ವಾಹನ ಸವಾರರಿಂದ ದಂಡ ಪಡೆದು ಹೆಲ್ಮೆಟ್ ವಿತರಣೆ
ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕುವುದು ಗೊತ್ತೇ ಇದೆ. ತುಮಕೂರಿನಲ್ಲಿ ಸವಾರರಿಂದ ದಂಡ ಪಡೆದು ಅವರಿಗೆ ಹೆಲ್ಮೆಟ್ ನೀಡಲಾಗುತ್ತಿದೆ. ಈ ಮೂಲಕ ಪ್ರಯಾಣಿಕರಿಗೂ ಅನುಕೂಲ ಮಾಡಿಕೊಟ್ಟು ಕೊರಟಗೆರೆ ಪೊಲೀಸರು ಮಾದರಿಯಾಗಿದ್ದಾರೆ.
ತುಮಕೂರು(ಡಿ.05): ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತದಲ್ಲಿ ಬಹುತೇಕ ಮಂದಿ ತಲೆಗೆ ಬೀಳುವ ಬಲವಾದ ಪೆಟ್ಟಿನಿಂದ ಸಾವನ್ನಪ್ಪುತ್ತಿದ್ದು ಅದನ್ನು ತಪ್ಪಿಸಲು ದಂಡದ ಬದಲು ಹೆಲ್ಮೆಟ್ ನೀಡುವ ಕೆಲಸವನ್ನು ಪೊಲೀಸ್ ಇಲಾಖೆಯಿಂದ ಮಾಡುತ್ತಿದ್ದೇವೆ ಎಂದು ಡಿವೈಎಸ್ಪಿ ಎಂ.ಪ್ರವೀಣ್ ತಿಳಿಸಿದ್ದಾರೆ.
ಅವರು ಪಟ್ಟಣದ ಹೊಳವನಹಳ್ಳಿ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ದಂಡ ಶುಲ್ಕದ ಬದಲು ಹಣ ಪಾವತಿಸಿ ಹೆಲ್ಮೆಟ್ ಪಡೆಯಿರಿ ಎಂಬ ಅಭಿಯಾನವನ್ನು ಪ್ರಾರಂಭಿಸಿ ಮಾತನಾಡಿದ್ದಾರೆ.
ಮತದಾನ ಬಹಿರಂಗ ಪಡಿಸಿದ JDS ಕಾರ್ಯಕರ್ತ..!
ಇತ್ತೀಚೆಗೆ ದ್ವಿಚಕ್ರ ವಾಹನ ಅಪಘಾತದಲ್ಲಿ ಬಹುತೇಕ ಮಂದಿಗೆ ತಲೆಗೆ ಪೆಟ್ಟಾಗಿ ಚಿಕತ್ಸೆಗೂ ಮುಂಚೆಯೇ ಸ್ಥಳದಲ್ಲೆ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ದ್ವಿಚಕ್ರ ವಾಹನ ಸವಾರರಿಗೆ ಹಲವು ಬಾರಿ ಎಚ್ಚಿರಿಕೆ ಮತ್ತು ಅರಿವು ಮೂಡಿಸಿದರು ಅನೇಕರು ಹೆಲ್ಮೆಟ್ ಧರಿಸದೆ ದಂಡವನ್ನು ಪದೇ ಪದೆ ಪಾವತಿಸುತ್ತಿದ್ದು ಇದಕ್ಕಾಗಿ ಪರ್ಯಾಯ ಮಾರ್ಗವಾಗಿ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ದಂಡದ ಬದಲಾಗಿ ಸುಮಾರು 500 ರು. ಮೌಲ್ಯದ ಐಎಸ್‌ಐ ಮಾರ್ಕ್ನ ಹೆಲ್ಮೆಟ್ ಅನ್ನು ಹಣ ಪಡೆದು ಸ್ಥಳದಲ್ಲೆ ನೀಡಲಾಗುತ್ತಿದೆ. ಇದರಿಂದ ಪಾವತಿಸಿದ ಹಣಕ್ಕಾಗಿ ಮತ್ತೆ ಪೊಲೀಸರು ಹೆಲ್ಮೆಟ್ ನೀಡಬಹುದು ಎಂಬ ಬಯದಿಂದ ಕಡ್ಡಾಯವಾಗಿ ಹೆಲ್ಮೆಟ್‌ಅನ್ನು ಧರಿಸಿದಂತಾಗುತ್ತದೆ, ಇದರ ಉದ್ದೇಶ ವಾಹನ ಸವಾರರ ಜೀವ ರಕ್ಷಣೆಯೇ ಹೊರತು ಬೇರೆಯದಲ್ಲ ಎಂದಿದ್ದಾರೆ.
ಹೊಸಕೋಟೆ BJP, ಕಾಂಗ್ರೆಸ್ ಅಭ್ಯರ್ಥಿಗಳಿಲ್ಲ ತಮ್ಮ ಪರ ಮತ ಹಾಕೋ ಅವಕಾಶ.
ಈ ಸಂದರ್ಭದಲ್ಲಿ ಸಿಪಿಐ ನದಾಫ್, ಪಿಎಸ್‌ಐ ಮಂಜುನಾಥ್, ಎಎಸ್‌ಐ ಯೋಗೇಶ್, ಇಲಾಖೆಯ ಸದಾನಂದ್, ರಂಗನಾಥ, ಗುಣಗಾನಪ್ಪ, ಕಿರಣ್,ಮಲ್ಲಿಕಾರ್ಜುನ, ಸೇರಿದಂತೆ ಇತರರು ಹಾಜರಿದ್ದರು.