ಹಾಸನ [ಡಿ.07]: ಯುವತಿಯರ ನಗ್ನ ಫೋಟೊವನ್ನು ಕ್ರಿಯೇಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೇಡಿಗೆ ಗ್ರಾಮದ ರಾಜಶೇಖರ್ ವಾಮ ಎಂಬ ವ್ಯಕ್ತಿ ಯುವತಿಯರ ಫೋಟೊಗಳನ್ನು ನಗ್ನವಾಗಿರುವಂತೆ ಮಾಡುತ್ತಿದ್ದ ಕಿರಾತಕ ಬಳಿಕ ಹಣ ವಸೂಲಿ ಮಾಡುತ್ತಿದ್ದ. 

ಫೇಸ್ ಬುಕ್ ಮೂಲಕ ಯುವತಿಯರ ಫೊಟೊಗಳನ್ನು ಡೌನ್ ಲೋಡ್ ಮಾಡಿಕೊಂಡು ನಗ್ನ ರೂಪ ಕೊಡುತ್ತಿದ್ದ. ಬಳಿಕ ಅವರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಮದ್ಯಪಾನ ಮಾಡಿ ಜೀವ ಉಳಿಸಿ; ಹಾಸನ ಪೊಲೀಸ್ರಿಗೆ ತಪ್ಪು ಬ್ಯಾರಿಕೇಡ್ ಸಂಕಷ್ಠ!...  

ಹಣವನ್ನು ಕೊಡಿದ್ದರೆ ನಗ್ನ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗ ಬೆದರಿಕೆ ಹಾಕುತ್ತಿದ್ದ. 

ಹಾಸನದ ಯುವತಿಯೋರ್ವಳಿಗೂ ಕೂಡ ರಾಜಶೇಖರ್ ಇದೇ ರೀತಿ ಮಾಡಿದ್ದು, 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು ಈ ವೇಳೆ ಯುವತಿಯ ದೂರನ್ನು ಆದರಿಸಿ ಆತನನ್ನು ಬಂಧಿಸಲಾಗಿದೆ. 

ಹಾಸನದ ಸಿಇಎನ್ ಪೊಲೀಸರು ರಾಜಶೇಖರನನ್ನು ಬಂಧಿಸಿದ್ದಾರೆ.