ಮೈಸೂರು(ಡಿ.05): ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ ಎಂದು ಜಾಗೃತಿ ಮೂಡಿಸಿದ ಮೇಲೂ ದುಡ್ಡಿನ ಪ್ರಭಾವ ಮಾತ್ರ ಮತದಾರರನ್ನು ಬಿಟ್ಟಿಲ್ಲ. ಮೈಸೂರಿನಲ್ಲಿ ರಾಜಾರೋಷವಾಗಿ ಮತಗಟ್ಟೆಯ ಸಮೀಪವೇ ಮತದಾರರಿಗೆ ದುಡ್ಡು ಹಂಚುತ್ತಿರುವ ದೃಶ್ಯ ಕಂಡುಬಂದಿದೆ.

ಮೈಸೂರಿನ ಹುಣಸೂರಿನಲ್ಲಿ ಮತಗಟ್ಟೆ ಬಳಿಯೇ ಝಣ ಝಣ ಕಾಂಚಣ ಸದ್ದು ಕೇಳಿದ್ದು, ಮಹಿಳಾ ಕಾರ್ಯಕರ್ತೆಯರು ಹಣ ಹಂಚಿಕೆ ಮಾಡುತ್ತಿರುವ ವೀಡಿಯೋ ಸೆರೆಯಾಗಿದೆ. ರಾಜಾರೋಷವಾಗಿ ಹಣ ಹಂಚುತ್ತಿದ್ದರೂ ಪೋಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ಸರಸದ ನಡುವೆ ಕಲಹ: ಬೆತ್ತಲೆ ಇದ್ದವನನ್ನು ಬಡಿದು ಕೊಂದಳು..!

ಪೋಲಿಸ್ ವಾಹನದ ಬಳಿಯೇ ಹಣ ಹಂಚಿಕೆ ನಡೆದರೂ ಪೋಲಿಸರು ಮಾತ್ರ ತಿರುಗಿಯೂ ನೋಡಿಲ್ಲ. ಹುಣಸೂರು ತಾಲೂಕಿನ ಹೊಸ ರಾಮೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಹೊಸರಾಮೇನಹಳ್ಳಿ ಹೆಚ್.ಡಿ.ಕೋಟೆ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಸ್ವಗ್ರಾಮದಲ್ಲಿ ಘಟನೆ ನಡೆದಿದೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!