Chikkamagaluru Naxalism ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ?

  • ಅಷ್ಟಕ್ಕೂ ಕಾಫಿನಾಡಿನಿಂದ ಕೇರಳಕ್ಕೆ ನಕ್ಸಲ್ ನಾಯಕರು ಹೋಗಿದಾದ್ರೂ ಯಾಕೆ
  • ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ 
  • ನಕ್ಸಲ್ ಮುಕ್ತ ಜಿಲ್ಲೆನ್ನಾಗಿ ಮಾಡುವತ್ತ ಪೊಲೀಸ್ ಇಲಾಖೆ ಪ್ಲಾನ್ !

 

Are Naxalism Ends in Chikkamagaluru gow

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಏ.21) : ನಕ್ಸಲ್ (Naxal) ಕಾಫಿನಾಡಿನಲ್ಲಿ ಒಂದು ಕಾಲದಲ್ಲಿ ಭಾರೀ ಸದ್ದು ಮಾಡಿದ ನಕ್ಸಲ್ ಚಟುವಟಿಕೆ ಇದೀಗ ತಣ್ಣಗಾಗಿದೆ.! ಅದರಲ್ಲೂ ಮಲೆನಾಡಿನ ನಕ್ಸಲ್ ಚಳುವಳಿಯ ಸೂತ್ರಧಾರ ಬಿ.ಜಿ ಕೃಷ್ಣಮೂರ್ತಿ (B.G. Krishnamoorthy), ಸಾವಿತ್ರಿ (Savitri) ಅರೆಸ್ಟ್ ಆಗುತ್ತಿದ್ದಂತೆ ಪೊಲೀಸರು ಕೂಡ ನಿರುಮ್ಮಳರಾಗಿದ್ದಾರೆ. ನಕ್ಸಲ್ ಸೂತ್ರಧಾರರ ಬಂಧನದ ಮೂಲಕ ಮಲೆನಾಡಿನಲ್ಲಿ ಕೆಂಪು ಉಗ್ರರ ನೆಲ ಕಳಚಿಬಿದ್ದಿದೆ. ಕೇರಳ ಪೊಲೀಸರಿಗೆ ಸಿಕ್ಕಿಬಿದ್ದ ನಕ್ಸಲ್ ನಾಯಕರು, ಇದೀಗ ಕಾಫಿನಾಡಿನ ಖಾಕಿಯ ಸುರ್ಪದಿನಲ್ಲಿದ್ದಾರೆ. ಅಷ್ಟಕ್ಕೂ ಕಾಫಿನಾಡಿನಿಂದ ಕೇರಳಕ್ಕೆ ನಕ್ಸಲ್ ನಾಯಕರು ಹೋಗಿದಾದ್ರೂ ಯಾಕೆ, ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ ಎನ್ನುವ ಪ್ರಶ್ನೆ ಮೂಡಿದೆ.

ನಕ್ಸಲ್ ನಿಗ್ರಹ ದಳ ಹುಟ್ಟಿಕೊಂಡ ಬಳಿಕ ಜಿಲ್ಲೆ, ರಾಜ್ಯದಿಂದಲೇ ಕಾಲ್ಕಿತ್ತ ನಕ್ಸಲ್ ಪಡೆ : ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾದತ್ತ ಮುಖ
ಚಿಕ್ಕಮಗಳೂರು, ಪಶ್ಚಿಮಘಟ್ಟಗಳ ರಮಣೀಯ ಪ್ರಕೃತಿಯ ಐಸರಿ .ಎತ್ತ ಕಣ್ಣಾಯಿಸಿದ್ರೂ ಅತ್ತ ಸುಂದರ ಪರಿಸರ ಕಣ್ಣಿಗೆ ರಾಚುತ್ತೆ. ಇದೇ ಪರಿಸರವೇ ಒಂದು ಕಾಲದಲ್ಲಿ ನಕ್ಸಲ್ ಹುಟ್ಟಿಗೆ ಕಾರಣವಾಯ್ತು. ನಕ್ಸಲ್ ಚಟುವಟಿಕೆ ಮಲೆನಾಡಿನಲ್ಲಿ ಬೇರೂರಲು ವೇದಿಕೆ ಮಾಡಿಕೊಡ್ತು ಅನ್ನೋದು ಕೂಡ ಅಷ್ಟೇ ಸತ್ಯ.

ನಕ್ಸಲ್ ಸೂತ್ರಧಾರ ಬಿ.ಜಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದೇ ಕಾಡಿನಲ್ಲಿ ಭೂಗತರಾಗುವ ಮೂಲಕ ಪೊಲೀಸರಿಗೆ ಸೆಡ್ಡು ಹೊಡೆದು ಅನೇಕ ಯುವಕರನ್ನ ನಕ್ಸಲ್ ಲೋಕದಲ್ಲಿ ಸಕ್ರಿಯರಾಗಿಸಿದ್ರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಎನ್.ಆರ್ ಪುರ, ಕೊಪ್ಪದ ಸುತ್ತಮುತ್ತ ಅನೇಕ ವಿಧ್ವಂಸಕ ಕೃತ್ಯಗಳನ್ನ ಎಸಗಿ ಖಾಕಿಗೆ ಸವಾಲೆಸೆದಿದ್ರು. ಆ ಬಳಿಕ ನಕ್ಸಲ್ ನಿಗ್ರಹ ದಳ ಹುಟ್ಟಿಕೊಂಡ ಬಳಿಕ ನಮ್ಮ ಜಿಲ್ಲೆ, ರಾಜ್ಯದಿಂದಲೇ ಕಾಲ್ಕಿತ್ತ ನಕ್ಸಲ್ ಪಡೆ, ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ ಸೇರಿ ಹಲವೆಡೆ ತೆರಳಿ ಯುವಕ-ಯುವತಿಯರನ್ನ ನಕ್ಸಲ್ ಕಡೆ ಸೆಳೆದಿದ್ರು.

UTTARA KANNADA 108 ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಹೀಗೆ ಒಂದು ಕಾಲದಲ್ಲಿ ಪೊಲೀಸರಿಗೆ ಸಿಂಹ ಸ್ವಪ್ನವಾಗಿದ್ದ ಬಿ.ಜಿ ಕೃಷ್ಣಮೂರ್ತಿ ಇದೀಗ ಪೊಲೀಸರ ಅತಿಥಿ ! ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬುಕ್ಕಡಿಬೈಲಿನ ನಿವಾಸಿ. ಎರಡು ದಶಕಗಳ ಹಿಂದೆ ಮಲೆನಾಡಿನ ನಕ್ಸಲ್ ಚಳುವಳಿ ಸೂತ್ರಧಾರ ಬಿ.,ಜಿ ಕೃಷ್ಣಮೂರ್ತಿಯ ಹೆಸರು ಕೇಳದವರೇ ಇಲ್ಲ. ಶೃಂಗೇರಿ, ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗಗಳ ಪೊಲೀಸರೂ ಕೂಡ ಇದೇ ಕೃಷ್ಣಮೂರ್ತಿಯ ಬೆನ್ನು ಬಿದ್ದಿದ್ದರು. ಹೀಗಿರುವಾಗ 2000ನೇ ಇಸವಿಯಲ್ಲಿ ಭೂಗತನಾದ ಈ ನಕ್ಸಲ್ ನಾಯಕ ಕೇರಳ, ಆಂಧ್ರದ ಕಡೆ ಮುಖಮಾಡಿದ್ರು. ಆ ವೇಳೆ ಕೃಷ್ಣಮೂರ್ತಿ ತಲೆಗೆ ಪೊಲೀಸ್ ಇಲಾಖೆ, ಐದು ಲಕ್ಷ ನಗದು ಬಹುಮಾನವೂ ಘೋಷಣೆ ಮಾಡಿತ್ತು. ಆ ನಕ್ಸಲ್ ನಾಯಕನ್ನು ಕೇರಳ ಪೊಲೀಸ್ರು ಮೂರು ತಿಂಗಳ ಹಿಂದೆಯಷ್ಟೇ ಬಂಧಿಸಿದ್ರು. ನಕ್ಸಲ್ ಚಳವಳಿ ಸೂತ್ರಧಾರನಾಗಿದ್ದ ಬಿ.ಜಿ ಕೃಷ್ಣಮೂರ್ತಿಯ ವಿರುದ್ಧ 53 ಪ್ರಕರಣಗಳು ದಾಲಾಗಿದೆ.

ಒಂದಡೆ ಶರಣಾಗತಿ ಮತ್ತೊಂದಡೆ ಹೊರ ರಾಜ್ಯದಲ್ಲಿ ಬಂಧನವಾಗುತ್ತಿರುವ ನಕ್ಸಲರು ಮಲೆನಾಡಿನಲ್ಲಿ ಕೆಂಪು ಉಗ್ರರ ನೆಲೆಗೆ ಈಗ ಬ್ರೇಕ್: ಬಿ.ಜಿ ಕೃಷ್ಣಮೂರ್ತಿ ಬಂಧನದ ಜೊತೆಜೊತೆಗೆ 2001ರಿಂದಲೂ ಭೂಗತರಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಾವಿತ್ರಿ ಬಂಧನ ಕೂಡ ಆಗಿದೆ. ನಕ್ಸಲ್ ನಾಯಕಿ ಸಾವಿತ್ರಿಯನ್ನ ಬಂಧಿಸಿದ ಕೇರಳ ಪೊಲೀಸರು, ಅನೇಕ ಪ್ರಕರಣಗಳ ತನಿಖೆಗೆ ಕಾಫಿನಾಡಿನ ಪೊಲೀಸರಿಗೆ ಕೂಡ ಸಾವಿತ್ರಿ ಬೇಕಾಗಿದ್ದರಿಂದ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಇಬ್ಬರು ಕೂಡ ಬಿಗಿ ಪೊಲೀಸ್ ಬಂದ್ ಬಸ್ತ್ನಲ್ಲಿ ನ್ಯಾಯಾಲಯಗಳಿಗೆ ಹಾಜರಾಗಿ ವಿಚಾರಣೆಯನ್ನ ಎದುರಿಸುತ್ತಿದ್ದಾರೆ.ಸದ್ಯ ಇಬ್ಬರ ಬಂಧನದ ಮೂಲಕ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಬೇರೂರಿದ್ದ ನಕ್ಸಲ್ ಚಟುವಟಿಕೆ ದಿನೇ ದಿನೇ ಕ್ಷೀಣಿಸುತ್ತಿದೆ, ಕಾಡಿನಲ್ಲಿ ಬಂದೂಕು ಹಿಡಿದು ಹೋರಾಟ ನಡೆಸಿದೋರು ನಾಡಿನತ್ತ ಮುಖ ಮಾಡ್ತಾ ಇದ್ದಾರೆ.

ಸರ್ಕಾರ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಮಂದಿ ನಕ್ಸಲರು ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. 2010ರಲ್ಲಿ ವೆಂಕಟೇಶ್ , ಜಯಾ, ಸರೋಜ, ಮಲ್ಲಿಕಾ, 2014 ಸಿರಿಮನೆ ನಾಗರಾಜ್ , ನೂರ್ ಜಲ್ವೀಕರ್, 2016ರಲ್ಲಿ ಭಾರತಿ, ಫಾತಿಂ, ಪದ್ಮನಾಭ್ ,ಪರುಶುರಾಮ್, 2017ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ ಜಿಲ್ಲಾಡಳಿತದ ಮುಂದೆ ಶರಣಾಗತಿಯಾಗಿದ್ದರು. ಜಿಲ್ಲೆಯ ಮಲೆನಾಡು ಹಾಗೂ ಪಶ್ವಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯ ಮಂಚೂಣಿ ನಾಯಕರಲ್ಲಿ ಬಿ.ಜಿ ಕೃಷ್ಣಮೂರ್ತಿ, ಸಾವಿತ್ರಿ ಕೂಡ ಇದ್ದರು. ಸದ್ಯ ಇವರಿಬ್ಬರ ಬಂಧನದ ಮೂಲಕ ಮಲೆನಾಡಿನಲ್ಲಿ ಕೆಂಪು ಉಗ್ರರ ನೆಲೆಗೆ ಈಗ ಬ್ರೇಕ್ ಬಿದ್ದಂತಾಗಿದೆ.

ಸಿದ್ದರಾಮಯ್ಯರನ್ನು ಸುಳ್ಳಿನ ರಾಮಯ್ಯ ಎಂದ HD Kumaraswamy

ನಕ್ಸಲ್ ಮುಕ್ತ ಜಿಲ್ಲೆನ್ನಾಗಿ ಮಾಡುವತ್ತ ಪೊಲೀಸ್ ಇಲಾಖೆ ಪ್ಲಾನ್ !: ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ  ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ನ್ಯಾಯಾಲಯದಿಂದ ಅನುಮತಿ ಪಡೆದು ಬಂಧಿತ ನಕ್ಸಲ್ ರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಇಲ್ಲ, ಎ ಎನ್ ಎಫ್ ಸಿಬ್ಬಂದಿಗಳು ನಿರಂತರವಾಗಿ ಕೂಬಿಂಗ್ ನಡೆಸುತ್ತಿದ್ದಾರೆ. ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ನಕ್ಸಲ್ ನಾಯಕ ಬಿ .ಜಿ ಕೃಷ್ಣಮೂರ್ತಿಯಿಂದ ಮಹತ್ವ ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ನಕ್ಸಲ್ ಮುಕ್ತ ಜಿಲ್ಲೆನ್ನಾಗಿ ಮಾಡುವತ್ತ ಪೊಲೀಸ್ ಇಲಾಖೆ ಚಿತ್ತ ಹರಿಸಿದೆ. ಇದಕ್ಕಾಗಿ ಹೊರ ರಾಜ್ಯ, ಅಕ್ಕಪಕ್ಕ ಜಿಲ್ಲೆ ಗಡಿ ಪ್ರದೇಶದ ಮೇಲೆ ತೀವ್ರ ನಿಗಾ ವಹಿಸಿಲಾಗಿದೆ.

Latest Videos
Follow Us:
Download App:
  • android
  • ios