ಮದ್ಯಪಾನ ಮಾಡಿ ಜೀವ ಉಳಿಸಿ; ಹಾಸನ ಪೊಲೀಸ್ರಿಗೆ ತಪ್ಪು ಬ್ಯಾರಿಕೇಡ್ ಸಂಕಷ್ಠ!
ಹಾಸನ ಪೊಲೀಸರು ಹಾಕಿದ ಬ್ಯಾರಿಕೇಡ್‌ನಲ್ಲಿ ಬಾರಿ ಎಡವಟ್ಟು ಮಾಡಿದ್ದಾರೆ. ತಪ್ಪಿನ ಅರಿವಾದರೂ ಪೊಲೀಸರಿಗೆ ಸಂಕಷ್ಠ ನಿವಾರಣೆಯಾಗಿಲ್ಲ. ಹಾಸನ ಪೊಲೀಸರ ಬ್ಯಾರಿಕೇಡ್ ಸಂಕಷ್ಠ ವಿವರ ಇಲ್ಲಿದೆ.
ಹಾಸನ(ಡಿ.05): ಹಲವು ಬಾರಿ ಒಂದಕ್ಷರ ತಪ್ಪಾಗಿ ಏನೇನೋ ಅನಾಹುತಗಳಾಗಿವೆ. ಸಾಮಾಜಿಕ ಕಾಲದ ಜಗತ್ತಿನಲ್ಲಿ ಇನ್ನೂ ಅಪಾಯಕಾರಿ, ಅಕ್ಷರ ಸರಿ ಮಾಡಿದರೂ, ಸಾಮಾಜಿಕ ಜಾಲತಾಣದಲ್ಲಿ ವರ್ಷ ಕಳೆದರೂ ಟ್ರೋಲ್ ಆಗುತ್ತಲೇ ಇರುತ್ತದೆ. ಇದೀಗ ಇಂತದ್ದೆ ಘಟನೆ ಹಾಸನದಲ್ಲಿ ನಡೆದಿದೆ. ರಸ್ತೆಯಲ್ಲಿ ಹಾಕಿರುವ ಬ್ಯಾರಿಕೇಡ್‌ನಲ್ಲಿ ಅಕ್ಷರಗಳು ತಪ್ಪಾಗಿವೆ. ತಕ್ಷಣವೇ ಪೊಲೀಸರು ಸರಿಯಾದ ಬರಹವುಳ್ಳ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಬ್ಯಾರಿಕೇಡ್ ರಾರಾಜಿಸುತ್ತಿದೆ.
ಇದನ್ನೂ ಓದಿ: ರೊಚ್ಚಿಗೆದ್ದ ಗ್ರಾಹಕನಿಂದ ಕತ್ತೆ ವಾಹನ ಬೋರ್ಡ್; ಕೋರ್ಟ್ ಮೆಟ್ಟಿಲೇರಿದ MG !
ಹಾಸನದ ಬಿಎಂ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಈ ಬ್ಯಾರಿಕೇಡ್‌ನಲ್ಲಿ ಮದ್ಯ ಪಾನ ಮಾಡಿ ಜೀವ ಉಳಿಸಿ ಎಂದು ಬರೆಯಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಬರಹ ಬದಲು ಅಕ್ಷರಗಳು ತಪ್ಪಾಗಿ ಬರೆಯಲಾಗಿದೆ. ತಪ್ಪಾಗಿ ಬರೆಯಲಾಗಿರು ಬ್ಯಾರಿಕೇಡ್‌ಗಳನ್ನು ಪೊಲೀಸರು ಬಿಎಂ ರಸ್ತೆಯಲ್ಲಿ ಹಾಕಿದ್ದಾರೆ.
ಇದನ್ನೂ ಓದಿ: 60 ಲಕ್ಷದ ಬೈಕ್‌ಗೆ 42 ಲಕ್ಷ ರೂ ದಂಡ; ವಾಹನಕ್ಕಾಗಿ 14 ತಿಂಗಳು ಕಾನೂನು ಹೋರಾಟ!
ಹಾಕಿದ ಮರುಕ್ಷಣವೇ ಪೊಲೀಸರಿಗೆ ಹಲವು ಕರೆಗಳು ಬಂದಿವೆ. ಎಚ್ಚೆತ್ತುಕೊಂಡ ಪೊಲೀಸರು ಬ್ಯಾರಿಕೇಡ್ ಬದಲಾಯಿಸಿದ್ದಾರೆ. ಹೊಸ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ತಪ್ಪಾಗಿರುವ ಬ್ಯಾರಿಕೇಡ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಸನ ಸಂಚಾರಿ ಪೊಲೀಸ್, ಮದ್ಯಾನ ಮಾಡಿ ಜೀವ ಉಳಿಸಿ ಅನ್ನೋ ತಪ್ಪು ಬರದ ಬ್ಯಾರಿಕೇಡ್ ಇದೀಗ ರಾಜ್ಯದಲ್ಲೇ ಸದ್ದು ಮಾಡುತ್ತಿದೆ.