ರ ಸತೀಶ್‌ಗೆ ಸರ್ಕಾರಿ ಕೆಲಸ ಸಿಕ್ಕ ನಂತರವೇ ನನ್ನ ಮಗಳನ್ನು ಮದುವೆ ಮಾಡಿಕೊಡುವುದಾಗಿ ಹೇಳಿದ್ದರಂತೆ. ಅದಕ್ಕಾಗಿ ಸತೀಶ್ ಸರ್ಕಾರಿ ಕೆಲಸ ಪಡೆಯಲು ಎಲ್ಲಿಲ್ಲದ ಪ್ರಯತ್ನ ನಡೆಸಿದ್ದ. ಅದರಲ್ಲೂ ಪೊಲೀಸ್ ಆಗಲೇಬೇಕು ಎಂದು ಪಣ ತೊಟ್ಟಿದ್ದ. ಆದರೆ ಸತೀಶ್ ಅಂದುಕೊಂಡಷ್ಟು ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿರಲಿಲ್ಲ. ಈ ಬಗ್ಗೆ ವರಲಕ್ಷ್ಮಿ ತಂದೆಗೆ ಮನದಟ್ಟು ಮಾಡುವ ಪ್ರಯತ್ನವನ್ನು ಇಬ್ಬರು ಮಾಡಿದ್ದಾರೆ. ಆದ್ರೆ ಪ್ರಯೋಜನವಾಗಿರಲಿಲ್ಲ. ಇದರಿಂದ ಮನ ನೊಂದ ಸತೀಶ್ ವರಲಕ್ಷ್ಮೀ ಒಟ್ಟಿಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.

ಪ್ರೇಮಿಗಳಿಬ್ಬರು ಸಾಕಷ್ಟು ಅನ್ಯೋನ್ಯವಾಗಿದ್ದರು. ಎಲ್ಲಾ ಕಡೆ ಸುತ್ತಾಡುತ್ತಿದ್ದರು. ಮೂರು ದಿನ ನಾಲ್ಕು ದಿನ‌ ಹೊರಗೆ ಹೋಗುತ್ತಿದ್ದರು. ನೆನ್ನೆ ಸಹಾ ಇಬ್ಬರು ಊರಿಂದ ಹೊರಗೆ ಹೋಗಿದ್ದಾರೆ. ಮೈಸೂರಿಗೆ ಬಂದವರೇ ಮಂಡಿ ಮೊಹಲ್ಲಾದಲ್ಲಿ ಲಾಡ್ಜ್‌ನಲ್ಲಿ ರೂಂ ಪಡೆದಿದ್ದಾರೆ. ರೂಂ‌ಮ್ ಪಡೆಯುವ ಮುನ್ನ ಮನೆಗೆ ಕರೆ ಮಾಡಿ ಅಮ್ಮನಿಗೆ ಕೊರೋನಾ ಬಗ್ಗೆ ಎಚ್ಚರವಾಗಿರುವಂತೆ ಸೂಚಿಸಿದ್ದ. ಅದಾದ ನಂತರ ಅದೇನಾಯ್ತೋ ಗೊತ್ತಿಲ್ಲ. ಲಾಡ್ಜ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.