40 ಲಕ್ಷ ಸಮೇತ ಲೋಕಾಯುಕ್ತ ಬಲೆಗೆಬಿದ್ದ BWSSB ಚೀಫ್ ಅಕೌಂಟೆಂಟ್ ಪ್ರಶಾಂತ್: ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಗ
ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಅಧ್ಯಕ್ಷ ಚನ್ನಗಿರಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಮಾಡಾಳ್ ಅವರ ಪುತ್ರ ಬಿಡಬ್ಲ್ಯೂಎಸ್‌ಎಸ್‌ಬಿ ಚೀಫ್ ಅಕೌಂಟೆಂಟ್ ಪ್ರಶಾಂತ್ ಮಾಡಾಳ್40 ಲಕ್ಷ ರೂ. ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು (ಮಾ.02): ಬೆಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚೀಫ್ ಅಕೌಂಟೆಂಟ್ ಪ್ರಶಾಂತ್ ಮಾಡಾಳ್ ಅವರು ಕಂತೆ, ಕಂತೆ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬರೋಬ್ಬರು 40 ಲಕ್ಷ ರೂ. ಹಣದೊಂದಿಗೆ ಶಾಸಕ ಮಾಡಳ್ ವಿರೂಪಾಕ್ಷ ಪುತ್ರ ಪ್ರಶಾಂತ್ ಲೋಕಾಯುಕ್ತ ಟ್ರ್ಯಾಪ್ ಆಗಿದ್ದಾರೆ.
ರಾಜ್ಯ ಸರ್ಕಾರವನ್ನು ಶೇ.40 ಭ್ರಷ್ಟಾಚಾರ ಸರ್ಕಾರ ಎಂದು ಹೇಳಲಾಗುತ್ತದೆ. ಇಷ್ಟೆಲ್ಲಾ ಸರ್ಕಾರದ ಮೇಲೆ ಆರೋಪ ಬರುತ್ತಿದ್ದರೂ ಸರ್ಕಾರಿ ಅಧಿಕಾರಿಗಳು ಲಕ್ಷ, ಲಕ್ಷ ಹಣವನ್ನು ಪಡೆಯುವಾಗ ಲೋಕಾಯುಕ್ತತರ ಬಲೆಗೆ ಬಿದ್ದಿದ್ದಾರೆ. ಶಾಸಕ ಮಾಡಳ್ ವಿರೂಪಾಕ್ಷ ಪುತ್ರ ಪ್ರಶಾಂತ್ ವಿರುಪಾಕ್ಷಪ್ಪ ಅವರು ಬಿಡಬ್ಲ್ಯೂಎಸ್‌ಬಿಯಲ್ಲಿ ಚೀಫ್ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಡಳಿಯ ಒಂದು ಟೆಂಡರ್ ವಿಚಾರವಾಗಿ 81 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅದರಲ್ಲಿ 40 ಲಕ್ಷ ರೂ. ಹಣವನ್ನು ತಮ್ಮ ಖಾಸಗಿ ಕಚೇರಿಯಲ್ಲಿ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು: ಪೌತಿ ಖಾತೆಗೆ ಲಂಚ, ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಕೆಎಸ್‌ಡಿಎಲ್ ಅಧ್ಯಕ್ಷರ ಪರವಾಗಿ ಲಂಚ ಸ್ವೀಕಾರ: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷ ವಿರುಪಾಕ್ಷಪ್ಪ ಮಾಡಾಳ್ ಪರವಾಗಿ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಪ್ರಶಾಂತ್ ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನು ಈ ಪ್ರಶಾಂತ್ ಶಾಸಕ ಮಾಡಳ್ ವಿರೂಪಾಕ್ಷ ಪುತ್ರ ಆಗಿದ್ದು, ತಮ್ಮ ತಂದೆಯ ಪರವಾಗಿ ಟೆಂಡರ್‌ನ ಹಣವನ್ನು ಪಡೆಯುತ್ತಿರುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸುಮಾರು 40 ಲಕ್ಷ ರೂ.ಗಿಂತ ಹೆಚ್ಚು ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.
ಶಾಸಕರ ಖಾಸಗಿ ಕಚೇರಿ ಎಂ,ಸ್ಟುಡಿಯೋದಲ್ಲಿ ದಾಳಿ: ಎಮ್ ಸ್ಟುಡಿಯೋ ವೊಂದರಲ್ಲಿ ಲೋಕಾ ಬಲೆಗೆ ಬಿದ್ದುರುವ ಪ್ರಶಾಂತ್ ಅವರು, ಟೆಂಡರ್ ಕೊಡಿಸುವ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 80 ಲಕ್ಷಕ್ಕೂ ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಶಾಸಕ ಮಾಡಳ ವಿರೂಪಾಕ್ಷಪ್ಪ ಕಚೇರಿಯಲ್ಲಿ ಪ್ರಶಾಂತ್ ಹಣ ಎಣಿಸುತ್ತಿದ್ದರು. ಲೋಕಾಯುಕ್ತ ಐಜಿಪಿ ಸುಬ್ರಮಣೇಶ್ವರ್ ರಾವ್ ಎಂ.ಸ್ಟುಡಿಯೋಗೆ ಅಗಮಿಸಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟು 1.62 ಕೋಟಿ ರೂ. ಸಮೇತ ಲೋಕಾಯುಕ್ತರ ಬಲೆಗೆ: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಜಲಮಂಡಳಿ ಕಚೇರಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಕುಳಿತು ಸರ್ಕಾರಿ ಸಂಬಳವನ್ನು ಪಡೆಯುತ್ತಾರೆ. ಆದರೆ, ಸಂಜೆಯ ವೇಳೆ ತಮ್ಮ ತಂದೆಯ ಖಾಸಗಿ ಕಚೇರಿ ಎಂ.ಸ್ಟುಡಿಯೋದಲ್ಲಿ ಕುಳಿತು ವ್ಯವಹಾರ ನಡೆಸುತ್ತಿದ್ದರು. ಎರಡೂ ಕಡೆಗೂ ಹಣದ ಲೂಟಿ ಹೊಡೆಯುತ್ತಿದ್ದರು. ಇನ್ನು ಲೋಕಾಯುಕ್ತ ದಾಳಿಯ ವೇಳೆ 40 ಲಕ್ಷ ರೂ. ಪಡೆಯುತ್ತಿರುವುದು ಒಂದು ಕಡೆಯಾದರೆ, ಇಡೀ ಕಚೇರಿಯ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಮಾಡಿದಾಗ ಬರೋಬ್ಬರಿ 1.62 ಕೋಟಿ ರೂ. ನಗದು ಹಣ ಲಭ್ಯವಾಗಿದೆ.
ಯಾದಗಿರಿ: ಅನಪುರ ವಾಂತಿಬೇಧಿ ಪ್ರಕರಣ : ಲೋಕಾಯುಕ್ತ ತನಿಖೆ
ಲೋಕಾಯುಕ್ತ ಇತಿಹಾಸದಲ್ಲಿ ಅತಿಹೆಚ್ಚಿನ ನಗದು ಸಮೇತ ದಾಳಿ: ಇನ್ನು 1.62 ಕೋಟಿ ರೂ. ನಗದು ಹಣದ ಸಮೇತವಾಗಿ ಬಿಡಬ್ಲ್ಯೂಎಸ್‌ಎಸ್‌ಬಿ ಚೀಫ್ ಅಕೌಂಟೆಂಟ್ ಪ್ರಶಾಂತ್ ಬಲೆಗೆ ಬಿದ್ದಿರುವುದು ಕರ್ನಾಟಕದಲ್ಲಿ ಲೋಕಾಯುಕ್ತ ಇಲಾಖೆ ಜಾರಿಗೆ ಬಂದ ದಿನದಿಂದ ಈವರೆಗಿನ ಅತ್ಯಧಿಕ ನಗದು ಆಗಿದೆ. ಇನ್ನು ಈ ಹಿಂದೆ ಜಾರಿಯಲ್ಲಿದ್ದ ಎಸಿಬಿ ಇಲಾಖೆಯು 5 ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಮಡಿತ್ತು. ಆದರೆ, ಎಸಿಬಿ ಸರ್ಕಾರ ಹೇಳಿದಂತೆ ಕೇಳುವ ಇಲಾಖೆ ಎಮದು ಹೇಳಲಾಗುತ್ತಿತ್ತು. ಈಗ ಲೋಕಾಯುಕ್ತ ಇಲಾಖೆ ಸ್ವತಂತ್ರ ಇಲಾಖೆಯಾಗಿದ್ದು, ಈಗ ದೊಡ್ಡ ಮಟ್ಟದ ಕಾರ್ಯಾಚರಣೆಗೆ ಮುಂದಾಗಿದೆ.