ಮಾಂಸದ ಅಡುಗೆ ಮಾಡ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದ ಸಮೀಪ ನಡೆದಿದೆ. ಏಕಾಏಕಿ ದಾಳಿ ಮಾಡಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಆತ ಅಡುಗೆ ಮಾಡುತ್ತಿದ್ದ ಮಾಂಸ ಯಾವುದು..? ಅರೆಸ್ಟ್ ಮಾಡಿದ್ದೇಕೆ..? ಇಲ್ಲಿ ಓದಿ.

ಮೈಸೂರು(ಡಿ.05): ಜಿಂಕೆ ಮಾಂಸದ ಅಡುಗೆ ಸಿದ್ದಪಡಿಸುತ್ತಿದ್ದ ಮಾಹಿತಿ ತಿಳಿದು ದಾಳಿ ನಡೆಸಿದ ವನ್ಯಜೀವಿ ಅರಣ್ಯ ವಲಯದ ಸಿಬ್ಬಂದಿ ವ್ಯಕ್ತಿಯೊಬ್ಬರನ್ನು ಬಂಧಿಸಿ ಅರೆ ಬೆಂದ ಜಿಂಕೆ ಮಾಂಸ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ನವಿಲೂರು ಗ್ರಾಮದಲ್ಲಿ ಬುಧವಾರ ಜರುಗಿದೆ.

ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದ ರವಿ ಬಂಧಿತ ಆರೋಪಿ. ಮನೆಯಲ್ಲಿ ಜಿಂಕೆ ಮಾಂಸ ಇದೆಯೆಂದು ಖಚಿತ ಮಾಹಿತಿಯ ಮೇರೆಗೆ ಸಿಎಫ್‌ ನಾರಾಯಣಸ್ವಾಮಿ ಹಾಗೂ ಎಸಿಎಫ್‌ ಪ್ರಸನ್ನಕುಮಾರ್‌ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಹನುಮಂತರಾಜು ಅವರ ನೇತೃತ್ವದಲ್ಲಿ ರವಿ ಮನೆಯ ಮೇಲೆ ದಾಳಿ ಮಾಡಿದಾಗ ಅರೆ ಬೆಂದಿದ್ದ ಒಂದು ಬಕೆಟ್ ಜಿಂಕೆ ಮಾಂಸದೊಂದಿಗೆ ಹಿಂದಿನ ಬಾಗಿಲಿನಿಂದ ಪರಾರಿಯಾಗಲು ಆರೋಪಿ ರವಿ ಪ್ರಯತ್ನಿಸಿದ್ದಾರೆ.

ವಾಹನ ಸವಾರರಿಂದ ದಂಡ ಪಡೆದು ಹೆಲ್ಮೆಟ್‌ ವಿತರಣೆ

ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ ರತ್ನಾಕರ್‌, ಸಿಬ್ಬಂದಿ ಮಂಜು, ದಿವಕರ್‌, ಶಂಕ್ರಪ್ಪ, ಅರುಣ್‌ಕುಮಾರ್‌ ಭಾಗವಹಿಸಿದ್ದರು.

ಮತಗಟ್ಟೆಯ ಮುಂದೆಯೇ ಹಣ ಹಂಚಿಕೆ..! ಕಣ್ಮುಚ್ಚಿ ಕುಳಿತ ಪೊಲೀಸರು