Chikkamagaluru: ದೇವಸ್ಥಾನದ ಕಾಣಿಕೆ ಹುಂಡಿ ಹಣ ಎಗರಿಸುತ್ತಿದ್ದ ವ್ಯಕ್ತಿಗೆ ಸ್ಥಳೀಯರ ಧರ್ಮದೇಟು
ದೇವರ ಹಣ ಕದಿಯುವ ವೇಳೆ ಸಿಕ್ಕಿ ಬಿದ್ದು ಮಂಗಳಾರತಿ ಮಾಡಿಸಿಕೊಂಡು ವ್ಯಕ್ತಿಯನ್ನ ಬೇಲೂರು ಮೂಲದವನು ಎಂದು ಗುರುತಿಸಲಾಗಿದೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ. 22) : ದೇವಸ್ಥಾನದ ಕಾಣಿಕೆ ಹುಂಡಿ ಹಣವನ್ನ ಎಗರಿಸುತ್ತಿದ್ದ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಸ್ಥಳಿಯರು ಧರ್ಮದೇಟು ನೀಡಿದ ಘಟನೆ ಚಿಕ್ಕಮಗಳೂರು ( Chikkamgaluru)ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಇತಿಹಾಸ ಪ್ರಸಿದ್ಧ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರು ಭಯ-ಭಕ್ತಿಯಿಂದ ಪೂಜೆ ಸಲ್ಲಿಸಿ, ಕೈಮುಗಿದು ಹೋಗುವ ಅಣ್ಣಪ್ಪ ಸ್ವಾಮಿ ದೇವಸ್ಥಾದಲ್ಲಿ (Annappa Swamy Temple) ಕಾಣಿಕೆ ಹುಂಡಿಯನ್ನ ಕಳ್ಳತನ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳಿಯರು ಪೂಜೆ ಮಾಡಿದ್ದಾರೆ. ದೇವರ ಹಣ ಕದಿಯುವ ವೇಳೆ ಸಿಕ್ಕಿ ಬಿದ್ದು ಮಂಗಳಾರತಿ ಮಾಡಿಸಿಕೊಂಡು ವ್ಯಕ್ತಿಯನ್ನ ಬೇಲೂರು ಮೂಲದವನು ಎಂದು ಗುರುತಿಸಲಾಗಿದೆ.
ಕಷ್ಟಕಾರ್ಪಣ್ಯಗಳು ದೂರವಾಗಲಿ ಎಂದು ಭಗವಂತನಿಗೆ ಭಕ್ತರು ಹರಿಕೆ ರೂಪದಲ್ಲಿ ಹಣವನ್ನು ಕಾಣಿಕೆಡಬ್ಬಕ್ಕೆ ಹಾಕುತ್ತಾರೆ. ಆದ್ರೆ ಕೆಲವರ ಹಣದ ಆಸೆಗೆ ಕಾಣಿಕೆ ಡಬ್ಬಕ್ಕೆ ಕನ್ನ ಹಾಕಿ ಕಳ್ಳತನದ ದಾರಿ ಹಿಡಿಯುತ್ತಾರೆ. ಹೀಗೆ ಈ ಕಳ್ಳ ಕಾಣಿಕೆ ಹಾಕುವ ನೆಪದಲ್ಲಿ ಹಣ ಕದಿಯುವ ವೇಳೆಯಲ್ಲಿ ಸಿಕ್ಕಿಬಿದ್ದು ಸ್ಥಳೀಯರಿಂದ ಪೂಜೆ ಮಾಡಿಸಿಕೊಂಡಿದ್ದೇನೆ.
ಕಾಣಿಕೆಡಬ್ಬದಿಂದ ಹಣ ಕಳ್ಳತನ ಮಾಡುವಾಗ ಸಿಕ್ಕಬಿದ್ದ ಕಳ್ಳ: ದೇವರ ಬಳಿ ಇದ್ದ ಕಾಣಿಕೆ ಹುಂಡಿಯಿಂದ ಹಣವನ್ನ ಜೇಬಿಗೆ ತುಂಬಿಕೊಂಡಿದ್ದ ಎನ್ನಲಾಗಿದೆ. ಆದರೆ, ಹಲ್ಲೆಗೊಳಗಾದ ವ್ಯಕ್ತಿ ವಿಡಿಯೋದಲ್ಲಿ ಮಾತನಾಡಿದ್ದು, ನಾನು ಹುಂಡಿಗೆ ಒಂದಿಷ್ಟು ಹಣವನ್ನು ಹಾಕಿದ್ದೆ, ಮತ್ತೊಂದಿಷ್ಟು ಹಣವನ್ನ ಹುಂಡಿಗೆ ಹಾಕಲೆಂದು ಕೈಯಲ್ಲಿ ಹಿಡಿದುಕೊಂಡಿದ್ದೇ ಎಂದು ಹೇಳಿದ್ದಾನೆ.
ಇದನ್ನೂ ಓದಿ: Chikkamagaluru Naxalism: ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ?
ಆದರೆ, ಆತ ಹುಂಡಿಯಿಂದ ಹಣವನ್ನ ಜೇಬಿಗೆ ಹಾಕಿಕೊಳ್ಳುತ್ತಿದ್ದ ದೃಶ್ಯವನ್ನ ಕಂಡ ಸ್ಥಳಿಯರು ಆತನಿಗೆ ಧರ್ಮದೇಟು ನೀಡಿದ್ದಾರೆ. ಸುಳ್ಳು ಹೇಳಬೇಡ ಎಂದು ನಾಲ್ಕು ಬಾರಿಸಿದ್ದಾರೆ. ಕೊನೆಗೆ ಆತನ ಹೋಗಲಿ ಬಿಡಿ ನನ್ನದೆ ತಪ್ಪು ಎಂದಿದ್ದಾನೆ. ಈ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಹುಂಡಿ ಹಣ ಕದಿಯುತ್ತಿದ್ದ ವ್ಯಕ್ತಿಗೆ ಧರ್ಮದೇಟು ನೀಡಿದ ಯುವಕರು ಮತ್ತೊಮ್ಮೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಚಾರ್ಮಾಡಿ ರಸ್ತೆಯಲ್ಲಿ ಸಾಗುವ ಪ್ರಯಾಣಿಕರ ಆರಾಧ್ಯ ದೈವ: ಚಾರ್ಮಾಡಿ ಘಾಟಿಯ (Charmady Ghat) ಅಣ್ಣಪ್ಪಸ್ವಾಮಿ ಅಂದರೆ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳು, ಲಕ್ಷಾಂತರ ಜನ ಭಯ-ಭಕ್ತಿಯಿಂದ ಪೂಜೆ ಮಾಡುತ್ತಾರೆ. ಕಾಣಿಕೆ ಹಾಕಿ ಮುಂದೆ ಹೋಗುತ್ತಾರೆ. ಈ ಮಾರ್ಗದಲ್ಲಿ ಸಂಚರಿಸುವಾಗ ಇಲ್ಲಿ ಪೂಜೆ ಮಾಡಿ ಹೋದರೆ ಸಂಚರಿಸುವ ಮಾರ್ಗದಲ್ಲಿ ಯಾವುದೇ ಅನಾಹುತ-ಅಪಾಯಗಳು ಸಂಭವಿಸುವುದಿಲ್ಲ ಎಂಬ ನಂಬಿಕೆ ಸ್ಥಳೀಯರದ್ದು.
ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರು ಈ ಅಣ್ಣಪ್ಪಸ್ವಾಮಿಗೆ ಪೂಜೆ ಮಾಡಿ, ಕಾಣಿಕೆ ಹಾಕದೆ ಮುಂದೆ ಹೋಗಲ್ಲ. ಆದರೆ, ಇಂತಹಾ ಭಕ್ತರ ಹಾಗೂ ಕಾಣಿಕೆ ಹಣವನ್ನ ಕದಿಯುತ್ತಿದ್ದ ಕಾರಣ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ.