ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುಜಾವರ್ ಕ್ಯಾಂಪ್‌ನಲ್ಲಿ ಕಿಡಿಗೇಡಿಗಳು ಹಲವು ಮನೆಗಳ ಮುಂದೆ ಮಂಡಲ, ಅರಿಶಿನ-ಕುಂಕುಮ ಹಾಗೂ ನಿಂಬೆಹಣ್ಣು ಇಟ್ಟು ವಾಮಾಚಾರ ನಡೆಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ಕೊಪ್ಪಳ (ಜು.9): ಮನೆ ಮುಂದೆ ಮಂಡಲ ಹಾಕಿ ಅರಿಶಿನ ಕುಂಕುಮ,ನಿಂಬೆ ಹಣ್ಣು ಇಟ್ಟು ಕಿಡಿಗೇಡಿಗಳು ವಾಮಾಚಾರ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮುಜಾವರ್ ಕ್ಯಾಂಪ್‌ನಲ್ಲಿನ ಹಲವು ಮನೆಗಳ ಮುಂದೆ ನಡೆದಿದ್ದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ನಿಂಬೆ ಹಣ್ಣು ಅರಿಸಿನ ಕಂಡು ಭಯಬಿದ್ದ ಜನ:
ಮಂಡಲ ಹಾಕಿ, ಅರಿಶಿನ-ಕುಂಕುಮ ಎರಚಿ, ನಿಂಬೆಹಣ್ಣುಗಳನ್ನು ಇಟ್ಟಿರುವ ದೃಶ್ಯಗಳು ಒಂದು ಮನೆಗಲ್ಲ, ದಾರಿಯುದ್ಧಕ್ಕೂ ಈ ರೀತಿ ವಾಮಾಚಾರ ಮಾಡಿರುವ ಕಿಡಿಗಳು. ಇದರಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದಾರಿಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ.
ಸ್ಥಳೀಯರು ಹೇಳುವಂತೆ, ಈ ಕೃತ್ಯ ಯಾರು ಮಾಡುತ್ತಿದ್ದರೋ, ಯಾಕೆ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಕೆಲ ದಿನಗಳಿಂದ ನಿರಂತರವಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದರಿಂದ ಇಲ್ಲಿನ ಜನ ಭಯಿದಿಂದ ಜೀವನ ನಡೆಸುವಂತಾಗಿದೆ ಆಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.
ಕಿಡಿಗೇಡಿಗಳ ಕೃತ್ಯವೋ? ಭಯ ಹುಟ್ಟಿಸೋ ಪ್ರಯತ್ನವೋ?
ಮೇಲ್ನೋಟಕ್ಕೆ ಇದು ಸ್ಥಳೀಯರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಈ ರೀತಿ ವಾಮಾಚಾರ ಮಾಡಿರುವ ಅನುಮಾನಗಳಿವೆ. ಇಂಥ ಕೃತ್ಯ ಮಾಡಿದವರನ್ನ ಪೊಲೀಸರು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.


