ಚಿಕ್ಕಬಳ್ಳಾಪುರ(ಜ.02): ನೂತನ ವರ್ಷಾಚರಣೆ ಹೆಸರಿನಲ್ಲಿ ಜಿಲ್ಲೆಯ ಮದ್ಯ ಪ್ರಿಯರ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿರುವ ಜಿಲ್ಲೆಯಲ್ಲಿ ಮದ್ಯ ಹೊಳೆಯಾಗಿ ಹರಿಯುವವಷ್ಟು ಪ್ರಮಾಣದಲ್ಲಿ ಮಾರಾಟವಾಗಿರುವುದು ಮದ್ಯದ ಬಗ್ಗೆ ಸಾರ್ವಜನಿಕರಿಗಿರುವ ಆಕರ್ಷಣೆಯಯನ್ನು ಎತ್ತಿ ತೋರಿಸಿದೆ.

ಹಳೆಯ ವರ್ಷಕ್ಕೆ ವಿದಾಯ ಹೇಳಿ ನೂತನ ವರ್ಷಕ್ಕೆ ಸ್ವಾಗತ ಕೋರುವ ಡಿ.31ರಂದು ಮದ್ಯ ಮಾರಾಟದಲ್ಲಿ ಅಪಾರ ಪ್ರಮಾಣದ ಏರಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಾರಾಟ ಮಳಿಗೆಗಳಲ್ಲಿ ಮಂಗಳವಾರ ರಾತ್ರಿ ಇಲಾಖೆಯ ಈ ವರೆಗಿನ ಎಲ್ಲ ದಾಖಲೆಗಳೂ ಮಕಾಡೆ ಮಲಗುವ ಮಾದರಿಯಲ್ಲಿ ಮದ್ಯ ಮಾರಾಟವಾಗಿದೆ.

ಜಿಲ್ಲೆಯಲ್ಲಿ 158 ಮದ್ಯದಂಗಡಿಗಳು:

ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯದಂಗಡಿ ಸೇರಿ ಎಲ್ಲ ರೀತಿಯ ಒಟ್ಟು ೧೫೮ ಮದ್ಯದಂಗಡಿಗಳು ಅಧಿಕೃತ ವಾಗಿವೆ. ಇವುಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತವಾಗಿ ಎಗ್ಗಿಲ್ಲದೆ ತಲೆ ಎತ್ತಿರುವ ಮದ್ಯ ಮಾರಾ ಟಕ್ಕೆ ಲೆಕ್ಕವೇ ಇಲ್ಲವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮದ್ಯ ಮಾರಾಟ ಪ್ರಮಾಣ ಏರಿಕೆಯಾಗಿದೆ.

ಮದ್ಯ ಮಾರಾಟ ಎಷ್ಟು?:

2017ರ ಡಿಸೆಂಬರ್ ತಿಂಗಳಿನಲ್ಲಿ 99,094 ವಿಸ್ಕಿ, ರಮ್, ಜಿನ್ ಸೇರಿದಂತೆ ಇತರೆ ಮದ್ಯದ ಕೇಸ್‌ಗಳು, 25,178 ಬಿಯರ್ ಕೇಸ್ ಗಳು ಮಾರಾಟವಾಗಿದ್ದರೆ, 2018ರ ಡಿಸೆಂಬರ್‌ನಲ್ಲಿ 10,1550 ನಾನಾ ರೀತಿಯ ಮದ್ಯದ ಕೇಸ್ ಹಾಗೂ 32,919 ಬಿಯರ್ ಕೇಸ್‌ಗಳು ಮಾರಾಟವಾಗಿವೆ. 2019ರ ಡಿಸೆಂಬರ್‌ನಲ್ಲಿ 1,23000 ಬಾಕ್ಸ್‌ಗಳ ಮದ್ಯ ಮತ್ತು 32 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದರಲ್ಲಿ ಡಿ.31ರ ರಾತ್ರಿಯ ಮಾರಾಟ ದಾಖಲೆ ಪ್ರಮಾಣದಲ್ಲಿದೆ.

15 ಅಮಲಿನ ಪ್ರಕರಣ:

ನೂತನ ವರ್ಷಾಚರಣೆ ಆಹ್ವಾನಕ್ಕೆ ಸಂಬಂಧಿಸಿ ಜಿಲ್ಲೆಯ ಯಾವುದೇ ತಾಲೂ ಕಿನಲ್ಲಿ ಪೊಲೀಸರು ಹೆಚ್ಚಿನ ಗಮನ ಹರಿಸಿಲ್ಲ ಎಂಬುದಕ್ಕೆ ದಾಖಲಾಗಿರುವ ಪ್ರಕರಣಗಳೇ ಸಾಕ್ಷಿಯಾಗಿವೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣೆ ಹೊರತುಪಡಿಸಿದರೆ ಉಳಿದ ಯಾವುದೇ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣಗಳು ದಾಖಲಾಗಿಲ್ಲ. ನಂದಿಗಿರಿಧಾಮ ಪೊಲೀಸ್ ಠಾಣೆ ಸಿಬ್ಬಂದಿ ಮಾತ್ರ ಬ್ಯಾರಿಕೇಡ್‌ಗಳನ್ನು ಹಾಕಿ ಮದ್ಯ ಸೇವಿಸಿದ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ಸಂಬಂಧ 15 ಪ್ರಕರಣಗಳನ್ನು ದಾಖಲಿಸಿದ್ದಾರೆ.

ನಂದಿಬೆಟ್ಟಕ್ಕೆ ಹರಿದು ಬಂದ ಜನಸಾಗರ: ಇನ್ನು ಮಂಗಳವಾರ ಸಂಜೆ 4 ಗಂಟೆಯಿಂದ ಬುಧವಾರ ಬೆಳಗ್ಗೆ 8 ಗಂಟೆಯವರೆಗೂ ನಂದಿ ಗಿರಿಧಾಮ ಪ್ರವೇಶವನ್ನು ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ನಂದಿಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಗರ ಸಾಗರವೇ ಸೇರಿತ್ತು. ಸುಮಾರು 2 ಕಿಲೋಮೀಟರ್ ದೂರದ ವರೆಗೂ ಪ್ರವಾಸಿಗರ ವಾಹನಗಳು ನಿಂತಿದ್ದವು. ಬೆಳಗ್ಗೆ 8 ಗಂಟೆಗೆ ಪ್ರವೇಶ ದ್ವಾರವನ್ನು ತೆರೆದ ಕಾರಣ ಏಕ ಕಾಲದಲ್ಲಿ ಅಷ್ಟೂ ವಾಹನಗಳು ಬೆಟ್ಟದ ಮೇಲೆ ಸಾಗಿದವು. ಆದರೆ ಬೆಟ್ಟದಿಂದ ಇಳಿಯುವ ಯಾವುದೇ ವಾಹನ ಇಲ್ಲದ ಕಾರಣ ರಸ್ತೆ ಸಂಚಾರಕ್ಕೆ ಹೆಚ್ಚು ತೊಂದರೆಯಾಗಲಿಲ್ಲ. ಇನ್ನು ಮಂಗಳವಾರ ಸಂಜೆಯಿಂ ದಲೇ ಜನರಿಲ್ಲದೆ ಬಣಗೊಡುತ್ತಿದ್ದ ನಂದಿಗಿರಿಧಾಮ ಬುಧವಾರ ಬೆಳಗಾಗುವಷ್ಟರಲ್ಲಿ ಜನರಿಂದ ತುಂಬಿ ತುಳುಕುತ್ತಿತ್ತು.

ಸರಣಿ ಅಪಘಾತ!: ನೂತನ ವರ್ಷದ ಆಹ್ವಾನಕ್ಕೂ ಮುನ್ನವೇ ನಗರದ ಹೊರವಲಯದಲ್ಲಿ ಸರಣಿ ಅಪ ಘಾತವಾಗಿದೆ. ನಾಲ್ಕು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಮಕ್ಕಳು, ಒಬ್ಬ ಮಹಿಳೆ ಸೇರಿ ದಂತೆ ಒಟ್ಟು ಆರು ಮಂದಿ ತೀವ್ರ ಗಾಯಗೊಂಡಿದ್ದಾ

ವರ್ಷದ ಇತರೆ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಬಿಯರ್‌ಗಿಂತ ಇತರ ಮದ್ಯ ಮಾರಾಟ ಜೋರಾಗಿದೆ. ಡಿಸೆಂಬರ್ ತಿಂಗಳಲ್ಲಿ 11,0550ರಷ್ಟು ಮದ್ಯದ ಕೇಸ್, 32,919 ಬಿಯರ್ ಕೇಸ್‌ಗಳು ಮಾರಾಟವಾಗಿವೆ ಎಂದು ಅಬಕಾರಿ ಡಿವೈಎಸ್ಪಿ ರಮೇಶ್ ಹೇಳಿದ್ದಾರೆ.

ಮಂಡ್ಯ: ಡಿಸೆಂಬರ್ ಅಂತ್ಯಕ್ಕೆ ಗರಿಷ್ಠ ನೀರು ಸಂಗ್ರಹ, KRS ದಾಖಲೆ

ಪ್ರವಾಸಿತಾಣಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಪರಿಣಾಮ ಪ್ರಸ್ತುತ ನೂತನ ವರ್ಷದ ಸಂದರ್ಭದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ಸವಾರರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಮುಖವಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಮಾತ್ರ 15 ಪ್ರಕರಣ ದಾಖಲಾಗಿದ್ದು, ಉಳಿದಂತೆ ನೂತನ ವರ್ಷ ಶಾಂತಿಯುತವಾಗಿ ಆಹ್ವಾನಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿ ಶಂಕರ್ ತಿಳಿಸಿದ್ದಾರೆ.

-ಅಶ್ವತ್ಥನಾರಾಯಣ ಎಲ್