ಉಡುಪಿ(ಮೇ 20): ಲಾಕ್‌ಡೌನ್‌ ಸಡಿಲಿಕೆಯ ನಂತರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮುಳುಗಡೆಯಾಗಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಘಟನೆ ನಡೆದಿದೆ.

"

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆಯಾಗಿದ್ದು, ಮಲ್ಪೆ ಬಂದರು ಸಮೀಪ ಬರುವಾಗ ಬೋಟ್ ಬಂಡೆಗೆ ಬಡಿದಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಅಪಘಾತ ಸಂಭವಿಸಿದೆ.

ಗಲ್ಫ್‌ನಿಂದ 2ನೇ ಸುತ್ತಿನಲ್ಲಿ 49 ಮಂದಿ ಊರಿಗೆ: ನೇರವಾಗಿ ಕ್ವಾರಂಟೈನ್‌ಗೆ

ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಳ ಸಮುದ್ರ ಬೋಟ್ ಅಪಘಾತಕ್ಕೊಳಗಾಗಿದೆ. ಮೇ 14 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 19 ರಂದು ವಾಪಾಸ್ ಆಗುವಾಗ ನಡೆದ ಆಚಾತುರ್ಯ ನಡೆದಿದೆ.

ಸಿಂಪಲ್ ಮದುವೆ; ಮಾಸ್ಕ್ ಧರಿಸಿ ಹಸೆಮಣೆ ಏರಿದ ಪೊಲೀಸ್ ಪೇದೆ!

ಬೋಟ್‌ನ‌ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆ ಢಿಕ್ಕಿ ಹೊಡೆದಿತ್ತು. ಪಕ್ಕದಲ್ಲಿದ್ದ ಇನ್ನೊಂದು ದೋಣಿಯಲ್ಲಿದ್ದವರು ಬೋಟ್‌ನಲ್ಲಿದ್ದ 6 ಜನರನ್ನು ರಕ್ಷಿಸಿದ್ದಾರೆ. ಸುಮಾರು 5 ಲಕ್ಷ ಮೌಲ್ಯದ ಮೀನು, ಬಲೆ, ಡಿಸೇಲ್ ಸಮುದ್ರ ಪಾಲಾಗಿದೆ. 80 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಘಟನೆ ಸಂಬಂಧ ಕರಾವಳಿ‌ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.,