ತುಮಕೂರು(ಫೆ.12): ವಂಚಕನೊಬ್ಬ ಕಡಿಮೆ ಬೆಲೆಗೆ ಕುರಿ ಕೊಡಿಸುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಅವರಿಂದ 8 ಲಕ್ಷ ರು. ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಮಧುಗಿರಿಯಲ್ಲಿ ಮಂಗಳವಾರ ನಡೆದಿದೆ.

ಕೆ.ಆರ್‌.ಪೇಟೆಯ ನಿವಾಸಿ ಬಾಬು ಎಂಬಾತನೇ ಮೋಸಕ್ಕೊಳಾಗದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ನಾನು ಗಾಜನೂರಿನ ಮಂಜು ಎಂಬುದಾಗಿ ಈತನನ್ನು ಪರಿಚಯಿಸಿಕೊಂಡು ಬುಧವಾರ ಮಧುಗಿರಿ ಸಂತೆಗೆ ನಮ್ಮ ಸಂಬಂಧಿಕರ ಕುರಿಗಳು ಬರಲಿದ್ದು, ಅವುಗಳನ್ನು ನಾನು ನಿಮಗೆ ಕಡಿಮೆ ಬೆಲೆಗೆ ಕೊಡಿಸುವುದಾಗಿ ಬಾಬು ಅವರನ್ನು ನಂಬಿಸಿ ದೂರವಾಣಿ ಕರೆ ಮಾಡಿ ಮಧುಗಿರಿಗೆ ಕರೆಸಿಕೊಂಡಿದ್ದಾನೆ.

ಆದಾಯ 3 ಲಕ್ಷಕ್ಕೂ ಕಡಿಮೆಯಾ..? ಕೋರ್ಟ್ ವ್ಯವಹಾರ ಫ್ರೀ

ನಂತರ ಕುರಿಗಳ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ಮಾತುಕತೆ ನಡೆಸಿ ವ್ಯಾಪಾರ ಕುದಿರಿಸುವ ನೆಪದಲ್ಲಿ ನಾಟಕವಾಡಿ ಬಾಬು ಅವರಿಂದ 8 ಲಕ್ಷ ರು. ಹಣ ಪಡೆದ ವಂಚಕ ಮಂಜು ಇಲ್ಲೇ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಹೇಳಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಹಣ ಪಡೆದ ಮಂಜು ಎಷ್ಟೋತ್ತಾದರೂ ಮರಳಿ ವಾಪಸ್‌ ಬಾರದಿದ್ದಾಗ ಆತಂಕಗೊಂಡ ಬಾಬು ದೂರವಾಣಿ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಇದನ್ನು ಗಮನಿಸಿದ ಬಾಬು ನಾನು ಮೋಸ ಹೋಗಿದ್ದೇನೆ ಎಂಬ ಅರಿವಾಗಿದೆ.ನಂತರ ಮಧುಗಿರಿ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ನಲಪಾಡ್ ರಕ್ಷಿಸಲು ಬಂದ ಗನ್ ಮ್ಯಾನ್ ಕತೆ ಏನಾಯ್ತು?

ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಕಾಂತರಾಜ್‌, ಮೋಸಗಾರರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಯಾವುದೇ ವ್ಯಕ್ತಿಗಳ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣ ಪೋಲಿಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.