ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಮಿಕ ಇಲಾಖೆ ನಿರೀಕ್ಷಕರೊಬ್ಬರು ಲೋಕ ದಾಳಿಯಾದ ವೇಳೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಚಾಮರಾಜನಗರ (ಮಾ.5) : ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಮಿಕ ಇಲಾಖೆ ನಿರೀಕ್ಷಕರೊಬ್ಬರು ಲೋಕ ದಾಳಿಯಾದ ವೇಳೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಕಾರ್ಮಿಕ ಇಲಾಖೆ(Labour ddepertment)ಯ ನಿರೀಕ್ಷಕ ಚಂದ್ರು ಎಂಬವರು ಪರಾರಿಯಾಗಿದ್ದಾರೆ. ಹನೂರು ತಾಲೂಕಿನ ರಾಮಾಪುರ ಗ್ರಾಮ(Ramapur village)ದ ಕಬ್ಬಿಣದ ಅಂಗಡಿ ವ್ಯಾಪಾರಿ ಲಕ್ಷ್ಮಣ್‌ ಇಲಾಖೆಯಿಂದ ಅನುಮತಿ ಪಡೆಯಲು ಅರ್ಜಿ ಹಾಕಿದ ವೇಳೆ ಕಾರ್ಮಿಕ ಇಲಾಖೆಯ ನಿರೀಕ್ಷಕ ಚಂದ್ರು 5 ಸಾವಿರ ರು.ಗೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಒಂದು ಸಾವಿರ ಅಡ್ವಾನ್ಸ್‌ ಪಡೆದದ್ದರು. ಅದೇ ಗ್ರಾಮದ ಪೈಪ್‌ ಮತ್ತು ಇನ್ನಿತರ ವ್ಯಾಪಾರಿ ದಗ್ಲರಾಮ್‌ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆಯಲು ಹೋದ ವೇಳೆ 6 ಸಾವಿರ ಲಂಚ ಕೇಳಿದ್ದು ಇದರಲ್ಲಿ 3 ಸಾವಿರ ಮೊದಲನೇ ಕಂತು ಕೊಟ್ಟಿದ್ದರು.

ಇಬ್ಬರು ವ್ಯಾಪಾರಿಗಳು ಈ ಲಂಚದಿಂದ ಬೇಸತ್ತು ಲೋಕಾಯುಕ್ತರಿಗೆ(Karnataka Lokayukta) ದೂರು ಕೊಟ್ಟಿದ್ದರು. ದೂರು ಪಡೆದ ಲೋಕಾಯುಕ್ತರು ಶುಕ್ರವಾರ ಸಂಜೆ ದಾಳಿ ನಡೆಸಿದ ವೇಳೆ ಫೈಲ್‌ ನಲ್ಲಿ ಹಣ ಇಡು ಎಂದು ಚಂದ್ರು ಹೇಳಿದ್ದಾರೆ. ಬಳಿಕ, ಲಂಚದ ಹಣ ಇಟ್ಟಬಳಿಕ ಚಂದ್ರು ಹೊರ ಹೋಗಿದ್ದು ಮಧ್ಯವರ್ತಿ ಸಾಗರ್‌ ಎಂಬಾತ ಫೈಲ್‌ನಿಂದ ಹಣ ಎತ್ತಿಕೊಂಡಿದ್ದಾನೆ. ಇದಾದ ಬಳಿಕ ಲೋಕಾ ದಾಳಿಯಾಗುತ್ತಿದ್ದಂತೆ ಚಂದ್ರು ಪರಾರಿಯಾಗಿದ್ದು ಸಾಗರ್‌ ನನ್ನು ಲೋಕಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಗ ಪ್ರಶಾಂತ್‌ 40 ಲಕ್ಷ ಸಮೇತ ಲೋಕಾ ಬಲೆಗೆ: BWSSB ಚೀಫ್‌ ಅಕೌಂಟೆಂಟ್‌ ಆಗಿ ಸೇವೆ